ಚುನಾವಣಾ ಪ್ರಣಾಳಿಕೆ ರಾಜಕೀಯ ಪಕ್ಷಗಳಿಗೆ ಬೈಬಲ್ ಇದ್ದ ಹಾಗೆ: ಹೆಚ್‌ಸಿ ಮಹದೇವಪ್ಪ

Public TV
1 Min Read
HC MAHADEVAPPA

ಮೈಸೂರು: ಚುನಾವಣಾ ಪ್ರಣಾಳಿಕೆ ರಾಜಕೀಯ ಪಕ್ಷಗಳಿಗೆ ಬೈಬಲ್ ಇದ್ದ ಹಾಗೆ ಎಂದು ನೂತನ ಸಚಿವ ಹೆಚ್.ಸಿ.ಮಹದೇವಪ್ಪ (H.C.Mahadevappa) ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ (Mysuru) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೊಟ್ಟ ಭರವಸೆಗಳನ್ನು ಸಿದ್ದರಾಮಯ್ಯ (Siddaramaiah) ನೆರೆವೇರಿಸಿದ್ದಾರೆ. ನುಡಿದಂತೆ ನಡೆದಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ಇಲ್ಲದ ಭರವಸೆ ಸೇರಿದಂತೆ ರೈತರಿಗೆ ಸಾಕಷ್ಟು ಸಹಾಯ ಮಾಡಿದೆ. ಕಾಂಗ್ರೆಸ್ (Congress) ನುಡಿದಂತೆ ನಡೆಯುವ ಪಕ್ಷ. 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಅದರಿಂದ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ: ರಾಜಕೀಯದಲ್ಲಿ ತಾಳ್ಮೆ ಮುಖ್ಯ – ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನಿರಾಸೆಯಿಲ್ಲ: ಲಕ್ಷ್ಮಣ ಸವದಿ

ಬಿಜೆಪಿ (BJP) ಪ್ರತಿಯೊಬ್ಬರಿಗೆ 15 ಲಕ್ಷ ರೂ. ಹಾಗೂ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು. ಅದನ್ನು ನೆರವೇರಿಸಿಲ್ಲ. ನಾವು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿ (Guarantee Scheme) ಜಾರಿ ಮಾಡಿಯೇ ಮಾಡುತ್ತೇವೆ. ಜುಲೈನಲ್ಲಿ ಬಜೆಟ್ ಮಾಡುತ್ತೇವೆ. 5 ಗ್ಯಾರಂಟಿ ಕೊಡಲು ಎಲ್ಲಾ ಇಲಾಖೆಗಳಲ್ಲಿ ಹಣವನ್ನು ಹೊಂದಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನ ಹಾಗೇ ನಡೆದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮಹಿಳೆಯರಿಗೆ ಬಸ್ ಪಾಸ್ ಕೊಟ್ಟೇ ಕೊಡ್ತೇವೆ: ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ಬಿಜೆಪಿ ದುರಾಡಳಿತ ಭ್ರಷ್ಟಾಚಾರವನ್ನು ಸೋಲಿಸಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ನಮಗೆ ಬೆಂಬಲ ಕೊಟ್ಟ ಮತದಾರರು, ಲಕ್ಷಾಂತರ ಜನರು, ದಲಿತ ಮುಖಂಡರು ಹಾಗೂ ಬರಹಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಟಿ.ನರಸೀಪುರ ಕ್ಷೇತ್ರದ ಜನತೆಗೆ ವಿಶೇಷವಾದ ಧನ್ಯವಾದ ಸಲ್ಲಿಸುತ್ತೇನೆ. ಸರ್ಕಾರ ರಚನೆಯಾಗಿದೆ. ನಮ್ಮ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದಾರೆ. ರಾಜ್ಯದ ಹಣಕಾಸಿನ ಸ್ಥಿತಿ ಹದಗೆಟ್ಟಿದೆ. ರಾಜ್ಯದ ಆಡಳಿತ ಹಳಿ ತಪ್ಪಿದೆ. ಕಳೆದ ಮೂರು ವರ್ಷಗಳಿಂದ ಆಡಳಿತ ಯಂತ್ರ ಕುಸಿದಿದೆ ಎಂದು ಹೇಳಿದರು. ಇದನ್ನೂ ಓದಿ: ಗಾಬರಿ ಬೇಡ, ಊಹಾಪೋಹಗಳಿಗೆ ಕಿವಿಗೊಡಬೇಡಿ: ಡಿಕೆಶಿ

Share This Article