ಹಾಸನ: ಗುರುವಾರ ಹಾಸನಾಂಬ (Hasanamba) ದೇವಿ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಒಂದು ಗೋಲ್ಡ್ ಪಾಸ್ನಲ್ಲಿ (Gold Pass) ಒಬ್ಬರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ (K.M Shivalinge Gowda) ಹೇಳಿದ್ದಾರೆ.
ಹಾಸನಾಂಬ ಜಾತ್ರಾ ಮಹೋತ್ಸವದ ಕುರಿತು ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲಿದೆ. ಕರ್ನಾಟಕ ರಾಜ್ಯದ ಜನರಿಗೆ ಸುಗಮ ದೇವಿ ದರ್ಶನಕ್ಕೆ ಜಿಲ್ಲಾಡಳಿತ ತಯಾರಿ ನಡೆಸಿದೆ. ಹಾಸನಾಂಬ ಜಾತ್ರಾ ಮಹೋತ್ಸವ ಇಡೀ ಕರ್ನಾಟಕ ರಾಜ್ಯ ನೋಡುವ ರೀತಿ ನಾಡಹಬ್ಬವಾಗಿ ಪರಿವರ್ತನೆಗೊಂಡು ಜನಮನ ಸೆಳೆದಿದೆ. ಕಳೆದ ವರ್ಷದ ರೀತಿಯಲ್ಲೂ ಈ ಬಾರಿಯೂ ಕಾರ್ಯಕ್ರಮ, ವ್ಯವಸ್ಥೆ ಮಾಡಿದ್ದೀನಿ. ಮೈಸೂರು ದಸರಾಗೆ ಬಂದಂತಹ ಜನಗಳಿಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದ್ದರು. ಅದೇ ರೀತಿ ಹಾಸನದ ನಗರಸಭೆ ವಸ್ತು ಪ್ರದರ್ಶನದ ಆವರಣದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. 400ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಲಿದ್ದಾರೆ ಎಂದರು. ಇದನ್ನೂ ಓದಿ: ನಮ್ಮವರು ಸರಿಯಾಗಿ ಕೆಲಸ ಮಾಡಿಲ್ಲ ಅನ್ಸುತ್ತೆ: ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ರಾಜಣ್ಣ ಬೇಸರ
ಹಳ್ಳಿಗಾಡಿನ ಕ್ರೀಡೆ ಕಬಡ್ಡಿ ಪಂದ್ಯಾವಳಿಯನ್ನು ಮಹಿಳೆಯರು ಹಾಗೂ ಪುರುಷರಿಗೆ ಆಯೋಜಿಸಲಾಗಿದೆ. ಮಹಿಳೆಯರಿಗೆ, ಪುರುಷರಿಗೆ ವಾಲಿಬಾಲ್ ಪಂದ್ಯಾವಳಿ, ಹಳ್ಳಿಕಾರ್ ತಳಿ, ಅಮೃತ್ ಮಹಲ್ ತಳಿಗಳ ಪ್ರದರ್ಶನ ಆಯೋಜಿಸಲಾಗಿದೆ. ವಿಜೇತರಾದವರಿಗೆ ಬಹುಮಾನ ನೀಡಲಾಗುವುದು. ರಂಗೋಲಿ ಸ್ಪರ್ಧೆ, ಶ್ವಾನ ಪ್ರದರ್ಶನ, ಕೋಲಾಟ ಹಾಗೂ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನ.1ರಿಂದ ನ.6ರೊಳಗೆ ಮುಖ್ಯಮಂತ್ರಿಗಳು ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸಲಿದ್ದಾರೆ. ನ.6ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಿ ದರ್ಶನ ಪಡೆಯಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: Jio IPO| 2,868 ರೂ. ಲಾಭದೊಂದಿಗೆ ಲಿಸ್ಟಿಂಗ್ – ಭಾರತದ 2ನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದ ಜಿಯೋ
ಎರಡು ಲಾಡಿಗೆ 56.16 ಪೈಸೆಯಂತೆ ಇಸ್ಕಾನ್ನವರಿಗೆ ನೀಡಲಾಗಿದೆ. ಇಸ್ಕಾನ್ನವರೇ ಉಚಿತ ಪ್ರಸಾದ ವಿತರಣೆ ಮಾಡುತ್ತಾರೆ. ಹಾಸನದವರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಕೇಳಿ ಬಂದಿದೆ. ಹಾಸನಾಂಬ ದೇವಿ ಹಾಸನಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ರಾಜ್ಯಕ್ಕೆ ಹಾಸನಾಂಬ ದೇವಿ ವ್ಯಾಪಿಸಿದೆ. ನಾವು ಸಂಕುಚಿತ ಮನೋಭಾವನೆ ಮಾಡಿಕೊಳ್ಳುವುದು ಬೇಡ. ಎಲ್ಲರೂ ಒಟ್ಟಾಗಿ ಜಾತ್ರಾ ಮಹೋತ್ಸವ ಮಾಡೋಣ. ಲಕ್ಷಾಂತರ ಜನ ಬರುತ್ತಾರೆ. ಸ್ಥಳೀಯರು ಎಂಬ ಪದದಲ್ಲಿ ಅರ್ಥೈಸುವುದು ಬೇಡ ಎಂದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ನಂತರ ಇದೇ ಮೊದಲು – SCO ಸಭೆಗೆ ಪಾಕಿಸ್ತಾನಕ್ಕೆ ಭಾರತ ಆಹ್ವಾನ
ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ಪ್ರೋಟೋಕಾಲ್ನಲ್ಲಿ ಬರುವವರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳವಾರ ಪ್ರಧಾನ ಅರ್ಚಕರನ್ನು ಭೇಟಿ ಮಾಡಿ ಸನ್ಮಾನಿಸಿ ಆಹ್ವಾನ ನೀಡಿದ್ದೇವೆ. ಗರ್ಭಗುಡಿ ಬಾಗಿಲನ್ನು ಪದೇ ಪದೇ ಹಾಕುವುದು ಬೇಡ ಎಂದು ಮನವಿ ಮಾಡಿದ್ದೇವೆ. ಒಬ್ಬರೇ ಅರ್ಚಕರಿದ್ದರೆ ಸುಸ್ತಾಗುತ್ತಾರೆ. ಆದ್ದರಿಂದ ಈ ಬಾರಿ ಹೆಚ್ಚು ಅರ್ಚಕರನ್ನು ನೇಮಕ ಮಾಡಿಕೊಳ್ಳಲು ಮನವಿ ಮಾಡಿದ್ದೆವು. ಇದಕ್ಕೆ ಪ್ರಧಾನ ಅರ್ಚಕರು ಸ್ಪಂದಿಸಿದ್ದಾರೆ. ಹೆಚ್ಚು ಜನ ಅರ್ಚಕರನ್ನು ಬಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಗಂಟೆಗಟ್ಟಲೆ ಗರ್ಭಗುಡಿ ಬಾಗಿಲು ಮುಚ್ಚುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇದರಿಂದಾಗಿ ಜನರಿಗೆ ಹೆಚ್ಚು ಹೊತ್ತು ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಪಕ್ಷ, ಭೇದ, ಭಾವ ಮರೆತು ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಬೇಕು. ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ, ಇದರಲ್ಲಿ ರಾಜಕೀಯ ಮಾಡುವುದು ಬೇಡ. ಜನಪ್ರತಿನಿಧಿಗಳು ಬಂದು ಸಲಹೆ ಸೂಚನೆ, ಸಹಕಾರ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ಇದು ನಮ್ಮ ನಾಡ ಹಬ್ಬ. ಹಾಸನಾಂಬ ಇತಿಹಾಸವನ್ನು ಸೃಷ್ಟಿ ಮಾಡಬೇಕು. ಜಾತ್ರಾ ಮಹೋತ್ಸವ ಮುಗಿದ ಮೇಲೆ ರಾಜಕಾರಣ ಮಾಡೋಣ. ಗೋಲ್ಡನ್ ಪಾಸ್ಗೆ ಬೆಳಗ್ಗೆ 8 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಒಣ ಹಾಕಿದ್ದ ಬಟ್ಟೆ ತೆಗೆಯಲು ಹೋಗಿ 4ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳನ್ನು ಪರಿಶೀಲಿಸಲು ಆಹ್ವಾನಿಸಿಲ್ಲ ಎಂಬ ಶಾಸಕ ಹೆಚ್.ಪಿ.ಸ್ವರೂಪ್ಪ್ರಕಾಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನೇ ಹತ್ತು ಬಾರಿ ಫೋನ್ ಮಾಡಿದ್ದೀನಿ. ನಿನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಮಾಡಬೇಕು ಬಾ ಎಂದು ಕರೆದಿದ್ದೇನೆ. ನಾನು ಹಾಸನಾಂಬ ದೇವಿ ಮುಂದೆ ಸತ್ಯ ಮಾಡುತ್ತೇನೆ. ಬರದೆ ಹೋದರೆ ಯಾರು ಏನು ಮಾಡಲು ಆಗುತ್ತೆ? ಆಹ್ವಾನ ಕೊಡಬೇಕು ಕೊಡಿ, ಅವರು ಬರೋದು ಬಿಡೋದು ಅವರಿಗೆ ಬಿಟ್ಟದ್ದು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು. ಇದನ್ನೂ ಓದಿ: ವೋಟ್ ಚೋರಿ ಆರೋಪಕ್ಕೆ ಉತ್ತರ, 2028ರ ಚುನಾವಣೆಗೆ ಇದು ದಿಕ್ಸೂಚಿ: ಜೋಶಿ
