ತುಮಕೂರು: ಬಡಪಾಯಿಗಳ ಮೇಲೆ ತುಮಕೂರು (Tumkuru) ಡಿವೈಎಸ್‍ಪಿ (DYSP) ದರ್ಪ ಮೆರೆದ ಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮುಂದೆಯೇ ನಡೆದಿದೆ.
Advertisement
ಪೊಲೀಸ್ ಉದ್ಯೋಗಾಕಾಂಕ್ಷಿಗಳು ವಯೋಮಿತಿ ಸಡಿಲಿಸುವಂತೆ ಗೃಹಸಚಿವರಿಗೆ ಮನವಿ ಕೊಡಲು ಬಂದಿದ್ದರು. ಇವರನ್ನು ತಡೆಯುವ ಭರದಲ್ಲಿ ಡಿವೈಎಸ್‍ಪಿ ಶ್ರೀನಿವಾಸ್, ಉದ್ಯೋಗಾಕಾಂಕ್ಷಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ, ದೂರ ತಳ್ಳಿ ಉದ್ಧಟತನದಿಂದ ವರ್ತಿಸಿದ್ದಾರೆ. ಇದನ್ನೂ ಓದಿ: ಗೋವಿಂದರಾಜನಗರದಲ್ಲಿ ಪುನೀತ್ ಹೆಸ್ರಲ್ಲಿ 205 ಬೆಡ್ ಸಾಮರ್ಥ್ಯದ ಆಸ್ಪತ್ರೆ: ಸೋಮಣ್ಣ
Advertisement
Advertisement
ಇದರ ನಡುವೆಯೂ ವೇದಿಕೆಗೆ ನುಗ್ಗಿದ ಪೊಲೀಸ್ ಆಕಾಂಕ್ಷಿಗಳು, ಆರಗ ಜ್ಞಾನೇಂದ್ರ (Araga Jnanendra)ಕಾಲಿಗೆ ಬಿದ್ದು ಕಣ್ಣೀರಿಟ್ಟಿದ್ದಾರೆ. ದಯವಿಟ್ಟು ನೇಮಕಾತಿಯ ವಯೋಮಿತಿ ಹೆಚ್ಚಿಸಿ ಎಂದು ಕೋರಿದ್ದಾರೆ. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು, ವಯೋಮಿತಿ ಸಡಿಲಿಕೆ ಬಗ್ಗೆ ಚಿಂತನೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಆದರೆ ಡಿವೈಎಸ್‍ಪಿ ವರ್ತನೆಗೆ ಎಲ್ಲಾ ಕಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ದೇಶವ್ಯಾಪಿ ಸುದ್ದಿಯಾಗಿದೆ. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?