ಮಡಿಕೇರಿ: ಕೊಡಗಿನ ಮಡಿಕೇರಿ ತಾಲೂಕಿನ ಕರಿಕೆ ಶನಿವಾರ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಬೆಳಗ್ಗೆ ಸುಮಾರು 9:10 ರ ವೇಳೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಜನರು ತಿಳಿಸಿದ್ದಾರೆ.
Advertisement
ಪಟ್ಟಿಘಾಟ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಭಾರೀ ಶಬ್ಧದ ಹಿನ್ನೆಲೆ ಜನರು ಭಯಭೀತರಾಗಿದ್ದಾರೆ. ಸಂಪಾಜೆ, ಚೆಂಬು, ಗೂನಡ್ಕ ಗ್ರಾಮಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
2 ದಿನಗಳ ಹಿಂದೆಯೂ ಕೊಡಗಿನ ಕೆಲವು ಗ್ರಾಮಗಳಲ್ಲಿ ಭೂಕಂಪನ ಅನುಭವವಾಗಿತ್ತು. ದೇವಸ್ತೂರು, ನೇಗಳ್ಳೆ ಹಾಗೂ ಸುತ್ತಮುತ್ತಲಿನ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿತ್ತು. ಇದನ್ನೂ ಓದಿ: ಅಸ್ಸಾಂ ಪ್ರವಾಹ- 10 ಮಂದಿ ಬಲಿ, ಸಾವಿನ ಸಂಖ್ಯೆ 118ಕ್ಕೆ ಏರಿಕೆ
Advertisement
Advertisement
ಹಾಸನದ ಹೊಳೆನರಸೀಪುರ ಗ್ರಾಮದಲ್ಲಿ 2 ದಿನಗಳ ಹಿಂದೆ 3.4 ತೀವ್ರತೆಯ ಲಘು ಭೂಕಂಪನ ಸಂಭವಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ(ಕೆಎಸ್‌ಎನ್‌ಡಿಎಂಸಿ) ಹೊಳೆನರಸೀಪುರ ತಾಲೂಕಿನ ಮಲುಗನಹಳ್ಳಿ ಗ್ರಾಮ ಕಂಪನದ ಕೇಂದ್ರಬಿಂದು ಆಗಿದ್ದು ಭೂಮಿ ಅಡಿ 0.800 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಮಧ್ಯಮ ಕ್ರಮಾಂಕ ಕಂಪನ ಇದಾಗಿದ್ದು ಕೇಂದ್ರ ಬಿಂದುವಿನ 40-50 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ಈ ಭೂಕಂಪನದಿಂದ ಯಾವುದೇ ಹಾನಿಯಾಗುವುದಿಲ್ಲ. ಸೆಸ್ಮಿಕ್ ವಲಯ 2ರಲ್ಲಿ ಈ ಜಾಗ ಬರುವುದರಿಂದ ಹಾನಿಯ ಸಾಧ್ಯತೆ ಕಡಿಮೆ. ಜನತೆ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿತ್ತು. ಇದನ್ನೂ ಓದಿ: ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ