Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Punjab Economic Crisis | ವಿದ್ಯುತ್‌ ಸಬ್ಸಿಡಿ ರದ್ದುಗೊಳಿಸಿ ಪೆಟ್ರೋಲ್‌, ಡೀಸೆಲ್‌ ಜೊತೆ ಬಸ್‌ ಟಿಕೆಟ್‌ ದರ ಏರಿಸಿದ ಪಂಜಾಬ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | Punjab Economic Crisis | ವಿದ್ಯುತ್‌ ಸಬ್ಸಿಡಿ ರದ್ದುಗೊಳಿಸಿ ಪೆಟ್ರೋಲ್‌, ಡೀಸೆಲ್‌ ಜೊತೆ ಬಸ್‌ ಟಿಕೆಟ್‌ ದರ ಏರಿಸಿದ ಪಂಜಾಬ್‌

Latest

Punjab Economic Crisis | ವಿದ್ಯುತ್‌ ಸಬ್ಸಿಡಿ ರದ್ದುಗೊಳಿಸಿ ಪೆಟ್ರೋಲ್‌, ಡೀಸೆಲ್‌ ಜೊತೆ ಬಸ್‌ ಟಿಕೆಟ್‌ ದರ ಏರಿಸಿದ ಪಂಜಾಬ್‌

Public TV
Last updated: September 5, 2024 11:34 pm
Public TV
Share
2 Min Read
Bhagwant Mann
SHARE

ಚಂಡೀಗಢ: ಉಚಿತ ಯೋಜನೆಗಳನ್ನು (Free Scheme) ಘೋಷಣೆ ಮಾಡಿ ಆರ್ಥಿಕ ಸಂಕಷ್ಟಕ್ಕೆ (Economic Crisis) ಸಿಲುಕಿರುವ ಪಂಜಾಬ್‌ ಆಪ್‌ ಸರ್ಕಾರ ಪೆಟ್ರೋಲ್‌ (Petrol) ಮತ್ತು ಡಿಸೇಲ್‌ ಮೇಲೆ ವ್ಯಾಟ್‌ ಹೆಚ್ಚಿಸಿ ವಿದ್ಯುತ್‌ ಸಬ್ಸಿಡಿಯನ್ನು (Power Subsidy) ರದ್ದುಗೊಳಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (VAT) ಹೆಚ್ಚಳಕ್ಕೆ ಪಂಜಾಬ್ ಕ್ಯಾಬಿನೆಟ್ ಗುರುವಾರ ಅನುಮೋದನೆ ನೀಡಿದೆ. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ದರ 61 ಪೈಸೆ ಮತ್ತು ಡೀಸೆಲ್ ದರ 92 ಪೈಸೆ ಏರಿಕೆಯಾಗಲಿದೆ.

7 ಕಿಲೋವ್ಯಾಟ್ ವರೆಗಿನ ವಿದ್ಯುತ್‌ ಬಳಕೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ. ಇದರ ಜೊತೆ ಬಸ್ ಟಿಕೆಟ್‌ ದರ ಪ್ರತಿ ಕಿ.ಮೀ.ಗೆ 23 ಪೈಸೆ ಏರಿಕೆ ಮಾಡಲಾಗಿದೆ.

PETROL

ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟದ ಚರ್ಚೆಯ ನಂತರ, ರಾಜ್ಯ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ವ್ಯಾಟ್ ಏರಿಸುವ ಮೂಲಕ ರಾಜ್ಯ ಹೆಚ್ಚುವರಿ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ವಿದ್ಯುತ್‌ ಸಬ್ಸಿಡಿಯನ್ನು ರದ್ದುಗೊಳಿಸಿದ ನಿರ್ಧಾರಗಳನ್ನು ಸಮರ್ಥಿಸಿಕೊಂಡ ಚೀಮಾ ಇದರಿಂದ 1,500-1700 ಕೋಟಿ ರೂ. ಉಳಿಸಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಸಾಲವೆಂಬ ಪರ್ವತಗಳ ಸುಳಿಯಲ್ಲಿ ಹಿಮಾಚಲ – ಆರ್ಥಿಕ ಅಪಾಯದಲ್ಲಿರುವ ರಾಜ್ಯಗಳು ಯಾವುವು? ತಜ್ಞರು ಸೂಚಿಸುವ ಪರಿಹಾರವೇನು?

ವಾರ್ಷಿಕವಾಗಿ ಡೀಸೆಲ್ ಮಾರಾಟದಿಂದ 395 ಕೋಟಿ ರೂ. ಮತ್ತು ಪೆಟ್ರೋಲ್‌ನಿಂದ 150 ಕೋಟಿ ರೂ. ಹೆಚ್ಚುವರಿಯಾಗಿ ಸಂಗ್ರಹಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

Electricity

ಕಾಂಗ್ರೆಸ್‌ ಚನ್ನಿ ಸರ್ಕಾರ ಘೋಷಣೆ ಮಾಡಿದ ಉಚಿತ ಭರವಸೆಗಳಿಂದ ರಾಜ್ಯಕ್ಕೆ ಸಂಕಷ್ಟ ಎದುರಾಗಿದೆ ಆಪ್‌ ಸರ್ಕಾರ ತಿಳಿಸಿದೆ. ಚನ್ನಿ ಸರ್ಕಾರ 2021ರಲ್ಲಿ 7 ಕಿಲೋವ್ಯಾಟ್‌ವರೆಗಿನ ಗೃಹ ಬಳಕೆಯ ವಿದ್ಯುತ್‌ ಶುಲ್ಕವನ್ನು ಪ್ರತಿ ಯುನಿಟ್‌ಗೆ 3 ರೂ.ಗೆ ಇಳಿಕೆ ಮಾಡಿತ್ತು. 7 ಕಿಲೋ ವ್ಯಾಟ್‌ವರೆಗೂ ಇದರ ಲಾಭ ಪಡೆಯಲು ಅವಕಾಶವಿತ್ತು.

ಆಮ್ ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಸರ್ಕಾರವು ಗೃಹ ಬಳಕೆದಾರರಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು ಈ ಯೋಜನೆ ಮುಂದುವರಿಯಲಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಸಬ್ಸಿಡಿ ಮಾತ್ರ ಈಗ ರದ್ದುಗೊಂಡಿದೆ.

 

ಹಿಮಾಚಲದಂತೆ ಪಂಜಾಬ್‌ ಉಚಿತ ಯೋಜನೆಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸೆ.4 ರವರೆಗೆ ಸರ್ಕಾರಿ ನೌಕರರಿಗೆ ಸಂಬಳ ಪಾವತಿಯಾಗಿರಲಿಲ್ಲ. ಮಾರ್ಚ್‌ನಲ್ಲಿ ಮಂಡನೆಯಾದ ಬಜೆಟ್‌ ಭಾಷಣದಲ್ಲಿ ಹರ್ಪಾಲ್ ಚೀಮಾ ಅವರು 2024-25 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪಂಜಾಬ್‌ನ ಸಾಲವು 3.74 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ತಿಳಿಸಿದ್ದರು.

ಆಪ್‌ ಸರ್ಕಾರ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಮೂರನೇ ಬಾರಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಏರಿಕೆ ಮಾಡಿದೆ.

 

TAGGED:dieselpetrolPower Subsidypunjabಡೀಸೆಲ್ಪಂಜಾಬ್ಪೆಟ್ರೋಲ್ವಿದ್ಯುತ್‌ ಸಬ್ಸಿಡಿ
Share This Article
Facebook Whatsapp Whatsapp Telegram

Cinema news

Yash Radhika
ನನ್ನೆಲ್ಲ ಪ್ರಶ್ನೆಗೂ ನೀನೇ ಉತ್ತರ – ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಾಕಿಂಗ್‌ ಜೋಡಿ
Cinema Latest Sandalwood Top Stories
Rajinikanth Padayappa 2
ಪಡೆಯಪ್ಪ ಪಾರ್ಟ್-2 ಬಗ್ಗೆ ತಲೈವಾ ಹೇಳಿದ್ದೇನು?
Cinema Latest Top Stories
V. Shantaram Biopic Tamannaah Bhatia
ನಟಿ ಜಯಶ್ರೀಯಾದ ತಮನ್ನಾ ಭಾಟಿಯಾ
Cinema Latest Top Stories
Toxic teaser yash
ಟಾಕ್ಸಿಕ್‌ ಬಿಡುಗಡೆಯಾಗುವ ಸಮಯದಲ್ಲೇ ಬರಲಿದೆ ಐದು ಬಿಗ್‌ ಬಜೆಟ್‌ ಸಿನಿಮಾಗಳು!
Cinema Latest Sandalwood

You Might Also Like

CLP Meeting
Belgaum

ಗ್ಯಾರಂಟಿ ನಂಬಿಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ – ಸಭೆಯಲ್ಲಿ ಕೈ ಶಾಸಕರ ಬೇಸರ

Public TV
By Public TV
2 hours ago
Hardik Pandya
Cricket

ಪಾಂಡ್ಯ ಸ್ಫೋಟಕ ಫಿಫ್ಟಿ, ಬೌಲರ್‌ಗಳ ಬೆಂಕಿ ಬೌಲಿಂಗ್‌ಗೆ ಆಫ್ರಿಕಾ ಬರ್ನ್‌ – ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

Public TV
By Public TV
3 hours ago
dk shivakumar 1 6
Belgaum

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಕೆಶಿ

Public TV
By Public TV
3 hours ago
Chitradurga Farmers Protest
Chitradurga

ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ, ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಚಿತ್ರದುರ್ಗ ರೈತರ ಪ್ರತಿಭಟನೆ

Public TV
By Public TV
4 hours ago
Liquor
Belgaum

ಮನೆಗೆ ಮದ್ಯ – ಸದನದಲ್ಲಿ ಸ್ವಾರಸ್ಯಕರ ಚರ್ಚೆ

Public TV
By Public TV
4 hours ago
Fire in maize pile crop damage worth lakhs of rupees
Districts

ಮೆಕ್ಕೆಜೋಳದ ರಾಶಿಗೆ ಬೆಂಕಿ – ಲಕ್ಷಾಂತರ ರೂ. ಬೆಳೆ ಹಾನಿ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?