ಬೆಂಗಳೂರು: ಏರ್ ಸ್ಟ್ರೈಕ್ ಬಳಿಕ ಪ್ರಧಾನಿ ಮೋದಿ ಜನಪ್ರಿಯತೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟ 13 ಸ್ಥಾನ ಪಡೆದರೆ ಹಾಗೂ ಬಿಜೆಪಿ 15 ಸ್ಥಾನಗಳು ಪಡೆಯಲಿದೆ ಎಂದು ಟೈಮ್ಸ್ ನೌ ವಾಹಿನಿಯ ಸಮೀಕ್ಷೆ ತಿಳಿಸಿದೆ.
ಏರ್ ಸರ್ಜಿಕಲ್ ಸ್ಟ್ರೈಕ್ ಬಳಿಕ ನಡೆಸಲಾದ ಸಮೀಕ್ಷೆ ಇದಾಗಿದ್ದು, ಟೈಮ್ಸ್ ನೌ ವಾಹಿನಿ ಇದೇ ಜನವರಿಯ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 14 ಮತ್ತು ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ 14 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿತ್ತು. ಆದರೆ ಈ ಸಮೀಕ್ಷೆಯಲ್ಲಿ ಬಿಜೆಪಿ ಒಂದು ಸ್ಥಾನ ಏರಿಕೆ ಕಂಡಿದೆ.
Advertisement
#2019OpinionPoll: Jai Mrug, Psephologist & @RShivshankar take you through the vote & seat share projection for Karnataka. | TIMES NOW-VMR poll tracker. pic.twitter.com/fB3Nt2Gu3A
— TIMES NOW (@TimesNow) March 18, 2019
Advertisement
ಕರ್ನಾಟಕದಲ್ಲಿ ಎನ್‍ಡಿಎ/ಬಿಜೆಪಿ 44.30% ವೋಟ್ ಶೇರ್ ಪಡೆಯಲಿದ್ದು, ಯುಪಿಎ ಮೈತ್ರಿಕೂಟ 43.50% ವೋಟ್ ಶೇರ್ ಪಡೆಯಲಿದೆ ಎಂದು ಹೇಳಿದೆ. ಮೈತ್ರಿ ಸರ್ಕಾರದ ರಚನೆ ಆದರೂ ಕೂಡ ರಾಜ್ಯದಲ್ಲಿ ಮೈತ್ರಿ ಆದ ಬಳಿಕ ಜೆಡಿಎಸ್ ನಿಂದ ಸಿಗುವ ಎಲ್ಲಾ ಮತಗಳು ಕೂಡ ಕಾಂಗ್ರೆಸ್‍ಗೆ ಲಭಿಸುವುದಿಲ್ಲ ಎಂಬ ಸೂಚನೆಯನ್ನು ಸಮೀಕ್ಷೆ ನೀಡಿದೆ. ಇದನ್ನು ಓದಿ:ಕರ್ನಾಟಕದಲ್ಲಿ ಕಾಂಗ್ರೆಸ್+ಜೆಡಿಎಸ್, ಬಿಜೆಪಿಗೆ ತಲಾ 14 ಸ್ಥಾನ!
Advertisement
2014ರ ಚುನಾವಣೆಯಲ್ಲಿ ಬಿಜೆಪಿ 17 ರಲ್ಲಿ ಜಯ ಗಳಿಸಿದ್ದರೆ, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
Advertisement
#2019OpinionPoll: Jai Mrug, Psephologist & @RShivshankar take you through the seat share projection for Telangana. | TIMES NOW-VMR poll tracker. pic.twitter.com/79g3ap0SEg
— TIMES NOW (@TimesNow) March 18, 2019
ತೆಲಂಗಾಣದಲ್ಲಿ ಇರುವ 17 ಸ್ಥಾನಗಳ ಪೈಕಿ ಟಿಆರ್ ಎಸ್ 13, ಎನ್‍ಡಿಎ 2, ಯುಪಿಎ 1 ಹಾಗೂ ಇತರೇ 1 ಸ್ಥಾನ ಪಡೆಯಲಿದೆ. ಆಂಧ್ರಪ್ರದೇಶದ 25 ಸ್ಥಾನಗಳ ಪೈಕಿ ವೈಎಸ್‍ಆರ್‍ಸಿಪಿ 22, ಆಡಳಿತ ರೂಡ ಟಿಡಿಪಿ ಪಕ್ಷಕ್ಕೆ 3 ಸ್ಥಾನಗಳು ಮಾತ್ರ ಲಭ್ಯವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಕೇರಳದ 20 ಸ್ಥಾನಗಳಲ್ಲಿ ಯುಡಿಎಫ್ 16, ಎನ್‍ಡಿಎ 1 ಮತ್ತು ಎಲ್‍ಡಿಎಫ್ 3 ಸ್ಥಾನಗಳು ಪಡೆದರೆ, ತಮಿಳುನಾಡಿನಲ್ಲಿ 39 ಸ್ಥಾನಗಳ ಪೈಕಿ ಯುಪಿಎ 34, ಎನ್‍ಡಿಎ 5 ಸ್ಥಾನಗಳನ್ನು ಪಡೆದುಕೊಳ್ಳಲಿದೆ.
#2019OpinionPoll: Jai Mrug, Psephologist & @RShivshankar take you through the seat share projection for Andhra Pradesh. | TIMES NOW-VMR poll tracker. pic.twitter.com/turtuZtElq
— TIMES NOW (@TimesNow) March 18, 2019