ಭೋಪಾಲ್: ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ (99) ಅವರು ಭಾನುವಾರ ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ನಿಧನರಾದರು.
ನರಸಿಂಗ್‌ಪುರದ ಶ್ರೀಧಾಮ ಜೋತೇಶ್ವರ ಆಶ್ರಮದಲ್ಲಿ ಮಧ್ಯಾಹ್ನ 3.30ಕ್ಕೆ ಸ್ವರೂಪಾನಂದರು ಕೊನೆಯುಸಿರೆಳೆದರು. ಲಘು ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ. ಸ್ವರೂಪಾನಂದರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. ಇದನ್ನೂ ಓದಿ: ಆರ್ಟಿಕಲ್ 370ಯನ್ನು ಮತ್ತೆ ತರುವ ಭರವಸೆ ನಾನು ನೀಡಲ್ಲ: ಆಜಾದ್
Advertisement
Advertisement
ಸ್ವರೂಪಾನಂದರು ಸಿಯೋನಿ ಜಿಲ್ಲೆಯ ಜಬಲ್‌ಪುರ ಸಮೀಪದ ದಿಘೋರಿ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. 9ನೇ ವಯಸ್ಸಿನಲ್ಲಿ ಮನೆ ತೊರೆದ ಅವರು ಹಿಂದೂ ಧರ್ಮದ ಉನ್ನತಿಗಾಗಿ ಧರ್ಮದ ಪ್ರಯಾಣವನ್ನು ಪ್ರಾರಂಭಿಸಿದರು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸ್ವರೂಪಾನಂದ ಸರಸ್ವತಿ ಅವರು ಉತ್ತರ ಪ್ರದೇಶದ ವಾರಣಾಸಿಯನ್ನು ತಲುಪಿದ ನಂತರ ಸ್ವಾಮಿ ಕರ್ಪಾತ್ರಿ ಮಹಾರಾಜರಿಂದ ವೇದಗಳು ಮತ್ತು ಧರ್ಮಗ್ರಂಥಗಳನ್ನು ಕಲಿತರು. ಈಚೆಗಷ್ಟೇ ತಮ್ಮ 99 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
Advertisement
Advertisement
ಸ್ವರೂಪಾನಂದ ಸರಸ್ವತಿ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು. ಆ ಸಮಯದಲ್ಲಿ ಅವರನ್ನು ಕ್ರಾಂತಿಕಾರಿ ಸಾಧು ಎಂದು ಕರೆಯಲಾಗುತ್ತಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೂ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ – ಉದ್ಧವ್ ಬಣದ ಐವರು ಅರೆಸ್ಟ್, 40 ಮಂದಿ ವಿರುದ್ಧ FIR