ಜಕಾರ್ತ: ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ಪ್ರಕಾರ, ಇಂದು (ಆ.15) ಬೆಳಿಗ್ಗೆ ಸ್ಥಳೀಯ ಕಾಲಮಾನ 5:58ರ ಸುಮಾರಿಗೆ ಇಂಡೋನೇಷ್ಯಾದ ಪೂರ್ವ ನುಸಾ ತೇಂಗಾರಾ ಪ್ರಾಂತ್ಯದ ಎಂಡೆ ನಗರದಿಂದ 68 ಕಿ.ಮೀ ಉತ್ತರ-ವಾಯುವ್ಯಕ್ಕೆ ಇದರ ಕೇಂದ್ರಬಿAದುವಿದೆ. ಅಲ್ಲದೇ ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪಕ್ಕೂ ಇದು ಅಪ್ಪಳಿಸಿದೆ. ಇದನ್ನೂ ಓದಿ: 2047 ರ ಒಳಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ: ಪ್ರಧಾನಿ ಮೋದಿ
A powerful 7.7-magnitude undersea earthquake struck off the northern coast of Indonesia’s Flores Island, triggering tsunami warnings across several coastal provinces. Indonesian meteorological agencies urged residents in impacted areas to evacuate immediately to higher ground and… pic.twitter.com/lcbLMBfpfy
— The Weather Channel (@weatherchannel) August 15, 2026
ಪ್ರಬಲ ಭೂಕಂಪಕ್ಕೆ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಭೂಕಂಪದ ಬೆನ್ನಲ್ಲೇ ಇಂಡೋನೇಷ್ಯಾದ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಫ್ಲೋರೆಸ್ ದ್ವೀಪದ ಮೌಮೇರೆ ಪಟ್ಟಣದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಭೂಕಂಪದ ಪರಿಣಾಮ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪದಿAದಾಗಿ ಹಾನಿಗೊಳಗಾದ ಕಟ್ಟಡಗಳ ದೃಶ್ಯಗಳು ವೈರಲ್ ಆಗಿದೆ.ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು
INCREÍBLES IMÁGENES DEL SISMO DE 7.8 GRADOS QUE SACUDIÓ FLORES, INDONESIA; VIGENTE, ALERTA DE TSUNAMI 🚨🌊
En redes sociales circulan nuevos videos desde Ende, Flores, tras el potente temblor registrado este viernes 14 de agosto de 2026.
📍 Datos del sismo: • Magnitud: 7.8… pic.twitter.com/RT7Zszvu4D— Tiempo Digital (@TiempoDigitalMx) August 15, 2026
ಜಪಾನ್‌ನಿಂದ ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಜಲಾನಯನ ಪ್ರದೇಶದವರೆಗೆ ಹಬ್ಬಿರುವ ಪೆಸಿಫಿಕ್ “ರಿಂಗ್ ಆಫ್ ಫೈರ್”ನಲ್ಲಿ ಇಂಡೋನೇಷ್ಯಾ ಮತ್ತು ನೆರೆಯ ದೇಶಗಳು ನೆಲೆಗೊಂಡಿರುವುದರಿಂದ ಅಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುವುದು ಸಾಮಾನ್ಯ. 2000ನೇ ಇಸವಿಯ ನಂತರ ಇಂಡೋನೇಷ್ಯಾದಲ್ಲಿ ಸಂಭವಿಸಿದ ಅತ್ಯಂತ ಮಾರಣಾಂತಿಕ ಭೂಕಂಪವೆAದರೆ, 2004ರಲ್ಲಿ ಸುಮತ್ರಾ ಕರಾವಳಿಯ ಬಳಿ ಅಪ್ಪಳಿಸಿದ 9.1 ತೀವ್ರತೆಯ ಕಂಪನವಾಗಿದ್ದು, ಇದು ಈ ಪ್ರದೇಶದಲ್ಲಿ 2,20,000 ಜನರನ್ನು ಬಲಿಪಡೆದ ಸುನಾಮಿಯನ್ನು ಸೃಷ್ಟಿಸಿತ್ತು.ಇದನ್ನೂ ಓದಿ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿಗೆ ಗೌರವ ವಂದನೆ – ರಾಷ್ಟ್ರಗೀತೆಗೂ ಮುನ್ನ ಮೊಳಗಿದ ವಂದೇ ಮಾತರಂ ಗೀತೆ
