ಟಾಲಿವುಡ್ ಪವರ್ ಸ್ಟಾರ್, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅಚ್ಚರಿಯ ನಡೆಗೆ ಕಾರಣವಾಗಿದ್ದಾರೆ. ಓಜಿ ಚಿತ್ರದ ನಿರ್ದೇಶಕ ಸುಜಿತ್‌ಗೆ ಭಾರೀ ಬೆಲೆ ಬಾಳುವ ಲ್ಯಾಂಡ್ ರೋವರ್ ಡಿಫೆಂಡರ್ ಕಾರ್ ಗಿಫ್ಟ್ ಕೊಟ್ಟಿದ್ದಾರೆ.
ಈ ಕಾರಿಗೆ ಆನ್‌ರೋಡ್ ದರ 3 ಕೋಟಿ ರೂ. ಇದೆ. ಅಂದಹಾಗೆ ‘They Call Him OG’ ಚಿತ್ರ ಕಳೆದ ಸಪ್ಟೆಂಬರ್‌ನಲ್ಲೇ ತೆರೆಕಂಡಿತ್ತು. ಹಾಗಂತ ಬ್ಲಾಕ್‌ಬಸ್ಟರ್ ಹಿಟ್ ಆಗಿರುವ ಚಿತ್ರವೂ ಇದಲ್ಲ. ಆದರೂ ಆಂಧ್ರ ಡಿಸಿಎಂ ನಿರ್ದೇಶಕ ಸುಜಿತ್‌ಗೆ (Sujith) ಅತಿ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪವನ್ ಕಲ್ಯಾಣ್ ಈ ಚಿತ್ರಕ್ಕೆ ಹೀರೋ ಆಗಿದ್ದು ಹೊರತಾಗಿ ನಿರ್ಮಾಪಕರಲ್ಲ. ಆದರೂ ಪವನ್ ಕಲ್ಯಾಣ್ ನಿರ್ದೇಶಕ ಸುಜಿತ್ ಮೇಲೆ ಉದಾರ ಗುಣ ತೋರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

