ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳ ನೀಡಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.
Advertisement
ಮಂಜುಳಾ ಗಂಜಿಗಟ್ಟಿ (30) ಮೃತ ದುರ್ದೈವಿ. ಕಳೆದ ಎರಡು ತಿಂಗಳ ಹಿಂದಷ್ಟೇ ಕರಿಬಸಪ್ಪ ಜೊತೆ ಮಂಜುಳಾ ವಿವಾಹವಾಗಿತ್ತು. ಮದುವೆ ವೇಳೆ ಸಾಕಷ್ಟು ವರೋಪಚಾರ ಕೂಡ ಮಾಡಲಾಗಿತ್ತು. ಆದರೆ ಪತಿ ಕರಿಬಸಪ್ಪ ಹಾಗೂ ಕುಟುಂಬದವರು ಮಂಜುಳಾಗೆ ನಿತ್ಯ ವರದಕ್ಷಿಣೆ ಸಂಬಂಧ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ ಸಾವು
Advertisement
Advertisement
ಇಂದು ಸಹ ಕಿರುಕುಳ ನೀಡಲು ಮುಂದಾಗಿದ್ದು, ವರದಕ್ಷಿಣೆ ತರಲು ಸಾಧ್ಯವಿಲ್ಲ ಎಂದು ಮಂಜುಳಾ ವಾದಿಸಿದ್ದಕ್ಕೆ ಕರಿಬಸಪ್ಪ ಹಾಗೂ ಅವರ ಕುಟುಂಬದವರು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.