ಪಾಟ್ನಾ: ದೇಶದಲ್ಲಿ ಎಷ್ಟೋ ಜನರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಹಿಂದೇಟು ಹಾಕುತ್ತಿರುತ್ತಾರೆ. ಆದರೆ ಇಲ್ಲೊಬ್ಬ 84 ವರ್ಷದ ವೃದ್ಧ 11 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಅಚ್ಚರಿಯ ಘಟನೆ ಬಿಹಾರದಲ್ಲಿ ನಡೆದಿದೆ.
ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ ಉಪವಿಭಾಗದ 84 ವರ್ಷದ ವ್ಯಕ್ತಿಯೊಬ್ಬರು 11 ಬಾರಿ ಲಸಿಕೆಯನ್ನು ಹಾಕಿಸಿಕೊಂಡಿದ್ದು, 12ನೇ ಬಾರಿ ಲಸಿಕೆ ಹಾಕಿಸಿಕೊಳ್ಳಲು ಹೋಗಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
Advertisement
Advertisement
ಯಾರಿದು?
ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ ಉಪವಿಭಾಗದ ಪುರೈನಿ ಪೊಲೀಸ್ ಠಾಣೆಯ ಓರೈ ಗ್ರಾಮದ ನಿವಾಸಿ ಬ್ರಹ್ಮದೇವ್ ಮಂಡಲ್ ಅವರಿಗೆ 84 ವರ್ಷ ವಯಸ್ಸಾಗಿದ್ದು, ಇವರು ನಿವೃತ್ತ ಅಂಚೆ ಇಲಾಖೆ ಉದ್ಯೋಗಿಯಾಗಿದ್ದರು. ಮಂಡಲ್ ಅವರು ಕೋವಿಡ್ ಲಸಿಕೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ 11 ಬಾರಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ 12ನೇ ಬಾರಿ ಲಸಿಕೆ ಪಡೆಯಲು ಹೋದಾಗ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ: ಅಶ್ವಥ್ ನಾರಾಯಣ್
Advertisement
ಈ ರೀತಿ ಏಕೆ ಮಾಡಿದ್ರಿ ಎಂದು ಮಾಧ್ಯಮಗಳು ಪ್ರಶ್ನಿಸಿದಕ್ಕೆ ಉತ್ತರಿಸಿದ ಅವರು, ನಾನು ಲಸಿಕೆಯಿಂದ ಸಾಕಷ್ಟು ಪ್ರಯೋಜನ ಪಡೆದಿದ್ದೇನೆ. ಅದಕ್ಕಾಗಿಯೇ ನಾನು ಅದನ್ನು ಪದೇ ಪದೇ ತೆಗೆದುಕೊಳ್ಳುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.
Advertisement
ಈ ಕುರಿತು ವಿವಾರಿಸಿದ ಅವರು, ನಾನು ಮೊದಲ ಡೋಸ್ ಅನ್ನು ಕಳೆದ ವರ್ಷದ ಫೆಬ್ರವರಿ 13 ರಂದು ಪಡೆದುಕೊಂಡೆ. ನಂತರ ಮಾರ್ಚ್, ಮೇ, ಜೂನ್, ಜುಲೈ ಮತ್ತು ಆಗಸ್ಟ್‍ನಲ್ಲಿ ತಲಾ ಒಂದೊಂದರಂತೆ ಲಸಿಕೆಯನ್ನು ಪಡೆದುಕೊಂಡೆ. ಸೆಪ್ಟೆಂಬರ್‍ನಲ್ಲಿ, ಮೂರು ಬಾರಿ ಲಸಿಕೆಯನ್ನು ಪಡೆದುಕೊಂಡೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಡಿಸೆಂಬರ್ 30 ರೊಳಗೆ ನಾನು 11 ಬಾರಿ ಲಸಿಕೆಯನ್ನು ಪಡೆದುಕೊಂಡೆ. ಈ ಲಸಿಕೆಯು ಸರ್ಕಾರದ ಅದ್ಭುತವಾದ ಯೋಜನೆಯಲ್ಲಿ ಒಂದು ಎಂದು ಪ್ರಶಂಸಿದ್ದಾರೆ. ಇದನ್ನೂ ಓದಿ: ಕಳ್ಳರ ಗ್ಯಾಂಗ್ ಅರೆಸ್ಟ್ – 21 ಲಕ್ಷ ಮೌಲ್ಯದ ಶ್ರೀಗಂಧ ವಶ
ಲಸಿಕೆ ಪಡೆಯುವ ವೇಳೆ ಮಂಡಲ್ ಅವರು ತಮ್ಮ ಆಧಾರ್ ಕಾರ್ಡ್ ಮತ್ತು ಫೋನ್ ನಂಬರ್ ಅನ್ನು ಎಂಟು ಸಂದರ್ಭದಲ್ಲಿಯೂ ಸಲ್ಲಿಸಿದ್ದಾರೆ. ಇತರ ಮೂರು ಡೋಸ್ ಅನ್ನು ಅವರ ಮತದಾರರ ಗುರುತಿನ ಚೀಟಿ ಮತ್ತು ಪತ್ನಿಯ ಫೋನ್ ನಂಬರ್ ಕೊಟ್ಟು ಪಡೆದುಕೊಂಡಿದ್ದಾರೆ.
ಮಾಧೇಪುರ ಜಿಲ್ಲೆಯ ಸಿವಿಲ್ ಸರ್ಜನ್ ಅಮರೇಂದ್ರ ಪ್ರತಾಪ್ ಶಾಹಿ ಈ ಕುರಿತು ಪ್ರತಿಕ್ರಿಯಿಸಿದ್ದು, ಮಂಡಲ್ ಅವರು ಇಷ್ಟು ಪ್ರಮಾಣದ ಲಸಿಕೆಯನ್ನು ಹೇಗೆ ತೆಗೆದುಕೊಂಡರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.