Connect with us

Districts

ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

Published

on

ವಿಜಯವಾಡ: ನಿಮಗೆ ಮಟನ್ ಅಂದ್ರೆ ತುಂಬಾ ಇಷ್ಟಾನಾ..? ವೀಕೆಂಡಲ್ಲಿ ಯಾಕೆ ಮಟನ್ ಹೆಸರೇಳಿ ಬಾಯಲ್ಲಿ ನೀರೂರಿಸ್ತಿದೀರಿ ಅಂದ್ಕೋತಿದೀರಾ.. ಕಾರಣವಿದೆ, ಇನ್ಮುಂದೆ ಹೋಟೆಲ್ ಗೆ ಹೋಗಿ ನಾನ್ ವೆಜ್ ತಿನ್ನಬೇಕಾದರೆ ಸ್ವಲ್ಪ ಜಾಗರೂಕರಾಗಿರಿ. ಯಾಕೆಂದರೆ ನಿಮಗೆ ಮಟನ್ ಅಂತಾ ನಾಯಿ ಮಾಂಸವನ್ನು ಕೊಟ್ಟರೂ ಕೊಡಬಹುದು. ಅದರಲ್ಲೂ ಆಂಧ್ರದ ಮೈಲಾವರಂಗೆ ಹೋದರೆ ಮಾತ್ರ ಯಾವ ಕಾರಣಕ್ಕೂ ನಾನ್ ವೆಜ್ ತಿನ್ನಲೇಬೇಡಿ.

ಬೀದಿ ನಾಯಿಗಳನ್ನು ಹಿಡಿದು ಹಣಕ್ಕಾಗಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೃಷ್ಣಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಜಿ.ಕೊಂಡೂರಿನ ಕೋಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಏನಿದು ಘಟನೆ?: ಕೋಡೂರು ಗ್ರಾಮದ ಕಟ್ಟಾ ಆದಿನಾರಾಯಣ ಹಾಘೂ ದೇಗು ಲಕ್ಷ್ಮಣ ರಾವ್ ಎಂಬಿಬ್ಬರು ಕೆಲ ತಿಂಗಳಿಂದ ಬೀದಿ ನಾಯಿಗಳನ್ನು ಹಿಡಿಯೋದನ್ನೇ ಕಾಯಕ ಮಾಡಿದ್ದರು. ಆದರೆ ಕಳೆದ ಶುಕ್ರವಾರ ಇವರ ನಸೀಬು ಕೆಟ್ಟಿತ್ತು. ಅಂದು ಇವರು ನಾಯಿ ಹಿಡಿದು ಮಾಂಸವನ್ನು ಮಾರಾಟ ಮಾಡಿ ನಾಯಿಯ ಚರ್ಮವನ್ನು ಎಸೆಯಲು ಹೋಗುತ್ತಿದ್ದಾಗ ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಇವರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ವೇಳೆ ಇಬ್ಬರು ಖತರ್ನಾಕ್ ಗಳು ತಾವು ಇದುವರೆಗೆ 20ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಅದರ ಮಾಂಸ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ನಾಯಿ ಮಾಂಸವನ್ನೇ ಇವರು ಜಿಂಕೆ ಹಾಗೂ ಕುರಿ ಮಾಂಸ ಎಂದು ನಂಬಿಸಿ ಕೆಲವು ವ್ಯಕ್ತಿಗಳಿಗೆ ಹಾಗೂ ಹೋಟೆಲ್ ಗಳಿಗೆ ಮಾರಾಟ ಮಾಡುತ್ತಿದ್ದರು. ನಾಯಿ ಮಾಂಸದ ರುಚಿ ಹಿಡಿದ ಕೆಲವರು ಜಿಂಕೆ ಮಾಂಸವೆಂದು ಇವರ ಬಳಿ ಪದೇ ಪದೇ ಮಾಂಸಕ್ಕಾಗಿ ಬೇಡಿಕೆ ಇಡುತ್ತಿದ್ದರು. ಪ್ರತಿ ಕೆಜಿ ನಾಯಿ ಮಾಂಸಕ್ಕೆ ಇವರು 300 ರಿಂದ 400 ರೂ. ಪಡೆಯುತ್ತಿದ್ದರು. ಈ ಮೂಲಕ ಪ್ರತಿ ನಾಯಿಯನ್ನು ಕೊಂದು ಸರಾಸರಿ 3000 ರೂ. ಆದಾಯ ಗಳಿಸುತ್ತಿದ್ದರು. ಪ್ರಾಣಿ ಕಾಯ್ದೆ ಪ್ರಕಾರ ಇವರ ವಿರುದ್ಧ ದೂರು ದಾಖಲಿಸಿ ಪೊಲಿಸರು ತನಿಖೆ ಮುಂದುವರಿಸಿದ್ದಾರೆ. ಜೊತೆಗೆ ಇವರಿಂದ ಮಾಂಸ ಖರೀದಿ ಮಾಡುತ್ತಿದ್ದವರ ವಿವರವನ್ನೂ ಪಡೆದುಕೊಂಡಿದ್ದು ಅವರ ವಿಚಾರಣೆಯೂ ನಡೆಯಲಿದೆ ಎನ್ನಲಾಗಿದೆ. ಇವರಿಬ್ಬರೂ ಮೈಲಾವರಂ ಮತ್ತು ಅಕ್ಕಪಕ್ಕದ ಹಳ್ಳಿಗಳಿಗೆ ಮಾಂಸ ಪೂರೈಸುತ್ತಿದ್ದರು.

ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಕೊಂಡೂರು ಎಸ್‍ಐ ಜಿ.ರಾಜೇಶ್ ನಾಯಿಗಳನ್ನು ಕೊಂದಿದ್ದಕ್ಕೆ ಹಾಗೂ ಪ್ರಾಣಿ ಹಿಂಸೆಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಸದ್ಯ ಪಶುವೈದ್ಯರು ಮಾಂಸದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಕ್ರಮಕೈಗೊಳ್ಳೋದಾಗಿ ಹೇಳಿದ್ದಾರೆ.

https://www.youtube.com/watch?v=i-BbqCr-Org

Click to comment

Leave a Reply

Your email address will not be published. Required fields are marked *