ನವದೆಹಲಿ: ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಂಚಿಕೊಂಡಿರುವ ಚುನಾವಣಾ ಬಾಂಡ್‌ಗಳ ಡೇಟಾವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ಮಾರ್ಚ್ 15ರ ಒಳಗಡೆ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಚುನಾವಣಾ ಆಯೋಗಕ್ಕೆ (Election Commission) ಸೂಚಿಸಿತ್ತು. ಆದರೆ ಚುನಾವಣಾ ಆಯೋಗ ಒಂದು ದಿನದ ಮೊದಲೇ ಎಸ್‌ಬಿಐ (SBI) ನೀಡಿದ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
Advertisement
Advertisement
ಚುನಾವಣಾ ಆಯೋಗ 2019ರ ಏಪ್ರಿಲ್ 12 ರಿಂದ 1 ಸಾವಿರ ರೂ. ನಿಂದ ಹಿಡಿದು 1 ಕೋಟಿ ರೂ. ಮೌಲ್ಯದ ಮುಖಬೆಲೆಯ ಚುನಾವಣಾ ಬಾಂಡ್‌ಗಳನ್ನು (Election Bond) ಯಾರು ಖರೀದಿಸಿದ್ದಾರೋ ಅವರ ವಿವರವನ್ನು ಪ್ರಕಟಿಸಿದೆ.
Advertisement
ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸುವವರಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಸೇರಿವೆ ಎಂದು ಡೇಟಾ ಬಹಿರಂಗಪಡಿಸಿದೆ. ಇದನ್ನೂ ಓದಿ: ಈಶ್ವರಪ್ಪ ಮಗನನ್ನು ಎಂಎಲ್‍ಸಿ ಮಾಡುವ ಚರ್ಚೆಯಾಗ್ತಿದೆ: ಬಿಎಸ್‍ವೈ
Advertisement