ನೂಪುರ್ ಶರ್ಮಾಗೆ ಬೆಂಬಲಿಸಿದ್ದ ಡಚ್ ರಾಜಕಾರಣಿಗೆ ಕೊಲೆ ಬೆದರಿಕೆ

Public TV
2 Min Read
Geert Wilders nupur sharma

ಆಂಸ್ಟರ್‌ಡ್ಯಾಮ್: ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಡಚ್ ಬಲಪಂಥೀಯ ರಾಜಕಾರಣಿ ಗೀರ್ಟ್ ವೈಲ್ಡರ್ಸ್ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ.

nupur sharma 2

ತನ್ನ ದೇಶದಲ್ಲಿ ಇಸ್ಲಾಮಿಕ್ ಉಗ್ರವಾದದ ವಿರುದ್ಧ ಆಗಾಗ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಹೆಸರುವಾಸಿಯಾಗಿರುವ ಗೀರ್ಟ್ ವೈಲ್ಡರ್ಸ್, ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಮಾಡಿದ ನೂಪುರ್ ಶರ್ಮಾಗೆ ಬೆಂಬಲ ನೀಡಿದ್ದರು. ಇದಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ತನಗೆ ನೂರಾರು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ವೈಲ್ಡರ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

ಈ ಬಗ್ಗೆ ಟ್ವೀಟ್ ಮಾಡಿರುವ ವೈಲ್ಡರ್ಸ್, ನಾನು ನೂಪುರ್ ಶರ್ಮಾ ಅವರನ್ನು ಬೆಂಬಲಿಸುತ್ತೇನೆ. ನನಗೆ ನೂರಾರು ಕೊಲೆ ಬೆದರಿಕೆಗಳು ಬರುತ್ತಿದ್ದರೂ ಇದು ನನ್ನನ್ನು ಇನ್ನಷ್ಟು ದೃಢ ನಿಲುವನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತಿದೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಲು ನಾನು ಹೆಮ್ಮೆಪಡುತ್ತೇನೆ. ಏಕೆಂದರೆ ಕೆಟ್ಟದ್ದು ಎಂದಿಗೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಕೆಲ ನಾಯಕರಿಗೆ ಮಾತ್ರ ನಿಯಮ ಇದು ಯಾವ ನ್ಯಾಯ: ಸಿಡಿದೆದ್ದ ಶಾಸಕ ಕುಲದೀಪ್ ಬಿಷ್ಣೋಯಿ

ಇದಕ್ಕೂ ಮುನ್ನ ಜೂನ್ 6ರಂದು ಟ್ವೀಟ್ ಮಾಡಿದ್ದ ವೈಲ್ಡರ್ಸ್, ನೂಪುರ್ ಶರ್ಮಾ ಸರಿಯಾದ ಮಾಹಿತಿ ನೀಡಿದ್ದಾರೆ. ಭಾರತ ಅವರ ಬೆಂಬಲಕ್ಕೆ ನಿಲ್ಲಬೇಕು. ಭಾರತೀಯ ರಾಜಕಾರಣಿ ನೂಪುರ್ ಶರ್ಮಾ ಹೇಳಿಕೆಯಿಂದ ಅರಬ್ ಹಾಗೂ ಇಸ್ಲಾಮಿಕ್ ದೇಶಗಳು ಕೋಪಗೊಂಡಿರುವುದು ಹಾಸ್ಯಾಸ್ಪದ. ಭಾರತ ಈ ಬಗ್ಗೆ ಕ್ಷಮೆ ಏಕೆ ಕೇಳಬೇಕು ಎಂದು ಬರೆದಿದ್ದರು.

Share This Article