ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟವ್ ಪ್ರಕರಣಗಳ ಸಂಖ್ಯೆ ಇಂದು ಸಹ ಭಾರೀ ಏರಿಕೆ ಕಂಡಿದೆ. ನಿನ್ನೆಗಿಂತ ಇಂದು ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಒಟ್ಟು 4,246 ಮಂದಿಗೆ ಸೋಂಕು ಬಂದಿದೆ.
ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ ಮುಂದುವರಿದಿದ್ದು, ನಿನ್ನೆಗಿಂತ ಇಂದು ಕೇಸ್ ಹೆಚ್ಚು ಪತ್ತೆಯಾಗಿದೆ. 3,605 ಕೇಸ್ ಇಂದು ಪತ್ತೆಯಾಗಿದೆ.
Advertisement
Advertisement
ಇಂದು ರಾಜ್ಯದಲ್ಲಿ 362 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು ರಾಜ್ಯದಲ್ಲಿ 29,61,772 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟಿದ್ದು, ರಾಜ್ಯದಲ್ಲಿ ಇಲ್ಲಿವರೆಗೂ ಸೋಂಕಿನಿಂದ 38,357 ಜನರು ಮೃತಪಟ್ಟಿದ್ದಾರೆ.
Advertisement
ಈ ಮೂಲಕ ಪಾಸಿಟಿವಿಟಿ ರೇಟ್ ಶೇ.3.33ಕ್ಕೆ ಏರಿಕೆಯಾಗಿದ್ದು, ಮರಣ ಪ್ರಮಾಣ ಶೇ.0.04 ಇದೆ. ರಾಜ್ಯದಲ್ಲಿ 226 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ.
Advertisement
ರಾಜ್ಯದಲ್ಲಿ ಇಂದು ಒಟ್ಟು 5,21,054 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,27,328 ಸ್ಯಾಂಪಲ್ (ಆರ್ಟಿ-ಪಿಸಿಆರ್ 1,10,325+ 17,003 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಸಕಲ ಸೌಲಭ್ಯಗಳಿರುವ ನವಬೆಂಗಳೂರು ನಿರ್ಮಾಣಕ್ಕೆ ನೀಲನಕ್ಷೆ: ಸಿಎಂ
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 6, ಬಳ್ಳಾರಿ 34, ಬೆಳಗಾವಿ 31, ಬೆಂಗಳೂರು ಗ್ರಾಮಾಂತರ 19, ಬೆಂಗಳೂರು ನಗರ 3,605, ಬೀದರ್ 3, ಚಾಮರಾಜನಗರ 2, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 12, ಚಿತ್ರದುರ್ಗ 6, ದಕ್ಷಿಣ ಕನ್ನಡ 111, ದಾವಣಗೆರೆ 3, ಧಾರವಾಡ 26, ಗದಗ 5, ಹಾಸನ 20, ಹಾವೇರಿ 0, ಕಲಬುರಗಿ 28, ಕೊಡಗು 20, ಕೋಲಾರ 24, ಕೊಪ್ಪಳ 0, ಮಂಡ್ಯ 36, ಮೈಸೂರು 59, ರಾಯಚೂರು 0, ರಾಮನಗರ 4, ಶಿವಮೊಗ್ಗ 22, ತುಮಕೂರು 43, ಉಡುಪಿ 88, ಉತ್ತರ ಕನ್ನಡ 17, ವಿಜಯಪುರ 14 ಮತ್ತು ಯಾದಗಿರಿಯಲ್ಲಿ 0 ಪಾಸಿಟಿವ್ ಪ್ರಕರಣ ದಾಖಲಾಗಿದೆ.