ಬೆಂಗಳೂರು: ಕೆಲವೊಂದು ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ್ರೆ ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯನ್ನು ಜನ ಮಾಡಿಯೇ ಮಾಡುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ನೂತನ ಸಂಸದ ಡಾ. ಮಂಜುನಾಥ್ (Dr C.N Manjunath) ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕೇಂದ್ರ ಸಚಿವ ಸ್ಥಾನದ ಬಯಕೆ ವ್ಯಕ್ತಪಡಿಸಿದ್ದಾರೆ.
ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವರು ಆಗ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಕೆಲವೊಂದು ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ್ರೆ ಜನ ನಿರೀಕ್ಷೆ ಮಾಡಿಯೇ ಮಾಡುತ್ತಾರೆ ಎಂದು ಹೇಳಿದರು. ಇದೇ ವೇಳೆ ಒಂದು ವೇಳೆ ಸಚಿವರನ್ನಾಗಿ ಮಾಡಿದ್ರೆ ನಿಭಾಯಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೇನು ಅಂತಾ ದೊಡ್ಡ ಸಮಸ್ಯೆ ಏನಲ್ಲ ಅಂದ್ರು. ಅಲ್ಲದೇ ಆರೋಗ್ಯ ಸಚಿವರನ್ನಾಗಿ ಮಾಡ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಜನರು ನಿರೀಕ್ಷೆ ಮಾಡ್ತಾರೆ ನೋಡೋಣ ಅಂದ್ರು.
ದೇವೇಗೌಡರು ನನ್ನ ಗೆಲುವನ್ನ ಖುಷಿ ಪಟ್ಟಿದ್ದಾರೆ. ದೇವೇಗೌಡರು (H.D Devegowda) ನನ್ನ ಮಂಜು ಅಂತಾ ಕರೆಯುತ್ತಾರೆ. ನನ್ನ ಕೈ ಹಿಡಿದುಕೊಂಡು ಮಂಜು ಪಾರ್ಲಿಮೆಂಟ್ ಗೆ ಹೋಗ್ತಾ ಇದ್ದೀಯಾ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು. ಇದನ್ನೂ ಓದಿ: ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್
ನಮ್ಮ ಅತ್ತೆ ಚನ್ನಮ್ಮ ನನ್ನ ತಲೆ ಸವರಿ, ಕೈ ಹಿಡಿದು ಆರ್ಶೀವಾದ ಮಾಡಿ ಖುಷಿಪಟ್ಟರು. ಹೈವೋಲ್ಟೇಜ್, ಪ್ರತಿಷ್ಠಿತ ಕ್ಷೇತ್ರ ಅಂತಾ ಮಹತ್ವ ಪಡೆದುಕೊಂಡಿತ್ತು. ಹೀಗಾಗಿ ಕುಮಾರಸ್ವಾಮಿ ಅವರು ತಮ್ಮ ಗೆಲುವಿಗಿಂತ ನಿಮ್ಮ ಗೆಲುವನ್ನ ಸಂಭ್ರಮ ಪಟ್ಟಿದ್ದಾರೆ ಎಂದರು.
ನಮ್ಮ ಕಾರ್ಯಕರ್ತರಿಗೆ, ಮತದಾರರಿಗೆ ಎಷ್ಟು ಖುಷಿಯಾಗಿದೆಯೋ ಅಷ್ಟೇ ಖುಷಿ ನನಗೆ ಆಗಿದೆ. ಇದರ ಬಗ್ಗೆ ಬೀದಿ ಬೀದಿಯಲ್ಲಿ ಚರ್ಚೆ ಆಗಿದೆ. ಮೂಲೆ ಮೂಲೆಯಲ್ಲಿ, ಮಾಧ್ಯಮಗಳಲ್ಲಿ ವಿಮರ್ಶೆ ಆಗಿದೆ. ಇದೀಗ ನನ್ನ ಗೆಲುವು ಖುಷಿ ಕೊಟ್ಟಿದೆ. ರಾಜಕೀಯಕ್ಕೆ ಇದು ಮೊದಲನೇ ಹೆಜ್ಜೆ ದೇವೇಗೌಡರ ಸಲಹೆ ಸಹಕಾರ ಕೂಡ ಇರುತ್ತೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಅಭಿವೃದ್ಧಿಗೆ ಏನು ಯೋಜನೆಗಳು ಎಂಬ ಪ್ರಶ್ನೆಗೆ, ಕೂಲಂಕುಷವಾಗಿ ಪಟ್ಟಿ ಮಾಡಬೇಕು, ಪಟ್ಟಿ ಮಾಡಿದ ಬಳಿಕ ತಿಳಿಸುತ್ತೇನೆ. ಆದರೆ ದೆಹಲಿಯಿಂದ ಇನ್ನೂ ಕರೆಬಂದಿಲ್ಲ ಬರಬಹುದು. ಸರ್ಕಾರ ರಚನೆ ಆದ ನಂತರ ಎಲ್ಲಾ ಸಮಾಲೋಚನೆ ಮಾಡಿ ಸಂಸದರನ್ನ ಕರೆಯುತ್ತಾರೆ, ಕರೆದಾಗ ಹೋಗುತ್ತೇನೆ ಎಂಜುನಾಥ್ ಹೇಳಿದರು.