DistrictsKarnatakaLatestMain PostRamanagara

ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

– ಡೆತ್ ನೋಟ್‍ನಲ್ಲಿ ಇಬ್ಬರು ಶ್ರೀ ಎಂದು ಉಲ್ಲೇಖ
– ಹಾಗಾದ್ರೆ ಆ ಮತ್ತೊಬ್ಬ ಶ್ರೀ ಯಾರು?

ರಾಮನಗರ: ಬಂಡೇಮಠದ (BandeMutt) ಬಸವಲಿಂಗ ಸ್ವಾಮೀಜಿ (BasavalingaSwamiji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಮೇಜರ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳು ವಿಚಾರ ವೇಳೆ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ಶ್ರೀಗಳ ಆತ್ಮಹತ್ಯೆ ಹಿಂದೆ ಮತ್ತೊಬ್ಬ ಪ್ರತಿಷ್ಠಿತ ಮಠವೊಂದರ ಪ್ರಭಾವಿ ಸ್ವಾಮೀಜಿಯ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಬಂಡೆ ಮಠದ ಬಸವಲಿಂಗ ಶ್ರೀ ಆತ್ಮಹತ್ಯೆ ಸಂಬಂಧ ಮೂವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಡೆತ್‍ನೋಟ್‍ನಲ್ಲಿ ಇಬ್ಬರು ಶ್ರೀಗಳಿಂದ ತೊಂದರೆ ಆಗುತ್ತಿದೆ ಎಂದು ಬಸವಲಿಂಗ ಶ್ರೀ ಉಲ್ಲೇಖಿಸಿದ್ದಾರೆ. ಇದನ್ನು ಬೆನ್ನತ್ತಿರುವ ಪೊಲೀಸರು ಆ ಮತ್ತೊಬ್ಬ ಶ್ರೀಗೂ ಗಾಳ ಹಾಕಿದ್ದಾರೆ. ಬಂಧಿತ ಮೂವರು ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಶ್ಚರ್ಯಕರ ವಿಚಾರಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 2ನೇ ಬಾರಿಗೆ ದಾಖಲೆ GST ಸಂಗ್ರಹ – 1.52 ಲಕ್ಷ ಕೋಟಿಯಲ್ಲಿ ಯಾವ ರಾಜ್ಯದ ಪಾಲು ಎಷ್ಟು?

ಬಸವಲಿಂಗ ಶ್ರೀಗೆ ಕಿರುಕುಳ ನೀಡಿದ್ದ ಆ ಮತ್ತೊಂದು ಮಠದ ಶ್ರೀ ಯಾರು? ಬಂಡೇ ಮಠಕ್ಕೂ ಆ ಮತ್ತೊಬ್ಬ ಶ್ರೀಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸದ್ಯ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಆ ಮತ್ತೊಬ್ಬ ಶ್ರೀಗಳನ್ನು ವಿಚಾರಣೆ ನಡೆಸಿದ್ದಾರೆ. ಅದು ಕುಣಿಗಲ್ ತಾಲೂಕಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಆದರೆ ಈ ಕುರಿತು ಮತ್ಯಾವ ಸ್ವಾಮೀಜಿಯನ್ನೂ ವಿಚಾರಣೆ ನಡೆಸಿಲ್ಲ ಎಂದು ಪೊಲೀಸರು ಹೇಳಿತ್ತಿದ್ದಾರೆ. ಇನ್ನೂ ಆತ್ಮಹತ್ಯೆ ಕೇಸ್‍ನಲ್ಲಿ ಬಗೆದಷ್ಟು ಟ್ವಿಸ್ಟ್ ಮೇಲೆ ಟ್ವಿಸ್ಟ್ ದೊರೆಯುತ್ತಿದೆ. ಸದ್ಯ ವಿಚಾರಣೆಯಲ್ಲಿರುವ ಆರೋಪಿಗಳು ಮತ್ತಷ್ಟು ಜನರ ಹೆಸರುಗಳನ್ನು ಬಾಯ್ಬಿಡ್ತಾರಾ? ಆ ಮತ್ತೊಬ್ಬ ಸ್ವಾಮೀಜಿಯ ಬಂಧನವೂ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಮುರಿದು ಬಿದ್ದ ಪುರಾತನ ವೀರಭದ್ರೇಶ್ವರ ಸ್ವಾಮಿಯ ರಥದ ಚಕ್ರ – ಅದೃಷ್ಟವಶಾತ್ ಭಕ್ತರು ಪಾರು

Live Tv

Leave a Reply

Your email address will not be published. Required fields are marked *

Back to top button