ಬೆಂಗಳೂರು: ಪುಡ್‍ಸ್ಟ್ರೀಟ್‍ಗೆ ಹೋದರೂ ಹೋಟೆಲ್‍ಗೆ ಹೋದ್ರೂ ನಾನ್‍ವೆಜ್ ಪ್ರೀಯರು ಮೊದಲು ಆರ್ಡರ್ ಮಾಡೋದು ಚಿಕನ್ (Chicken), ಎಗ್ ರೆಸಿಪಿ. ಆದರೆ ಬಾಡೂಟ ಪ್ರಿಯರಿಗೆ ಶಾಕ್ ಎದುರಾಗಿದ್ದು, ಮೊಟ್ಟೆ (Egg), ಚಿಕನ್ ಬೆಲೆ ಗಗನಕ್ಕೇರಿದೆ.
Advertisement
ಹೌದು. ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗತ್ತಿರೋದು ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತೊಂದೆಡೆ ಚಿಕನ್ ದರ ಸಹ ಹೆಚ್ಚಾಗಿದೆ. ಚಿಕನ್ ಬೆಲೆ ವಿಥ್ ಸ್ಕೀನ್ ಗೆ ಕೆ.ಜಿಗೆ 236 ರೂ. ಹಾಗೂ ಚಿಕನ್ ವಿಥ್ ಔಟ್ ಸ್ಕೀನ್ ಕೆ.ಜಿಗೆ 266 ರೂ. ಆಗಿದೆ. ಜೊತೆಗೆ ಮಟನ್ ರೇಟ್ ಸಹ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಹಾಗೆಯೇ ಒಂದು ಮೊಟ್ಟೆ ಬೆಲೆ 6 ರೂ. ರಿಂದ 7 ರೂ. ಆಗಿದೆ. ಬೇಸಿಗೆಯಾಗಿದ್ದರಿಂದ ಕೋಳಿಗಳು ಸಾಯುತ್ತಿವೆ. ಜೊತೆಗೆ ಆಂಧ್ರಪ್ರದೇಶಕ್ಕೆ ರಾಜ್ಯದಿಂದ ಹೆಚ್ಚು ರಫ್ತಾಗಿದೆ. ಹೀಗಾಗಿ ಅಭಾವ ಉಂಟಾಗಿದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಮೊಟ್ಟೆ, ಚಿಕನ್ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಅಂತಾ ವ್ಯಾಪಾರಿಗಳ ಮಾತಾಗಿದೆ.
Advertisement
Advertisement
ಬೆಲೆ ಏರಿಕೆ ಆಗಿರುವುದರಿಂದ ಮೊಟ್ಟೆಯಿಂದ ಮಾಡುವ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದ್ದು, ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ. ಆದರೂ ಒಂದು ಡಜನ್ ಮೊಟ್ಟೆ ತೆಗೆದುಕೊಳ್ಳುವ ಕಡೆ 6 ಮೊಟ್ಟೆ ತಗೊಳುತ್ತಾ ಇದ್ದೇವೆ. ಚಿಕನ್ ಸಹ ಕಡಿಮೆ ಕೊಳ್ಳತ್ತಾ ಇದ್ದೇವೆ. ಮಟನ್ ಸಹ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಬೆಲೆ ಕಡಿಮೆ ಆಗಬೇಕು ಅಂತಾ ನಾನ್ ವೆಜ್ ಪ್ರಿಯರ ಆಗ್ರಹವಾಗಿದೆ.
Advertisement
ಒಟ್ಟಿನಲ್ಲಿ ಶ್ರಾವಣಮಾಸ ಬಂದರೆ ಇನ್ನೂ ನಾನ್‍ವೆಜ್ ವ್ಯಾಪಾರಿಗಳಿಗೆ ಹೊಡೆತ ಬೀಳುತ್ತದೆ. ಸದ್ಯಕ್ಕೆ ನಾನ್ ವೆಜ್ ಪ್ರಿಯರ ಜೇಬನ್ನು ಮೊಟ್ಟೆ, ಚಿಕನ್ ಸುಡುತ್ತಿವೆ. ಇದನ್ನೂ ಓದಿ: ನೂರರ ಗಡಿ ದಾಟಿದ ಟೊಮೆಟೋ ಬೆಲೆ- ಗೃಹಿಣಿಯರ ಆಕ್ರೋಶ