ಮುಂಬೈ: ಪತ್ರಾ ಚಾವ್ಲ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಬಂಧಿಸಿದ್ದಾರೆ.
1,034 ಕೋಟಿ ರೂ.ಗಳ ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾವತ್ ಅವರನ್ನು ಈ ಹಿಂದೆ ಎರಡು ಬಾರಿ ವಿಚಾರಣೆ ನಡೆಸಿದ್ದರು. ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಅಧಿವೇಶನವನ್ನು ಉಲ್ಲೇಖಿಸಿ ಹಿಂದಿನ ಸಮನ್ಸ್ ತಪ್ಪಿಸಿದ ನಂತರ ಸಂಜಯ್ ರಾವತ್ ಅವರನ್ನು ಜುಲೈ 27 ರಂದು ತನಿಖಾ ಸಂಸ್ಥೆಯು ಕರೆಸಿತ್ತು.
Advertisement
Mumbai: Police personnel deployed outside the residence of Shiv Sena leader Sanjay Raut. He has been detained by the ED after raids were conducted at his residence in connection with Patra Chawl land scam case pic.twitter.com/8iG2a49V6l
— ANI (@ANI) July 31, 2022
ಇಂದು ಬೆಳಗ್ಗೆ ಮುಂಬೈನ ಬಂಡಪ್ನಲ್ಲಿರುವ ರಾವತ್ ಅವರ ಮನೆಗೆ ತನಿಖಾ ಸಂಸ್ಥೆ ತಂಡವು ಸಿಆರ್ಪಿಎಫ್ ಅಧಿಕಾರಿಗಳ ಜೊತೆ ದಾಳಿ ನಡೆಸಿತ್ತು. ಇದೀಗ ರಾವತ್ ಅವರನ್ನು ಇಡಿ ಬಂಧಿಸಿದ್ದು, ಅವರ ನಿವಾಸದಿಂದ ಇಡಿ ಕಚೇರಿಗೆ ತೆರಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಕಾರಿನಲ್ಲಿ ಭಾರೀ ಪ್ರಮಾಣದ ನಗದು ಪತ್ತೆ- ಕಾಂಗ್ರೆಸ್ನಿಂದ ಮೂವರ ಶಾಸಕರ ಅಮಾನತು
Advertisement
Advertisement
ಜುಲೈ 1 ರಂದು ರಾವತ್ ಅವರನ್ನು ಸುಮಾರು 10 ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಲಾಗಿದೆ. ಏಪ್ರಿಲ್ನಲ್ಲಿ, ಜಾರಿ ನಿರ್ದೇಶನಾಲಯವು ತನ್ನ ತನಿಖೆಯ ಭಾಗವಾಗಿ ರಾವತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದನ್ನೂ ಓದಿ: ಪತ್ರಾ ಚಾವ್ಲ್ ಭೂ ಹಗರಣ: ಸಂಜಯ್ ರಾವತ್ ನಿವಾಸದ ಮೇಲೆ ಇಡಿ ದಾಳಿ