ಶಶಾಂಕ್ ನಿರ್ದೇಶನದ ಸಿನಿಮಾದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ (Sudeep) ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಕೆಲ ಕಲಾವಿದರು ಸುದೀಪ್ ಅವರನ್ನು ಹಿರಿಯನಟ ಎಂದು ಕರೆಯುತ್ತಿದ್ದರು. ಅದನ್ನು ಗಮನಿಸಿದ ಕಿಚ್ಚ, ಸಹನಟರಿಗೆ ತಮಾಷೆ ಎನ್ನುವಂತೆ ಕಾಲೆಳೆದಿದ್ದಾರೆ. ನಾನು ಹಿರಿಯ ನಟ ಅಲ್ಲ, ಹಾಗೆ ಕರೆಯಬೇಡಿ ಎಂದು ನಗ್ತಾನೆ ಮಾತನಾಡಿದ್ದಾರೆ.
ಒಂದು ಕಡೆ ಸಿನಿಮಾ ಸಂಬಂಧಿ ನಾನಾ ಕಾರ್ಯಕ್ರಮಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದರೆ ಮತ್ತೊಂದು ಕಡೆ ಅವರದ್ದೇ ಹೊಸ ಸಿನಿಮಾದ ಕೆಲಸಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸುದೀಪ್ ನಟನೆಯ 46ನೇ ಸಿನಿಮಾಗೆ ತಮಿಳಿನ ಯುವ ನಿರ್ದೇಶಕ ವಿಜಯ್ ಕಾರ್ತಿಕೇಯ (Vijay Karthikeya) ಆ್ಯಕ್ಷನ್ ಕಟ್ ಹೇಳುತಿದ್ದು, ‘ವಿಕ್ರಾಂತ್ ರೋಣ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಎಂದೂ ಕಾಣಿಸಿಕೊಂಡಿರದ ಹೊಸ ಅವತಾರದಲ್ಲಿ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಸದ್ಯ Kiccha 46 ಸಿನಿಮಾ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.
ದೊಡ್ಡ ಕಥೆದು ಚಿಕ್ಕ ಸಂದರ್ಭ ಹೇಳೋದಾ ಎಂದು ಹೇಳುವ ಡೈಲಾಗ್ ಮೂಲಕ ಕಿಚ್ಚ ಸುದೀಪ್ ರಾ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಒಬ್ಬನನ್ನ ಮುಗಿಸೋಕೆ ಅಷ್ಟು ಜನ ಹೋಗಿದ್ದಾರಾ. ಇನ್ನೂ ಅವನನ್ನ ಸಾಯಿಸಿಲ್ವ ಅನ್ನೋ ಕೆಡಿ ಖಡಕ್ ಮಾತಿಗೆ ಗನ್ ಹಿಡಿದು ಸುದೀಪ್ ರಗಡ್ ಆಗಿ ಎಂಟ್ರಿ ನೀಡಿದ್ದಾರೆ. ಯುದ್ಧ ನಾ ಹುಟ್ಟು ಹಾಕೋರನ್ನ ಕಂಡರೆ ಆಗಲ್ಲ. ಯುದ್ಧಕ್ಕೆ ಹೆದರಿಕೊಂಡು ಓಡಿಹೋಗೋರನ್ನ ಕಂಡರೂ ನನಗೆ ಆಗಲ್ಲ. ಅಖಾಡಕ್ಕೆ ಇಳಿದು ಎದುರಾಳಿಗಳ ಎದೆ ಬಗೆದು ರಕ್ತ ಚೆಲ್ಲಾಡಿ, ಆ ರಕ್ತ ಸುರಿಸಿಕೊಂಡು ಓಡಿ ಹೋಗೋದನ್ನ ನೋಡೋನು ನಾನು. ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದ್ಯಾವುದು ಇರೋದಿಲ್ಲ ಎಂದು ಎದುರಾಳಿಗಳಿಗೆ ಸುದೀಪ್ ಖಡಕ್ ಡೈಲಾಗ್‌ನಿಂದ ವಾರ್ನಿಂಗ್ ನೀಡಿದ್ದಾರೆ. ಚಿತ್ರದ ಮೊದಲ ಟೀಸರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾನು ಮನುಷ್ಯನಲ್ಲ, ರಾಕ್ಷಸ ಎಂದು ಹೇಳುವ ಕಿಚ್ಚನ ಖಡಕ್ ಮಾತು ಅಭಿಮಾನಿಗಳ ಗಮನ ಸೆಳೆದಿದೆ.
ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್’ ಜೊತೆ ಕಿಚ್ಚ ಸುದೀಪ್ ಕೈ ಜೋಡಿಸಿದ್ದಾರೆ. ಕಿಚ್ಚನ 46ನೇ ಚಿತ್ರಕ್ಕೆ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಕಬಾಲಿ, ತುಪಾಕಿ, ಅಸುರನ್, ಸಿನಿಮಾಗಳಂತಹ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಕಲೈಪುಲಿ ಎಸ್. ಧಾನು ಅವರು ಸುದೀಪ್ ಅವರ ಈ ಚಿತ್ರಕ್ಕೆ ಸಾಥ್ ನೀಡ್ತಿದ್ದಾರೆ.
ಕಿಚ್ಚ ಸುದೀಪ್ ಸಿನಿಮಾಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಖುಷಿ ಪಡೋವಂತಹ ರಗಡ್ ಟೀಸರ್ ಸಿಕ್ಕಿದೆ. ಸುದೀಪ್ ರಣ ರಣ ರಕ್ತ ಸಿಕ್ತ ಅವತಾರ ನೋಡಿ ಕಿಚ್ಚ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
Web Stories