ಬೆಂಗಳೂರು: ಕಳೆದ 6 ವರ್ಷಗಳಿಂದ ಮನೆಯಲ್ಲಿ ಮಗುವಿನಂತೆ ಸಾಕಿದ್ದ ನಾಯಿಯೊಂದು ಕಾಣೆಯಾಗಿದ್ದು, ಅದರ ಮಾಲೀಕರು ನಾಯಿಗಾಗಿ ಹುಡುಕಾಡಿದ ಜಾಗವಿಲ್ಲ. ನಾಯಿಯ ನೆನಪಿನಲ್ಲಿ ಒಂದೂವರೆ ತಿಂಗಳಿಂದ ಮನೆ ಬಾಗಿಲನ್ನೇ ಮುಚ್ಚಿಲ್ಲ. ಅಲ್ಲದೇ ನಾಯಿ ಹುಡುಕಿಕೊಟ್ಟವರಿಗೆ 30 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
Advertisement
ಹೌದು, ಬೆಂಗಳೂರಿನ ಬಸವೇಶ್ವರನಗರದ ನಿವಾಸಿಯಾಗಿರುವ ಗುರುಪ್ರಿಯಾ ಅವರು ಕಳೆದ 6 ವರ್ಷದಿಂದ ಮನೆಯಲ್ಲಿ ಗುಂಡಾ ಅನ್ನೋ ಬ್ಲಾಕ್ ಡಾಗ್ ಅನ್ನು ಸಾಕುತ್ತಿದ್ದರು. ಆದರೆ ಕಳೆದ ತಿಂಗಳು ವಾಕಿಂಗ್‍ಗೆ ಹೋದಾಗ ನಾಯಿ ಮಿಸ್ ಆಗಿದೆ. ಅಂದಿನಿಂದ ಮಹಿಳೆ ಸರಿಯಾಗಿ ಊಟ ಮಾಡಿಲ್ಲ, ನಿದ್ದೆ ಮಾಡಿಲ್ಲ, ಮನೆ ಬಾಗಿಲನ್ನು ಸಹ ಹಾಕದೇ ಕಳೆದು ಹೋದ ನಾಯಿ ವಾಪಸ್ ಬರುತ್ತದೆ ಎಂದು ಕಾಯುತ್ತಾ ಕುಳಿತಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ವಿವಾಹಕ್ಕೆ ಅಡ್ಡಿ – ರಕ್ಷಣೆಗೆ ಖಾಕಿ ಮೊರೆ ಹೋದ ಜೋಡಿ
Advertisement
Advertisement
ಕಳೆದ ತಿಂಗಳು ಕಾಣೆಯಾದ ಈ ಗುಂಡ ನಾಯಿಯನ್ನ ಇವರು ಮಗುವಿನಂತೆ ಸಾಕಿದ್ರು, ನಾಯಿ ಹುಡುಕಿಕೊಡಿ ಅಂತಾ ಪೊಲೀಸ್ರಿಗೆ ದೂರು ನೀಡಿದ್ರು, ಮನೆಮನೆಗೆ ಕರಪತ್ರ ಹಂಚಿಕೆ ಮಾಡಿದ್ರು, ನಾಯಿ ಹುಡುಕಿಕೊಟ್ಟವರಿಗೆ 30 ಸಾವಿರ ಬಹುಮಾನ ಅಂತಾ ಘೋಷಣೆ ಕೂಡ ಮಾಡಿದ್ರು. ಅದರೇ ಒಂದುವರೆ ತಿಂಗಳಾದ್ರೂ ನಾಯಿ ಪತ್ತೆಯೇ ಆಗಿಲ್ಲ. ನಾಯಿ ಬಂದೇ ಬರುತ್ತೆ ಅಂತಾ ನಾಯಿಯ ನೆನಪಿನಲ್ಲಿ ಕಾಲ ಕಳೆಯುತ್ತಿದ್ದಾರೆ.
Advertisement
ಗುಂಡ ಎಂಬ ನಾಯಿಗೆ ಎರಡು ವರ್ಷದ ಹೆಣ್ಣು ಮರಿ ಇದೆ. ಅಲ್ಲದೇ ತಂದೆ ಕಾಣದೇ ಊಟ ತಿಂಡಿ ಬಿಟ್ಟು ಅದು ಕೂಡ ಒಂದು ಮೂಲೆ ಸೇರಿದೆ. ತಂದೆಗಾಗಿ ಮೂಕವೇದನೆ ಅನುಭವಿಸುತ್ತಿದೆ. ಕಳೆದ ಹೋದ ನಾಯಿಗಾಗಿ ಮನೆ ಮಂದಿಯಲ್ಲ ಹುಡುಕಾಟ ಮಾಡಿ, ಮಾಡಿ ಸಾಕಾಗಿದ್ದಾರೆ. ಇದನ್ನೂ ಓದಿ: ಮನಬಂದಂತೆ ಗುಂಡಿನ ದಾಳಿ- ಕಿರಾತಕನ ಗುಂಡೇಟಿಗೆ ನಾಲ್ವರು ಬಲಿ, ಆರೋಪಿ ಪರಾರಿ
ನಾಯಿ ಸಿಕ್ಕಿದರೇ ಪೋಲಿಸರಿಗೆ ಮಾತ್ರವಲ್ಲ, ಬಿಬಿಎಂಪಿಗೂ ತಂದು ಕೊಡಿ ಎಂದು ಮನವಿ ಮಾಡಿದ್ದಾರೆ. ನೀವೇನಾದರೂ ಈ ನಾಯಿಯನ್ನು ಕಂಡರೆ ದಯಮಾಡಿ ಬಸವೇಶ್ವರನಗರ ಪೊಲೀಸರಿಗೆ ಮಾಹಿತಿ ನೀಡಿ ಎಂದು ಗುರುಪ್ರಿಯ ಅವರು ಮನವಿ ಮಾಡಿದ್ದಾರೆ.