ತಮಿಳುನಾಡು: ಪ್ರವಾಸಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ಕಾರು ಚಾಲಕ ನಿದ್ರೆಗೆ ಜಾರಿದ ಪರಿಣಾಮ ಟ್ರಾಕ್ಗೆ (Truck) ಡಿಕ್ಕಿ ಹೊಡೆದು ಐದು ಜನ ಮೃತಪಟ್ಟಿರುವ ಘಟನೆ ದಕ್ಷಿಣ ತಮಿಳುನಾಡಿನ (Southern TamilNadu) ಸಿಂಗಿಲಿಪಟ್ಟಿ ಮತ್ತು ಪುನ್ನಯ್ಯಪುರಂ (Singilipatti and Punnaiyapuram ) ಬಳಿ ನಡೆದಿದೆ.
ಕಾರ್ತಿಕ್, ವೇಲ್ ಮನೋಜ್, ಸುಬ್ರಮಣಿ, ಮನೋಹರನ್ ಮತ್ತು ಪೋತಿರಾಜ್ ಮೃತರು. ವೀಕೆಂಡ್ನಲ್ಲಿ ಪ್ರವಾಸ ಮುಗಿಸಿ ಮನೆಗೆ ಹಿಂದಿರುಗುವಾಗ ಘಟನೆ ಸಂಭವಿಸಿದೆ. ಸುಮಾರು ಮುಂಜಾನೆ 3:30 ರ ಹೊತ್ತಿಗೆ ಕಾರು ಚಾಲಕ ನಿದ್ರೆಗೆ ಜಾರಿದ್ದಾನೆ. ಈ ವೇಳೆ ಸಿಮೆಂಟ್ ಚೀಲಗಳನ್ನು ತುಂಬಿಕೊಂಡು ಕೇರಳ ಕಡೆ ಹೋಗುತ್ತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಒವರ್ ಟೇಕ್ ಮಾಡಲೋಗಿ ಕ್ಯಾಂಟರ್ಗಳ ನಡುವೆ ಡಿಕ್ಕಿ – ಚಾಲಕರಿಗೆ ಗಂಭೀರ ಗಾಯ
ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲಿದ್ದ ಐದು ಮಂದಿ ಮೃತಪಟ್ಟಿದ್ದು, ಒರ್ವ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸ್ನೇಹಿತನ ಮೇಲೆ ಹಲ್ಲೆ – ಪ್ರಶ್ನೆ ಮಾಡಿದಕ್ಕೆ ಕುಚಿಕುಗಳಿಂದಲ್ಲೇ ಕೊಲೆ
ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಜ.25 ರಂದು ಇದೇ ರೀತಿ ಅಪಘಾತದಿಂದ ಎಂಟು ಜನ ಗಾಯಗೊಂಡಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದರು. ಇದನ್ನೂ ಓದಿ: ಕಲ್ಕಾಜಿ ದೇಗುಲದಲ್ಲಿ ವೇದಿಕೆ ಕುಸಿದುಬಿದ್ದು ಮಹಿಳೆ ಸಾವು – 17 ಮಂದಿಗೆ ಗಾಯ