ಪ್ಯಾನ್‍ಯಾಂಗ್: ಆದೇಶಗಳನ್ನು ಹೊರಡಿಸುವ ಮೂಲಕ ಸುದ್ದಿಯಾಗುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಇದೀಗ ಮತ್ತೊಂದು ಹೊಸ ಆದೇಶ ಹೊರಡಿಸಿದ್ದಾರೆ. ಕಡಿಮೆ ಆಹಾರ ತಿನ್ನಿ ಎಂದು ಉತ್ತರ ಕೊರಿಯಾದ ಜನರಿಗೆ ಸಂದೇಶವನ್ನು ನೀಡಿದ್ದಾರೆ.
ತೀವ್ರವಾದ ಆಹಾರ ಬಿಕ್ಕಟ್ಟು ಎದುರಾಗಿದೆ. ಜನರು 2025 ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವಂತೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಮನವಿ ಮಾಡಿರುವುದು ಸಖತ್ ಸುದ್ದಿಯಾಗುತ್ತದೆ. ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು ಸಮಸ್ಯೆ ಎದರುರಾಗುತ್ತಿರುವುದು ಹೊಸತೇನಲ್ಲ. ಈ ಹಿಂದೆಯೂ ಹಲವು ಬಾರಿ ಆಹಾರ ಬಿಕ್ಕಟ್ಟನ್ನು ಎದುರಿಸಿದೆ. 1990ರಲ್ಲಿ ಉಂಟಾಗಿದ್ದ ಆಹಾರದ ಕೊರತೆಯಿಂದಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವಕ್ಕೆ ಕೊರೊನಾ ಬಂದರೂ ಉತ್ತರ ಕೊರಿಯಾಗೆ ಬಂದಿಲ್ಲ- ಪ್ರಜೆಗಳಿಗೆ ಕಿಮ್ ಧನ್ಯವಾದ
2025ರೊಳಗೆ ಚೀನಾ ಜೊತೆಗಿನ ಗಡಿಯನ್ನು ಪುನಾರಂಭಿಸುವವರೆಗೆ ದೇಶದ ಜನರು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕೆಂದು ಕಿಮ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಉತ್ತರ ಕೊರಿಯಾದ ಜನರಿಗೆ ಈಗಾಗಲೇ ಆಹಾರ ಕೊರತೆ ಎದುರಾಗಿದೆ. ಇನ್ನೂ ಮೂರು ವರ್ಷಗಳ ಕಾಲ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಅವರು ಹೇಳಿದ್ದಾರೆ. ಇದನ್ನೂ ಓದಿ: ಭಾರತಕ್ಕೂ ಮೊದಲ ಕೋವಿಡ್ ಗುಳಿಗೆ ಭಾಗ್ಯ
ಆಹಾರ ಬಿಕ್ಕಟ್ಟಿಗೆ ಕಾರಣವೇನು?: ಕೊರಿನಾ ದಿಂದ ತತ್ತರಿಸಿರುವ ಕೊರಿಯಾಗೆ ಇತ್ತೀಚೆಗೆ ಸುರಿದ ಭಾರಿ ಮಳೆಯು ದೊಡ್ಡ ಹೊಡೆತ ನೀಡಿದೆ. ಅತಿವೃಷ್ಟಿಯಿಂದಾಗಿ ಬೆಳೆಗಳು ನೆಲಕಚ್ಚಿದ್ದು, ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ. ಹಣಕಾಸಿನ ಕೊರತೆಯಿಂದಾಗಿ ಹೊರ ದೇಶಗಳಿಂದಲೂ ಆಹಾರ ಸಾಮಗ್ರಿಗಳ ಪೂರೈಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಾಗಿದೆ.