ನವದೆಹಲಿ: ಉಪರಾಷ್ಟ್ರಪತಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ಅವಮಾನಿಸಿದ ರೀತಿಯನ್ನು ನೋಡಿ ನಾನು ದಿಗ್ಭ್ರಮೆಗೊಂಡಿದ್ದೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನ್ಕರ್ ಗೆ (Jagdeep Dhankhar) ವಿಪಕ್ಷಗಳ ನಾಯಕರಿಂದ ಅವಮಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಚುನಾಯಿತ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಕ್ತವಾಗಿರಬೇಕು. ಅವರ ಅಭಿವ್ಯಕ್ತಿ ಘನತೆ ಮತ್ತು ಸೌಜನ್ಯದ ಮಾನದಂಡಗಳಾಗಿರಬೇಕು ಎಂದರು.
Advertisement
ನಮ್ಮದು ಹೆಮ್ಮೆಪಡುವ ಸಂಸದೀಯ ಸಂಪ್ರದಾಯವಾಗಿದೆ. ಸಂಸದರು ಅದನ್ನು ಎತ್ತಿಹಿಡಿಯುತ್ತಾರೆ ಎಂದು ಭಾರತದ ಜನರು ನಿರೀಕ್ಷಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಉಪರಾಷ್ಟ್ರಪತಿ ಧನ್ಕರ್ ಬಗ್ಗೆ ಅಣಕು ಪ್ರದರ್ಶನ, ಲೇವಡಿ- ನಗುತ್ತಾ ವೀಡಿಯೋ ಮಾಡಿದ ರಾಹುಲ್
Advertisement
Advertisement
ಆಗಿದ್ದೇನು..?: ಸಂಸತ್ ಇತಿಹಾಸದಲ್ಲೇ ಗರಿಷ್ಠಮಟ್ಟದಲ್ಲಿ ಅಮಾನತು ಆಗಿರೋ ಸಂಸದರು ಪ್ರತಿಭಟನೆ ವೇಳೆ ಅಣಕು ಸಂಸತ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಉಪರಾಷ್ಟ್ರಪತಿಯೂ ಆಗಿರೋ ರಾಜ್ಯಸಭೆ ಚೇರ್ಮನ್ ಜಗದೀಪ್ ಧನ್ಕರ್‍ರನ್ನು ಅನುಕರಿಸಿ ಮಿಮಿಕ್ರಿ ಮಾಡಿದ್ದಾರೆ.
ನನ್ನ ಬೆನ್ನು ಮೂಳೆ ನೆಟ್ಟಗಿದೆ, ನಾನು ಸಾಕಷ್ಟು ಉದ್ದ ಇದ್ದೇನೆ ಎನ್ನುತ್ತಾ ಕಲ್ಯಾಣ್ ಬ್ಯಾನರ್ಜಿ, ಧನ್ಕರ್ ದೈಹಿಕ ಸಂರಚನೆ ಬಗ್ಗೆ ಗೇಲಿ ಮಾಡಿದ್ದಾರೆ. ವಿಪರ್ಯಾಸ ಅಂದ್ರೆ ಇದನ್ನು ನೋಡಿ ನಗುತ್ತಾ ರಾಹುಲ್ ಗಾಂಧಿ ಮೊಬೈಲ್‍ನಲ್ಲಿ ಶೂಟ್ ಮಾಡಿದ್ದಾರೆ. ಬರೀ ರಾಹುಲ್ ಮಾತ್ರ ಅಲ್ಲ, ಅಲ್ಲಿ ನೆರೆದಿದ್ದವರೆಲ್ಲಾ ಗೊಳ್ಳೆಂದು ನಕ್ಕಿದ್ದಾರೆ. ರಾಹುಲ್ ಸೇರಿ ವಿಪಕ್ಷಗಳ ಈ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಖುದ್ದು ಧನ್ಕರ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.