ಕೊಪ್ಪಳ: ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ ಎಂದು ಬೈಕ್ ಸವಾರನಿಗೆ ಕೊಪ್ಪಳದಲ್ಲಿ ಪೇದೆ ಮನವಿ ಮಾಡಿದ್ದಾರೆ.
Advertisement
ನಗರದ ಅಶೋಕ ವೃತ್ತದಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಮಾಸ್ಕ್ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಬೈಕ್ ಸವಾರ ಮಾಸ್ಕ್ ಹಾಕದೇ ರಸ್ತೆಯಲ್ಲಿ ಬರುತ್ತಿದ್ದ. ಇದನ್ನು ಗಮನಿಸಿದ ಪೊಲೀಸ್ ಪೇದೆ ವಾಹನ ಸವಾರನಿಗೆ ಮಾಸ್ಕ್ ಕೇಳಿದ್ದಾರೆ. ಅದಕ್ಕೆ ಆ ಸವಾರ ಬೇಕಿದ್ದರೆ ಮನೆಗೆ ಹೋಗಿ ತೆಗೆದುಕೊಂಡು ಬರ್ತೀನಿ ಎಂದು ಬೈಕ್ ಸವಾರ ಬೇಜವಾಬ್ದಾರಿಯಿಂದ ಉತ್ತರಿಸಿದ್ದಾನೆ. ಇದನ್ನೂ ಓದಿ: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್
Advertisement
Advertisement
ಬೈಕ್ ಸವಾರನ ಮಾತಿಗೆ ಗರಂ ಆದ ಪೊಲೀಸ್ ಪೇದೆ, ನಮಗೋಸ್ಕರ ಜೀವನ ಮಾಡ್ತೀರಾ? ನಿಮಗೆ ಒಳ್ಳೆಯದು ಆಗಲಿ ಎಂದು ನಾವು ಕೆಲಸ ಮಾಡುತ್ತಿದ್ದೇವೆ. ಮಾಸ್ಕ್ ಹಾಕಿ ಎಂದರೆ ನಮ್ಮ ಮೇಲೆ ಕೋಪ ಮಾಡಿಕೊಳ್ತೀರಾ. ನಾವು ನಿಮಗೆ ಒಳ್ಳೆಯದು ಹೇಳ್ತೀವಾ? ಕೆಟ್ಟದ್ದು ಹೇಳ್ತೀವಾ? ನಿಮ್ಮ ಜೀವನ ನಮಗೋಸ್ಕರ ಕಾಪಾಡ್ತಾ ಇದ್ದೀವಾ ಎಂದು ಪ್ರಶ್ನೆ ಕೇಳಿದ್ದಾರೆ.
Advertisement
ಎಲ್ಲ ಸಮಯದಲ್ಲಿ ಪೊಲೀಸರು ಇರೋದಿಲ್ಲ. ನಿಮ್ಮ ಸಲುವಾಗಿ ಮಾಸ್ಕ್ ಹಾಕಿ ಎಂದು ಹೇಳುತ್ತಿದ್ದೇವೆ ಎಂದು ಆತನಿಗೆ ಬುದ್ದಿವಾದ ಹೇಳಿದ್ದಾರೆ. ಬಳಿಕ ಪೊಲೀಸರು ಮಾಸ್ಕ್ ಹಾಕದ ಬೈಕ್ ಸವಾರಿನಿಗೆ ದಂಡ ಹಾಕಿದ್ದಾರೆ. ಇದನ್ನೂ ಓದಿ: ನಾವು ಆಪರೇಷನ್ ಕಮಲವನ್ನು ಬಲವಂತವಾಗಿ ಮಾಡಿಲ್ಲ: ರೇಣುಕಾಚಾರ್ಯ