ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP) ರಾಜ್ಯಾಧ್ಯಕ್ಷ (State President) ಆಯ್ಕೆ ಸಂಬಂಧ ಒಂದಷ್ಟು ಪೂರಕ ಬೆಳವಣಿಗೆಗಳು ಚುರುಕು ಪಡೆದುಕೊಂಡಿವೆ. ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿ (C.T.Ravi) ಹೆಸರು ಕೈಬಿಟ್ಟಿರುವ ವರಿಷ್ಠರು, ಅವರಿಗೆ ಸೋಮವಾರ ದೆಹಲಿಗೆ (Delhi) ಬುಲಾವ್ ಕೊಟ್ಟಿರೋದು ಕುತೂಹಲ ಮೂಡಿಸಿದೆ.
ಈ ಮಧ್ಯೆ ಭಾನುವಾರ ಬೆಳಗ್ಗೆ ಆರ್‌ಎಸ್‌ಎಸ್ (RSS) ಮುಖಂಡರನ್ನು ಸಿ.ಟಿ ರವಿ ಭೇಟಿ ಮಾಡಿರುವುದು ಈ ನಿಟ್ಟಿನಲ್ಲಿ ಇನ್ನಷ್ಟು ಪುಷ್ಠಿ ಕೊಟ್ಟಿದೆ. ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಮೇಲೆ ಗಮನ ಹರಿಸುವ ಲಕ್ಷಣ ಕಾಣಿಸುತ್ತಿದೆ. ರಾಜ್ಯ ಬಿಜೆಪಿಗೆ ಮುಂದಿನ ಸಮರ್ಥ ಸಾರಥಿಯ ಆಯ್ಕೆಗೆ ಹೈಕಮಾಂಡ್ ಮುಂದಾಗಿದೆ. ಈ ನಿಟ್ಟಿನಲ್ಲಿ ಒಂದಷ್ಟು ಸುಳಿವುಗಳು ಸಿಗುತ್ತಿದ್ದು, ಪೂರಕ ವಿದ್ಯಮಾನಗಳು ನಡೆಯುತ್ತಿವೆ. ಮುಂದಿನ ಬಿಜೆಪಿ ಸಾರಥಿಯಾಗಿ ಮಾಜಿ ಶಾಸಕ ಸಿ.ಟಿ ರವಿ ಹೆಸರು ಮುಂಚೂಣಿಯಲ್ಲಿದೆ. ಇದನ್ನೂ ಓದಿ: ಸರ್ಕಾರದಿಂದ ವರ್ಗಾವಣೆ ದಂಧೆ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ: ಬೊಮ್ಮಾಯಿ
Advertisement
Advertisement
ಶನಿವಾರವಷ್ಟೇ ಅವರ ಹೆಸರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೊಕ್ ಕೊಟ್ಟಿರೋದು ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಟಿ ರವಿ, ತಾವೀಗ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಷ್ಟೇ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲದಿದ್ದರೂ ವರಿಷ್ಠರು ಕೊಡುವ ಯಾವುದೇ ಜವಾಬ್ದಾರಿ ನಿಭಾಯಿಸುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದ ಶಾಸಕ ಪ್ರದೀಪ್ ಈಶ್ವರ್
Advertisement
ಸೋಮವಾರ ದೆಹಲಿಗೆ ಬರುವಂತೆ ಸಿ.ಟಿ ರವಿಗೆ ಹೈಕಮಾಂಡ್ ನಾಯಕರು ಬುಲಾವ್ ಕೊಟ್ಟಿದ್ದಾರೆ. ಸೋಮವಾರ ದೆಹಲಿಯಲ್ಲಿ ವರಿಷ್ಠರ ಭೇಟಿ ಮಾಡಿ ಸಿ.ಟಿ ರವಿ ಮಾತುಕತೆ ನಡೆಸಲಿದ್ದಾರೆ. ಇನ್ನು ಇದೇ ವೇಳೆ ಭಾನುವಾರ ಬೆಳಗ್ಗೆ ಸಿ.ಟಿ ರವಿ ಬೆಂಗಳೂರಿನಲ್ಲಿ ಹಿರಿಯ ಆರ್‌ಎಸ್‌ಎಸ್ ಮುಖಂಡರನ್ನೂ ಭೇಟಿ ಮಾಡಿ ಮಾತನಾಡಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ನನ್ನ ಆತ್ಮಗೌರವಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ – ಬಿ.ಆರ್ ಪಾಟೀಲ್
Advertisement
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಮತ್ತು ವಿಧಾನಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಲಿಂಗಾಯತ ಸಮೀಕರಣದ ಜೊತೆಗೆ ಎರಡೂ ಹುದ್ದೆಗಳಿಗೂ ಹಿಂದೂ ಫೈರ್ ಬ್ರ್ಯಾಂಡ್ ನಾಯಕರನ್ನೇ ನೇಮಕ ಮಾಡುವ ಲೆಕ್ಕಾಚಾರ ಇದೆ ಎನ್ನಲಾಗಿದೆ. ಆದರೆ ಸದ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನಕ್ಕಷ್ಟೇ ನೇಮಕ ಆಗುತ್ತಾ ಅಥವಾ ಉಭಯ ಸದನಗಳ ವಿಪಕ್ಷ ನಾಯಕರ ಆಯ್ಕೆಯೂ ಫೈನಲ್ ಆಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಪ್ರವಾಹ ಬಂದ್ರೂ ವೀಡಿಯೋ ಸಂವಾದ ಬಿಟ್ರೆ ಸಿಎಂ ಏನೂ ಮಾಡಿಲ್ಲ: ಬೊಮ್ಮಾಯಿ ಕಿಡಿ
Web Stories