Bengaluru CityCrimeDistrictsKarnatakaLatestLeading NewsMain Post

ಸ್ನೇಹಿತನನ್ನು ಹತ್ಯೆಗೈದು ಮೃತದೇಹದ ಜೊತೆ ಠಾಣೆಗೆ ಆಗಮಿಸಿದ ಭೂಪ

ಬೆಂಗಳೂರು: ಮೃತದೇಹದ ಜೊತೆ ಭೂಪನೊಬ್ಬ ಠಾಣೆಗೆ ಆಗಮಿಸಿ  ಪೊಲೀಸರಿಗೆ(Bengaluru Police) ಶಾಕ್‌ ಕೊಟ್ಟ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.

ಸೋಮವಾರ ರಾತ್ರಿ ವ್ಯಕ್ತಿಯೊಬ್ಬ ಕಾರಿನಲ್ಲೇ ಮೃತದೇಹವನ್ನು ಹೊತ್ತುಕೊಂಡು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ(Ramamurthy Nagar Police Station) ತಂದಿದ್ದಾನೆ. ಈಗ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಅರೆಸ್ಟ್‌ ಮಾಡಿದ್ದಾರೆ.

ಏನಿದು ಘಟನೆ?
ನಂಜನಗೂಡು ಮೂಲದ ಮಹೇಶಪ್ಪ ಹಿಂದೆ ರಾಮಮೂರ್ತಿ ನಗರದ ಜಯಂತಿ ನಗರದಲ್ಲಿ ವಾಸಿಸುತ್ತಿದ್ದ. ಈ ವೇಳೆ ರಾಜಶೇಖರನ ಪರಿಚಯವಾಗಿದ್ದು ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ

ಬ್ಯಾಂಕ್‌ನಿಂದ ಸಾಲ(Bank Loan) ಕೊಡಿಸುವುದಾಗಿ ಹಲವಾರು ಜನರಿಂದ ಮಹೇಶಪ್ಪ ಹಣ ಪಡೆದಿದ್ದ. ಈ ಎಲ್ಲಾ ವ್ಯವಹಾರಗಳಲ್ಲೂ ರಾಜಶೇಖರ ಮತ್ತು ಆತನ ತಾಯಿ ಸುವಿಧಾ ಜೊತೆಗಿದ್ದರು. ಆದರೆ ಯಾರಿಗೂ ಸಾಲ ನೀಡದೇ ಪಡೆದ ಹಣ ವಾಪಸ್‌ ಕೊಡದೇ ಮಹೇಶಪ್ಪ ಪರಾರಿಯಾಗಿದ್ದ.

ಸಾಲ ನೀಡಿದವರು ಪ್ರಶ್ನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಮನೆಯನ್ನೇ ಮಾರಿ ಹಲವರಿಗೆ ಕೊಡಬೇಕಿದ್ದ ಹಣವನ್ನು ರಾಜಶೇಖರ ನೀಡಿದ್ದ. ಈ ಕಾರಣಕ್ಕೆ ಒಂದೂವರೆ ಕೋಟಿ ರೂ.ಗಾಗಿ ರಾಜಶೇಖರ ಮಹೇಶಪ್ಪನನ್ನು ಹುಡುಕಿಕೊಂಡು ಹಳ್ಳಿಗೆ ಹೋಗಿದ್ದ.

ನಂಜನಗೂಡು ಬಳಿಯ ಹಿಮನಗುಂಡಿ ಹಳ್ಳಿಯಿಂದ ಮಹೇಶಪ್ಪನನ್ನು ಭಾನುವಾರ ಬೆಂಗಳೂರಿಗೆ ಕಾರಿನಲ್ಲಿ ರಾಜಶೇಖರ ಕರೆತಂದಿದ್ದ. ರಾತ್ರಿ ಅವಲಹಳ್ಳಿ ಬಳಿ ಹಣ ವಾಪಸ್ ನೀಡುವಂತೆ ಹಠ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಸಿಟ್ಟಾದ ರಾಜಶೇಖರ ಮಹೇಶಪ್ಪನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ಬಳಿಕ ಬೆಳಗ್ಗಿನ ತನಕ ಗಾಯಾಳುವನ್ನು ಕಾರಿನಲ್ಲಿ ರಾಜಶೇಖರ ಇರಿಸಿಕೊಂಡಿದ್ದ. ಬೆಳಗಿನ ಜಾವ ಎಚ್ಚರವಾಗಿ‌ ನೋಡಿದಾಗ ಮಹೇಶಪ್ಪ ಮೃತಪಟ್ಟಿರುವುದು ಗೊತ್ತಾಗಿದೆ.

ಸೋಮವಾರ ರಾತ್ರಿ ಕಾರು, ಮೃತದೇಹ, ಹಲ್ಲೆ ಮಾಡಿದ್ದ ರಾಡ್ ಸಹಿತ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಆಗಮಿಸಿ ರಾಜಶೇಖರ ಪೊಲೀಸರ ಮುಂದೆ ಶರಣಾಗಿ ನಡೆದ ಘಟನೆಯನ್ನು ವಿವರಿಸಿದ್ದಾನೆ.

Live Tv

Leave a Reply

Your email address will not be published. Required fields are marked *

Back to top button