– ಉರುಸ್‌ಗಳಲ್ಲಿ ಹಿಂದೂಗಳಿಗೆ ಅವಕಾಶವಿಲ್ಲ
– ಹಿಂದೂ ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅನುಮತಿ ಯಾಕೆ?
ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ(Mangaluru Bomb Blast) ಬಳಿಕ ರಾಜ್ಯದಲ್ಲಿ ವ್ಯಾಪಾರ ದಂಗಲ್ ಮತ್ತೆ ಆರಂಭವಾಗಿದ್ದು ಬೆಂಗಳೂರಿಗೂ(Bengaluru) ಕಾಲಿಟ್ಟಿದೆ.
Advertisement
ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ ಬಳಿಯಿರುವ ವಿವಿ ಪುರಂನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ(Subramanya Swamy Temple) ಬೆಳ್ಳಿ ತೇರು ಜಾತ್ರೆಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಿಬಿಎಂಪಿ ಕಮೀಷನರ್ ಹಾಗೂ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ. ಇದನ್ನೂ ಓದಿ: ಮತ್ತೆ ಧರ್ಮ ದಂಗಲ್ ಶುರು- ಕುಕ್ಕೆಯಲ್ಲಿ ಷಷ್ಠಿ ವೇಳೆ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ
Advertisement
Advertisement
ದೂರಿನಲ್ಲಿ ಏನಿದೆ?
ಮುಸ್ಲಿಮರ ಉರುಸ್‌ಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಅವಕಾಶ ನೀಡುವುದಿಲ್ಲ. ದೇಶದ ಕಾನೂನಿಗೆ ಬೆಲೆ ಕೊಡುವುದಿಲ್ಲ. ಹಿಂದೂಗಳ ಧಾರ್ಮಿಕ ಭಾವನೆಗೆ ಬೆಲೆ ನೀಡದೇ ವ್ಯಾಪಾರದ ಹೆಸರಿನಲ್ಲಿ ಜಿಹಾದ್ ಮಾಡಲಾಗುತ್ತಿದೆ.
Advertisement
ಮೂರ್ತಿ ಪೂಜೆಯನ್ನು ಇವರು ನಂಬುತ್ತಿಲ್ಲ. ಹಿಂದೂ ದೇವರನ್ನು ವಿಕೃತಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ
ನಾವು ಪೂಜಿಸುವ ಗೋವನ್ನು ಕಡಿದು ತಿನ್ನುವವರಿಗೆ ಪದೇಪದೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ನಮ್ಮ ಆಚರಣೆಗಳಲ್ಲಿ ನಂಬಿಕೆ ಇಲ್ಲದವರಿಗೆ ಹಿಂದೂ ಹಬ್ಬದಲ್ಲಿ ವ್ಯಾಪಾರ ಮಾಡಲು ಯಾವ ಅರ್ಹತೆ ಕೂಡ ಇಲ್ಲ. ಇವುಗಳನ್ನು ಪರಿಗಣಿಸಿ ಹಿಂದುಯೇತರರಿಗೆ ಬೆಳ್ಳಿ ತೇರಿನ ಜಾತ್ರೆಯ ಸಂದರ್ಭದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿವೆ.
ಕುಕ್ಕೆ ಸುಬ್ರಹ್ಮಣ್ಯ (Kukke Sri Subrahmanya Swami Temple) ದೇವಸ್ಥಾನದ ಷಷ್ಠಿ ಮಹೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಡೆಸದಂತೆ ನಿಷೇಧ ಹೇರಬೇಕೆಂದು ಹಿಂದೂ ಜಾಗರಣ ವೇದಿಕೆಯ (Hindu Jagaran Vedike) ಸುಬ್ರಹ್ಮಣ್ಯ ಘಟಕ ಬ್ಯಾನರ್ ಅಳವಡಿಸಿದೆ. ಮಾತ್ರವಲ್ಲ ಸಂಘಟನೆಯ ಮುಖಂಡ ಹರಿಪ್ರಸಾದ್ ಎಂಬವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗ (Subrahmanya Police Station) ದೂರು ನೀಡಿದ್ದು ಕ್ಷೇತ್ರದ ಪಾವಿತ್ರ್ಯತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದರು.