– ಸಿದ್ದರಾಮಯ್ಯ ಕಾಂಗ್ರೆಸ್ನ ಆಸ್ತಿ, ಅವರ ಅನುಪಸ್ಥಿತಿಯಿಂದ ಏನಾಗ್ತಿದೆ ನೋಡೋಣ ಎಂದ ಮಾಜಿ ಸಚಿವ
ತುಮಕೂರು: ಎಂಎಲ್ಸಿ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲಿಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ನಮ್ಮಲ್ಲಿ ನಿರಾಸೆ ಮೂಡಿಸಿದೆ. ಇದು 35 ಅಸೆಂಬ್ಲಿ ಕ್ಷೇತ್ರ ಬರುತ್ತೆ. ಅದರಲ್ಲಿ 26 ಕ್ಷೇತ್ರದಲ್ಲಿ ಕಾಂಗ್ರೆಸ್ ಎಂಎಲ್ಎ ಗಳು ಬರ್ತಾರೆ. ನಮ್ಮವರು ಸರಿಯಾಗಿ ಕೆಲಸ ಮಾಡಿಲ್ಲ ಅಂತ ನನಗೆ ಅನ್ಸುತ್ತೆ. ಅದೇ ಪ್ರತಿ ಕ್ಷೇತ್ರದ ಸೋಲಿಗೆ ಪ್ರಮುಖ ಕಾರಣ. ಎಂಎಲ್ಎಗಳು ಆಯಾ ತಾಲೂಕು ಹೋಬಳಿಗಳಲ್ಲಿ ಆಯಾ ಲೀಡರ್ ಗಳು ಕೆಲಸ ಮಾಡಿಲ್ಲ. ಈ ಬಾರಿ ವೋಟರ್ ಲಿಸ್ಟ್ನಲ್ಲಿ ಮತದಾರರ ನಂಬರ್ ಎಲ್ಲಾ ಇತ್ತು. ಅಷ್ಟು ಇದ್ರು ಸಹ ಕೆಲಸ ಮಾಡಿಲ್ಲ. 35 ಅಸೆಂಬ್ಲಿ ಕ್ಷೇತ್ರದಲ್ಲಿ 26 ಶಾಸಕರು ಇದ್ದು, ನಾವು ಸೋಲ್ತೀವಿ ಅಂದ್ರೆ ನಿಜಕ್ಕೂ ವಿಪರ್ಯಾಸ ಎಂದರು.
ಬ್ಯಾಲೆಟ್ ಪೇಪರ್ ವಿಚಾರವಾಗಿ ಮಾತನಾಡಿ, ಈ ಎಂಎಲ್ಸಿ ಚುನಾವಣೆ ಯಾವಾಗಲೂ ಬ್ಯಾಲೆಟ್ ಪೇಪರ್ನಲ್ಲೇ ನಡೆಯೋದು. ಪ್ರಾಶಸ್ತ್ಯ ಮತ ಇರೋದ್ರಿಂದ ಬ್ಯಾಲೆಟ್ ಪೇಪರ್ ಇರಲೇಬೇಕು ಎಂದು ಹೇಳಿದರು. ಇದನ್ನೂ ಓದಿ: ವೋಟ್ ಚೋರಿ ಆರೋಪಕ್ಕೆ ಉತ್ತರ, 2028ರ ಚುನಾವಣೆಗೆ ಇದು ದಿಕ್ಸೂಚಿ: ಜೋಶಿ
ಸಿದ್ದರಾಮಯ್ಯ ಅವರನ್ನ ಸೈಡ್ಲೈನ್ ಮಾಡಿದ್ರಿಂದ ಈ ಸೋಲಾಯ್ತು ಎಂಬ ಚರ್ಚೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕಾಂಗ್ರೆಸ್ನ ಆಸ್ತಿ. ಅವರ ಅನುಪಸ್ಥಿತಿಯಿಂದ ಏನಾಗ್ತಿದೆ ನೋಡೋಣ. ಈ ಬಾರಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬರ್ತಿದೆ, ಅದರಲ್ಲಿ ಗೊತ್ತಾಗುತ್ತೆ ಎಲ್ಲ. ಅವರ ಸೈಡ್ಲೈನ್ನಿಂದ ಪರಿಣಾಮ ಬೀರಿದೆ ಅಂತನೂ ಹೇಳೋಕೆ ಆಗಲ್ಲ. ಬೀರಿಲ್ಲ ಅಂತನೂ ಹೇಳೋಕೆ ಆಗಲ್ಲ. ಹೀಗೆಲ್ಲಾ ಜನರ ಮನೋಭಾವ ಮೊದಲಿನ ರೀತಿ ಇಲ್ಲ. ಮೊದಲೆಲ್ಲಾ ಜನರಿಗೆ ಮಾಹಿತಿ ಕೊರತೆ ಇರ್ತಿತ್ತು. ಪೇಪರ್ ನೋಡಿ ಮಾಹಿತಿ ಪಡೀತಾ ಇದ್ರು ಡಿಸೈಡ್ ಮಾಡ್ತಿದ್ರು. ಈಗ ಏನ್ ನಡೀತಾ ಇದೆ ಅಂತ ಸೆಕೆಂಡ್ನಲ್ಲಿ ಪಿಕ್ಚರ್ ಸಿಕ್ತಿದೆ. ಅಷ್ಟು ಫಾಸ್ಟ್ ಆಗಿ ಜನರಿಗೆ ಮಾಹಿತಿ ಸಿಕ್ತಿದೆ. ಜನರು ಕೂಡಾ ಒಂದೊಂದು ಮಾಹಿತಿ ಬಂದಾಗ, ಒದೊಂದು ವಿಚಾರ ಬಂದಾಗಲೂ ಒಂದೊಂದು ರೀತಿಯ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಾರೆ. ಇವತ್ತಿನ ಪಾಲಿಟಿಕ್ಸ್ ಬಹಳ ಫಾಸ್ಟ್ ಇದೆ ಎಂದು ತಿಳಿಸಿದರು.
ನಾನು ಇವತ್ತು ಪರಮೇಶ್ವರ್ ಅವರ ಆರೋಗ್ಯ ವಿಚಾರಿಸಲು ಹೋಗ್ತಾ ಇದ್ದೀನಿ. ಅವರ ಬೆಂಬಲಿಗರಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಪರವಾಗಿಲ್ಲ ಚೆನ್ನಾಗಿದ್ದಾರೆ ಅಂದ್ರು. ಇವತ್ತು ಅಥವಾ ನಾಳೆ ಡಿಸ್ಚಾರ್ಜ್ ಆಗ್ತಾರೆ ಅಂದ್ರು. ಇವತ್ತು ವಿಚಾರಿಸಿದಾಗ ಯಾವುದೋ ಟೆಸ್ಟ್ ಇದೆ ಅಂದ್ರು. ಟೆಸ್ಟ್ ಬಳಿಕ ಡಿಸ್ಚಾರ್ಜ್ ಆಗಬಹುದು. ನಾನು ಇವಾಗ ಹೋಗಿ ಭೇಟಿ ಮಾಡ್ತೀನಿ ಎಂದರು. ಇದನ್ನೂ ಓದಿ: ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಸುರೇಶ್ಗೆ ಭರ್ಜರಿ ಗೆಲುವು – ನಾಲ್ಕೂ ಕ್ಷೇತ್ರ ಗೆದ್ದ ಎನ್ಡಿಎ
ಎಂಎಲ್ಸಿ ರಾಜೇಂದ್ರ, ಎಚ್ಡಿಕೆ ಭೇಟಿಯಾದ ಬಗ್ಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ಮಾತಾಡಲ್ಲ. ರಾಜೇಂದ್ರ ಒಬ್ಬರು ಎಂಎಲ್ಸಿ. ಯಾಕೆ ಭೇಟಿ ಮಾಡಿದ್ರು ಅಂತಾ ಅವರನ್ನೇ ಕೇಳಿ ಎಂದು ಹೇಳಿದರು.
