ತಮ್ಮ ಕುಚಿಕು ಗೆಳೆಯ ವಸಿಷ್ಠ ಸಿಂಹ ಮದುವೆಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ ಡಾಲಿ ಧನಂಜಯ್. ಮದುವೆ ಆಮಂತ್ರಣ ಕೊಡುವುದಕ್ಕಾಗಿ ತಮ್ಮ ಮನೆಗೆ ಬಂದ ವಸಿಷ್ಠ ಮತ್ತು ಹರಿಪ್ರಿಯಾಗೆ ಪ್ರೀತಿಯಿಂದಲೇ ಸ್ವಾಗತಿಸಿ , ‘ಒಬ್ಬನೆ ಬರ್ತಿದ್ದ, ಇವತ್ತು ಇಬ್ಬರು ಬಂದಿದ್ರು ಮದುವೆಗೆ ಕರಿಯೋದಕ್ಕೆ. ಮುದ್ದಾದ ಜೋಡಿ. ಇಬ್ಬರೂ ಸದಾ ಖುಷಿಯಿಂದ ಇರಲಿ’ ಎಂದು ಹಾರೈಸಿದ್ದಾರೆ.
Advertisement
ಡಾಲಿ ಮತ್ತು ವಸಿಷ್ಠ ಸಿಂಹ ಸದಾ ಅಂಟಿಕೊಂಡೇ ಇರುತ್ತಿದ್ದವರು. ಸಿನಿಮಾದಾಚೆಯೂ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಆದರೂ, ವಸಿಷ್ಠ ಮದುವೆ ಆಗುವ ವಿಚಾರ ಡಾಲಿಗೆ ಗೊತ್ತಿರಲಿಲ್ಲ. ಹರಿಪ್ರಿಯಾ ಜೊತೆ ಗೆಳೆಯ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾನೆ ಎನ್ನುವ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಆ ರೀತಿಯಲ್ಲಿ ಸಿಂಹ ಗುಟ್ಟನ್ನು ಕಾಪಾಡಿಕೊಂಡು ಬಂದಿದ್ದರು. ಹರಿಪ್ರಿಯಾ ಜೊತೆ ಗೆಳೆಯನಂತೆ ಇದ್ದಾನೆ ಎನ್ನುವುದು ಗೊತ್ತಿತ್ತು. ಆದರೆ, ಇಬ್ಬರೂ ಮದುವೆ ಆಗುತ್ತಾರೆ ಎಂದು ಗೊತ್ತಿರಲಿಲ್ಲ ಎಂದೂ ನುಡಿದಿದ್ದರು.
Advertisement
Advertisement
ನಿನ್ನೆಯಷ್ಟೇ ವಸಿಷ್ಠ ಸಿಂಹ ತಮ್ಮ ಲವ್ ಕಹಾನಿಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಹರಿಪ್ರಿಯಾ ಅವರು ಪರಿಚಯ ಆದ ದಿನದಿಂದ ಎಂಗೇಜ್ ಮೆಂಟ್ ವರೆಗಿನ ವಿಷಯವನ್ನು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಗೆಳೆಯ ಡಾಲಿಗೂ ಒಂದು ಕಿವಿಮಾತು ಹೇಳಿದ್ದು, ಆದಷ್ಟು ಬೇಗ ನೀನು ಮದುವೆ ಆಗುವ ಎಂದು ಸಲಹೆಯನ್ನು ನೀಡಿದ್ದಾರೆ. ಹೊಸ ಜೀವನಕ್ಕೆ ನೀನೂ ಕಾಲಿಟ್ಟು, ಖುಷಿಯಿಂದ ಇರು ಎಂದು ಹಾರೈಸಿದ್ದಾರೆ.
Advertisement
ಅಂದಹಾಗೆ ಈ ಜೋಡಿ ಮೈಸೂರಿನ ಆಶ್ರಮವೊಂದರಲ್ಲಿ ಜನವರಿ 26 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಜನವರಿ 28 ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಮದುವೆಗೆ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗಿ ಆಗುತ್ತಿದ್ದು, ಆರತಕ್ಷತೆ ಸಿನಿಮಾ ರಂಗದ ಕಲಾವಿದರು, ತಂತ್ರಜ್ಞರು ಮತ್ತು ನಿರ್ದೇಶಕರು ಹಾಗೂ ಗಣ್ಯರಿಗೆ ಆಹ್ವಾನ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k