ಜೈಪುರ: ರಾಜಸ್ಥಾನದ (Rajasthan) ರಾಜಧಾನಿ ಜೈಪುರದ (Jaipur) ಸರ್ಕಾರಿ ಆಸ್ಪತ್ರೆಯಲ್ಲಿ (Hospital) ತೀವ್ರ ನಿರ್ಲಕ್ಷ್ಯದ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಾಯಿಯೊಂದು (Dog) ಸತ್ತ ಭ್ರೂಣವನ್ನು (Fetus) ಕಚ್ಚಿಕೊಂಡು ತಿರುಗಾಡುತ್ತಿದ್ದುದು ಕಂಡುಬಂದಿದ್ದು, ಘಟನೆಯ ಬಗ್ಗೆ ತೀವ್ರವಾಗಿ ತನಿಖೆ ನಡೆಯುತ್ತಿದೆ.
ಭಾನುವಾರ ಸಂಜೆ ಜೈಪುರ ಜಿಲ್ಲೆಯ ಸಂಗನೇರಿ ಗೇಟ್‌ನಲ್ಲಿರುವ ಮಹಿಳಾ ಆಸ್ಪತ್ರೆಯ ಗೇಟ್ ನಂ.1 ರ ಹೊರಗೆ ಬಾಯಲ್ಲಿ ಭ್ರೂಣವನ್ನು ಕಚ್ಚಿಕೊಂಡು ತಿರುಗಾಡುತ್ತಿದ್ದ ನಾಯಿಯನ್ನು ಸ್ಥಳೀಯರು ಗಮನಿಸಿದ್ದಾರೆ. ಜನರು ನಾಯಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಅದು ಭ್ರೂಣವನ್ನು ಆಮ್ಲಜನಕ ಘಟಕದ ಬಳಿ ಬಿಟ್ಟು, ಆಸ್ಪತ್ರೆಯ ಗೋಡೆಯ ಮೇಲೆ ಹೋಗಿ ಕುಳಿತಿದೆ.
Advertisement
Advertisement
ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಲಾಲ್ ಕೋಠಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಸೋಮವಾರ ಭ್ರೂಣದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಭ್ರೂಣ 8 ತಿಂಗಳದ್ದಾಗಿದ್ದು, ಗಂಡು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ- 15ರ ಬಾಲಕಿ ಸಾವು
Advertisement
ಮೃತ ಭ್ರೂಣದ ಕುಟುಂಬದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಭ್ರೂಣ ಆಸ್ಪತ್ರೆಯಲ್ಲಿ ಸತ್ತಿದ್ದು, ಅದನ್ನು ಕೊಂಡೊಯ್ಯಲು ಹಿಂಜರಿದ ಕುಟುಂಬದವರು ರಸ್ತೆಯಲ್ಲಿ ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Advertisement
ಘಟನಾ ಸ್ಥಳದ ಸುತ್ತಮುತ್ತ ಯಾವುದೇ ಸಿಸಿಟಿವಿ ಅಳವಡಿಸಲಾಗಿಲ್ಲ. ಅಧಿಕಾರಿಗಳು ನವೆಂಬರ್ 15ರಿಂದ ಆಸ್ಪತ್ರೆಯಲ್ಲಿ ಜನಿಸಿರುವ ಮಕ್ಕಳ ಮಾಹಿತಿಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನನ್ನು ಹತ್ಯೆಗೈದು ಮೃತದೇಹದ ಜೊತೆ ಠಾಣೆಗೆ ಆಗಮಿಸಿದ ಭೂಪ