ಕಾಲಿವುಡ್ ನಟ ಧನುಷ್ (Dhanush) ಹಾಗೂ ಮೃಣಾಲ್ ಠಾಕೂರ್ (Mrunal Thakur) ಡೇಟಿಂಗ್ ವಿಚಾರ ಜಗಜ್ಜಾಹೀರಾಗುತ್ತಿದೆ. ಇಬ್ಬರೂ ಒಟ್ಟೊಟ್ಟಿಗೆ ಇರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿವೆ. ಹೀಗೆ ವೈರಲ್ ಆಗ್ತಿರುವ ಇವರು ಮದುವೆ ಕೂಡಾ ಆಗಲಿದ್ದಾರೆ ಅನ್ನೋ ಗಾಳಿ ಸುದ್ದಿ ಸಿನಿದುನಿಯಾದಲ್ಲಿ ಗಿರ್ಕಿ ಹೊಡೆಯುತ್ತಿದೆ. ಮದುವೆ ಅಂತಾದರೆ ಈ ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟಿದೆ ಅಂತನ್ನೋ ಚರ್ಚೆಗಳು ಕೂಡಾ ಶುರುವಾಗಿವೆ.
`ಸೀತಾ ರಾಮಂ’ ಬೆಡಗಿ ಮೃಣಾಲ್ ಠಾಕೂರ್ ಆಗಸ್ಟ್ 1, 1992ರಲ್ಲಿ ಜನಿಸಿದ್ದಾರೆ, ಅಲ್ಲಿಗೆ ಮೃಣಾಲ್‌ಗೆ 33 ವರ್ಷ. ಇನ್ನು ನಟ ಧನುಷ್ ಜುಲೈ 28, 1983ರಲ್ಲಿ ಜನಿಸಿದ್ದಾರೆ, ಅಲ್ಲಿಗೆ ನಟ ಧನುಷ್‌ಗೆ 42 ವರ್ಷ. ನಟ ಧನುಷ್ ಹಾಗೂ ನಟಿ ಮೃಣಾಲ್ ನಡುವೆ 9 ವರ್ಷಗಳ ಅಂತರವಿದೆ. ಈಗಾಗಲೇ ನಟ ಧನುಷ್ ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಜೊತೆ ಮದುವೆಯಾಗಿ 18 ವರ್ಷಗಳ ಬಳಿಕ ವಿಚ್ಚೇಧನವನ್ನ ಕೂಡಾ ನೀಡಿದ್ದಾರೆ.
2022ರಲ್ಲಿ ರಜನಿಕಾಂತ್ ಪುತ್ರಿ ಐಶ್ವರ್ಯ ಜೊತೆ ಸಪರೇಷನ್ ಬಗ್ಗೆ ಘೋಷಣೆ ಮಾಡಿದ್ದರು ನಟ ಧನುಷ್. ನಂತರ 2024ರಲ್ಲಿ ವಿಚ್ಚೇಧನ ಪಡೆದುಕೊಂಡಿದ್ದಾರೆ. ಇದೀಗ ನಟ ಧನುಷ್ ಹಾಗೂ ಮೃಣಾಲ್ ನಡುವೆ ಇಲ್ಲ ಸಲ್ಲದ ಸುದ್ದಿಗಳು ಮುನ್ನೆಲೆಗೆ ಬರುತ್ತಿವೆ. ಸನ್ ಆಫ್ ಸರ್ಧಾರ್-2 ಸಿನಿಮಾದ ಪ್ರೀಮಿಯರ್‌ನಲ್ಲಿ ನಟ ಧನುಷ್ ಭಾಗಿಯಾಗಿದ್ದಾರೆ. ಅಲ್ಲದೇ ಆಗಸ್ಟ್ 1ರಂದು ಮೃಣಾಲ್ ಬರ್ತ್ಡೇ ಪಾರ್ಟಿಯಲ್ಲೂ ಧನುಷ್ ಪ್ರತ್ಯಕ್ಷರಾಗಿದ್ದಾರೆ ಎನ್ನಲಾಗ್ತಿದೆ. ಈ ಜೋಡಿ ಒಂದಾದರೆ ಚೆಂದ ಎಂದು ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.