ಬೀದರ್: ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ, ಜಪ್ತಿ ಮಾಡಲಾಗಿದ್ದ 9.41 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಬೀದರ್ ಪೊಲೀಸರು (Bidar Police) ನಾಶಪಡಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಧನ್ನೂರು ಸಮೀಪದ ಜೈವಿಕ ತಾಜ್ಯ ವಿಲೇವಾರಿ ಕುಲುಮೆ ಘಟಕದಲ್ಲಿ 997 ಕೆ.ಜಿ ಗಾಂಜಾ, 51 ಸಾವಿರಕ್ಕೂ ಅಧಿಕ ನಶೆ ಗುಳಿಗೆಗಳು ಮತ್ತು 743 ಮಾದಕ ಸಿರಪ್‌ಗಳನ್ನು ನಾಶಪಡಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಖಾತೆಯಿಲ್ಲದವರಿಗೆ 60 ಕೋಟಿ ಹಣ ಜಮೆ ಎಂದ ಸಿಎಜಿ ವರದಿ ಸತ್ಯಕ್ಕೆ ದೂರವಾದದ್ದು: ಹೆಚ್.ಎಂ ರೇವಣ್ಣ
ಜಿಲ್ಲಾ ಡ್ರಗ್ಸ್ ವಿಲೇವಾರಿ ಸಮಿತಿಯ ನಿಯಮಗಳ ಪ್ರಕಾರ ಎಸ್ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ. ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ 22 ಪ್ರಕರಣಗಳಲ್ಲಿ ಜಪ್ತಿಯಾಗಿದ್ದ ಮಾದಕ ದ್ರವ್ಯಗಳನ್ನು ನಾಶ ಮಾಡಿ, ಅಕ್ರಮ ಮಾದಕ ದ್ರವ್ಯ ಮಾರಾಟ ಮಾಡುವ ದಂಗೆಕೋರರಿಗೆ ಎಸ್ಪಿ ವಾರ್ನಿಂಗ್ ನೀಡಿದ್ದಾರೆ.
