ನವದೆಹಲಿ: ಕೋವಿಡ್-19 ವಿರುದ್ಧದ ಕೋವ್ಯಾಕ್ಸಿನ್ ಲಸಿಕೆ ಪಡೆದ ನಂತರ ಮಕ್ಕಳಿಗೆ ನೋವು ನಿವಾರಕ ಅಥವಾ ಪ್ಯಾರಸಿಟಮಲ್ ಮಾತ್ರೆಯನ್ನು ನೀಡುವುದಿಲ್ಲ ಎಂದು ಲಸಿಕಾ ತಯಾರಿಕೆ ಕಂಪನಿ ಭಾರತ್ ಬಯೋಟೆಕ್ ಬುಧವಾರ ತಿಳಿಸಿದೆ.
ಕೆಲವು ರೋಗನಿರೋಧಕ ಕೇಂದ್ರಗಳು, ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿದ ನಂತರ ಜೊತೆಯಲ್ಲಿ 500 ಮಿ.ಗ್ರಾಂ. ಪ್ಯಾರಸಿಟಮಲ್ ಮಾತ್ರೆಯನ್ನು ನೀಡುವಂತೆ ಶಿಫಾರಸು ಮಾಡಿವೆ. ಆದರೆ ಅಂತಹ ಕ್ರಮ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: 11 ಬಾರಿ ಕೋವಿಡ್ -19 ಲಸಿಕೆ ಪಡೆದ 84 ವರ್ಷದ ವೃದ್ಧ
Advertisement
Advertisement
ಈ ಕುರಿತು ಟ್ವೀಟ್ ಮಾಡಿರುವ ಭಾರತ್ ಬಯೋಟೆಕ್, ಕೋವಿಡ್ ವಿರುದ್ಧದ ಇತರೆ ಲಸಿಕೆಗಳನ್ನು ಪಡೆದರೆ ಪ್ಯಾರಸಿಟಮಲ್ ಮಾತ್ರೆ ಅಗತ್ಯವಿರಬಹುದು. ಆದರೆ ಕೋವ್ಯಾಕ್ಸಿನ್ ಪಡೆದವರಿಗೆ ಮಾತ್ರೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
Advertisement
30,000 ಮಂದಿಯನ್ನು ಕ್ಲಿನಿಕಲ್ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಲಸಿಕೆ ಪಡೆದ ನಂತರ ಶೇ.10-20 ರಷ್ಟು ಮಾತ್ರ ದೇಹದಲ್ಲಿ ಅಡ್ಡಪರಿಣಾಮ ಬೀರಬಹುದು. ಅದು ಕೂಡ ಸೌಮ್ಯವಾಗಿದ್ದು, ಒಂದೆರಡು ದಿನದಲ್ಲಿ ಸರಿಯಾಗುತ್ತದೆ. ಅದಕ್ಕಾಗಿ ಔಷಧದ ಅಗತ್ಯವಿಲ್ಲ. ಒಂದು ವೇಳೆ ವೈದ್ಯರನ್ನು ಸಂಪರ್ಕಿಸುವ ಸಂದರ್ಭ ಬಂದರೆ ಮಾತ್ರ ಅವರು ಔಷಧ ತೆಗೆದುಕೊಳ್ಳಲು ಶಿಫಾರಸು ಮಾಡುತ್ತಾರೆ ಎಂದು ಹೇಳಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಸ್ಫೋಟ – 4,246 ಪಾಸಿಟಿವ್, ಇಬ್ಬರು ಬಲಿ
Advertisement
12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಬಹುದು ಎಂದು ಕಳೆದ ತಿಂಗಳು ಡಿಸಿಜಿಐ ಅನುಮೋದನೆ ನೀಡಿತ್ತು. ಇದಾದ ಬಳಿಕೆ ಪ್ರಧಾನಿ ನರೇಂದ್ರ ಮೋದಿ ಅವರು, ಜ.3ರಿಂದ 15-18 ವಯಸ್ಸಿನ ಮಕ್ಕಳಿಗೆ ಕೋವಿಡ್ ವಿರುದ್ಧದ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು. ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭವಾಗಿದ್ದು, ಈವರೆಗೆ 85 ಲಕ್ಷ ಮಕ್ಕಳು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.