ಅಹಮದಾಬಾದ್: ಗುಜರಾತ್ ಟೈಟಾನ್ಸ್ (Gujarat Titans) ಐಪಿಎಲ್ ಪ್ಲೇ ಆಫ್ ರೇಸ್‌ನಿಂದ ಹೊರ ಬಿದ್ದಿದೆ. ಗುಜರಾತ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧದ ಪಂದ್ಯ ಭಾರೀ ಮಳೆಯಿಂದ ರದ್ದಾಗಿದೆ.
ಪ್ಲೇ ಆಫ್‌ಗೆ ಹೋಗಲು ಇಂದಿನ ಪಂದ್ಯವನ್ನು ಗುಜರಾತ್‌ಗೆ ಗೆಲ್ಲಲೇ ಬೇಕಿತ್ತು. ಆದರೆ ಭಾರೀ ಮಳೆಯಿಂದ (Rain) ಒಂದು ಎಸೆತ ಕಾಣದೇ ಪಂದ್ಯ ರದ್ದಾದ ಪರಿಣಾಮ ಗುಜರಾತ್ ಕನಸು ಭಗ್ನಗೊಂಡಿದೆ.
Advertisement
🚨 Update from Ahmedabad 🚨
Match 6️⃣3️⃣ of #TATAIPL 2024 between @gujarat_titans & @KKRiders has been abandoned due to rain 🌧️
Both teams share a point each 🤝#GTvKKR pic.twitter.com/Jh2wuNZR5M
— IndianPremierLeague (@IPL) May 13, 2024
Advertisement
ಪಂದ್ಯ ರದ್ದಾದ ಪರಿಣಾಮ ಕೋಲ್ಕತ್ತಾ ಮತ್ತು ಗುಜರಾತ್‌ಗೆ ತಲಾ ಒಂದೊಂದು ಅಂಕವನ್ನು ಹಂಚಲಾಗಿದೆ. ಈಗಾಲೇ ಪ್ಲೇ ಆಫ್ ಪ್ರವೇಶಿಸಿರುವ ಕೋಲ್ಕತ್ತಾಗೆ ಒಟ್ಟು 19 ಅಂಕ ಸಂಪಾದಿಸಿದರೆ ಗುಜರಾತ್ 12 ಪಂದ್ಯಗಳಿಂದ ಒಟ್ಟು 11 ಅಂಕ ಸಂಪಾದಿಸಿದೆ.
Advertisement
ಚೆನ್ನೈ ಮತ್ತು ಹೈದರಾಬಾದ್ ತಲಾ 14 ಅಂಕ ಗಳಿಸಿ ಪ್ಲೇ ಆಫ್ ರೇಸ್‌ನಲ್ಲಿದೆ. ಈ ಒಂದು ವೇಳೆ ಈ ಪಂದ್ಯವನ್ನು ಉತ್ತಮ ರನ್ ರೇಟ್‌ನೊಂದಿಗೆ ಗೆದ್ದಿದ್ದರೆ ಗುಜರಾತ್‌ಗೆ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಈ ಪಂದ್ಯದ ರದ್ದಾದ ಪರಿಣಾಮ 2022 ಚಾಂಪಿಯನ್, 2023ರ ದ್ವಿತೀಯ ಸ್ಥಾನಿ ಗುಜರಾತ್ ಐಪಿಎಲ್ ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.