Monday, 19th August 2019

ಕರ್ನಾಟಕದಲ್ಲಿ ಕಾಂಗ್ರೆಸ್+ಜೆಡಿಎಸ್, ಬಿಜೆಪಿಗೆ ತಲಾ 14 ಸ್ಥಾನ!

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಮತ್ತು ಬಿಜೆಪಿ ತಲಾ 14 ಸ್ಥಾನಗಳನ್ನು ಗೆಲ್ಲಲಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.

ಟೈಮ್ಸ್ ನೌ, ವಿಎಂಆರ್ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ಮತ್ತು ಬಿಜೆಪಿಗೆ ತಲಾ 14 ಸ್ಥಾನಗಳು ಲಭಿಸಿದೆ. ಒಟ್ಟು 28 ಕ್ಷೇತ್ರಗಳು ಕರ್ನಾಟಕದಲ್ಲಿದ್ದು, 2014ರ ಚುನಾವಣೆಯಲ್ಲಿ ಬಿಜೆಪಿ 17 ರಲ್ಲಿ ಜಯಗಳಿಸಿದ್ದರೆ, ಕಾಂಗ್ರೆಸ್ 9 ಜೆಡಿಎಸ್ 2 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ ಯುಪಿಎ 2, ಎನ್‍ಡಿಎ 27, ಎಸ್‍ಪಿ+ ಬಿಎಸ್‍ಪಿ ಮೈತ್ರಿಕೂಟ 51 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 71 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ತಮಿಳುನಾಡಿನ 39 ಕ್ಷೇತ್ರಗಳ ಪೈಕಿ ಯುಪಿಎ ಮೈತ್ರಿಕೂಟ 35 ರಲ್ಲಿ ಜಯಗಳಿಸಬಹುದು. ಕೇರಳದ 20 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 16 ರಲ್ಲಿ ಜಯಗಳಿಸಿದರೆ ಬಿಜೆಪಿ ಈ ಬಾರಿ ತನ್ನ ಖಾತೆಯನ್ನು ತೆರೆಯಬಹುದು ಎಂದು ಹೇಳಿದೆ.

ತೆಲಂಗಾಣದ ಒಟ್ಟು 17 ಕ್ಷೇತ್ರಗಳಲ್ಲಿ ಟಿಆರ್‍ಎಸ್ 10 ಸ್ಥಾನ ಪಡೆದುಕೊಳ್ಳಬಹುದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಒಟ್ಟು 42 ಕ್ಷೇತ್ರಗಳ ಪೈಕಿ 32 ರಲ್ಲಿ ಜಯಗಳಿಸಬಹುದು. ಕಳೆದ ಬಾರಿ 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಬಿಜೆಪಿ ಈ ಬಾರಿ 9ರಲ್ಲಿ ಜಯಗಳಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *