ಬೆಂಗಳೂರು: ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ದರ ಏರಿಕೆಯಾಗಿದ್ದು (Price Hike), ಮುಂದಿನ ದಿನಗಳಲ್ಲಿ ಪಟ್ರೋಲ್‌ಗೂ ತೀವ್ರ ಅಭಾವ ಉಂಟಾಗಲಿದಿಯಾ? ಎನ್ನುವ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಪೆಟ್ರೋಲ್ ಸಂಗ್ರಹ ತಡೆಗೆ ತೈಲ ಕಂಪನಿಗಳು ಮುಂದಾಗಿವೆ.
ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆ ಭಾರತದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ ತಲಾ ಮೂರು ರೂಪಾಯಿ ದರ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಆತಂಕ ಶುರುವಾಗಿದೆ. ಹೀಗಾಗಿ ಪೆಟ್ರೋಲ್, ಡಿಸೇಲ್‌ನ್ನು ಅಕ್ರಮವಾಗಿ ಬಾಟಲಿ, ಕ್ಯಾನ್‌ಗಳಲ್ಲಿ ಸಂಗ್ರಹ ಮಾಡುವ ಸಾಧ್ಯತೆ ಇದೆ. ಹೀಗಾಗಿ ತೈಲ ಕಂಪನಿಗಳು, ಬಂಕ್ ಮಾಲೀಕರಿಗೆ ಬಾಟಲಿ, ಕ್ಯಾನ್‌ಗಳಿಗೆ ಪೆಟ್ರೋಲ್ ಹಾಕದಂತೆ ಸೂಚನೆ ಕೊಟ್ಟಿದ್ದಾರೆ. ಬಂಕ್ ಮಾಲೀಕರು ಪೆಟ್ರೋಲ್ ಬಂಕ್ ಬಳಿ ಬೋರ್ಡ್ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ‘ಗೋಲ್ಡ್’ ಮಾತು: ಒಂದು ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು? ಕಾನೂನು ಏನು ಹೇಳುತ್ತೆ?
ಕೆಲವು ಬಂಕ್‌ಗಳಿಗೆ ವಾಹನ ಸವಾರರು ಬಾಟಲ್‌ಗಳನ್ನು ತರುತ್ತಿದ್ದಾರೆ. ಆದರೆ ಬಂಕ್‌ನಲ್ಲಿ ಬಾಟಲಿಗಳಿಗೆ ಪೆಟ್ರೋಲ್ ತುಂಬಿಸದೇ ವಾಪಸ್ ಕಳುಹಿಸಿದ್ದಾರೆ. ಇನ್ನೂ ಕೆಲವೆಡೆ ಫ್ಯಾಕ್ಟರಿ, ಜನರೇಟರ್ ಇತರೆ ಕೆಲಸಗಳಿಗೆ ಪೆಟ್ರೋಲ್ ಬೇಕಾಗಿದ್ದರಿಂದ ಕ್ಯಾನ್‌ಗಳನ್ನು ತರುತ್ತಿದ್ದಾರೆ. ಅಂತಹವರಿಗೆ ಮಾತ್ರ ಬಂಕ್ ಸಿಬ್ಬಂಧಿ ಪೆಟ್ರೋಲ್ ಹಾಕುತ್ತಿದ್ದಾರೆ. ಈ ಮೂಲಕ ಅಕ್ರಮ ಪೆಟ್ರೋಲ್, ಡೀಸೆಲ್ ಸಂಗ್ರಹಕ್ಕೆ ಬಂಕ್ ಮಾಲೀಕರು ಕೂಡ ಕಂಪನಿಗಳಿಗೆ ಸಾಥ್ ನೀಡುತ್ತಿದ್ದಾರೆ.
ಪೆಟ್ರೋಲ್ ದರ ವಿವಿಧ ಹಂತಗಳಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದ ತಪ್ಪಿಸಿಕೊಳ್ಳಲು ಜನ ಹೆಚ್ಚುವರಿ ಪೆಟ್ರೋಲ್ ಖರೀದಿಗೆ ಮುಂದಾಗಿದ್ದಾರೆ. ಒಂದು ವೇಳೆ ಇನ್ನೊಂದು ಹಂತದಲ್ಲಿ ದರ ಏರಿಕೆಯಾದರೆ ವಾಹನ ಸವಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದನ್ನೂ ಓದಿ: 1 ಡಾಲರ್‌ಗೆ 96 ರೂ.; ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

