ಬೆಂಗಳೂರು: ಮತಕಳವು ತಪ್ಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ (EVM) ಬದಲಿಗೆ ಬ್ಯಾಲೆಟ್ ಪೇಪರ್(Ballot Paper) ಬಳಕೆಗೆ ಚುನಾವಣಾ ಆಯೋಗ ಮುಂದಾಗಿದ್ದಕ್ಕೆ ರಾಜಕೀಯ ನಾಯಕರು ಅಪಸ್ವರ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ಸಹೋದರ ಡಿಕೆ ಸುರೇಶ್ (DK Suresh) ಪ್ರತಿಕ್ರಿಯಿಸಿ ಬ್ಯಾಲೆಟ್ ತರುವುದು ಅವಶ್ಯಕತೆ ಇಲ್ಲ ಅನ್ನಿಸುತ್ತದೆ. ಈಗಲೇ ನಾವು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆ ಎಲ್ಲವೂ ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲೇ ಇರುತ್ತದೆ. ಅದನ್ನು ತಿರುಚಲು ಯಾರಿಂದಲೂ ಆಗುವುದಿಲ್ಲ ಅಲ್ಲವೇ ಎಂದು ಪ್ರಶ್ನಿಸಿದರು.
“ಬ್ಯಾಲೆಟ್ ತರುವುದು ಅವಶ್ಯಕತೆ ಇಲ್ಲ ಅನ್ನಿಸುತ್ತದೆ. ಬ್ಯಾಲೆಟ್ ಮತ್ತೆ ತರುವುದು ಬೇಡ. ಈಗಲೇ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆ ಎಲ್ಲವೂ ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲೇ ಇರುತ್ತದೆ. ಅದನ್ನು ತಿರುಚಲು ಯಾರಿಂದಲೂ ಆಗುವುದಿಲ್ಲ ಅಲ್ಲವೇ?” – ಡಿಕೆ ಸುರೇಶ್#DKSuresh #EVM #BallotPaper #Politics… pic.twitter.com/ADTXAviHW6
— PublicTV (@publictvnews) January 20, 2026
ಉಪಚುನಾವಣೆಗೆ ಮತಪತ್ರ ಬಳಕೆ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಸಚಿವ ಹೆಚ್‌ಕೆ ಪಾಟೀಲ್ (HK Patil) ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬ್ಯಾಲೆಟ್ ಪೇಪರ್‌ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ – ಚುನಾವಣಾ ಆಯುಕ್ತ ಸಂಗ್ರೇಶ್
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮತಪತ್ರಗಳನ್ನು ಬಳಸಿ ನಡೆಸಲು ನಿರ್ಧರಿಸಿರುವುದು ನಿಜಕ್ಕೂ ದುರಂತದ ವಿಷಯ ಹಾಗೂ ದಶಕಗಳ ಪ್ರಗತಿಯನ್ನು ಹಳ್ಳಗೆಡಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ.
ಚುನಾವಣಾ ಬೂತ್‌ಗಳಲ್ಲಿ ನಡೆಯುತ್ತಿದ್ದ ಅಕ್ರಮಗಳು ಇವಿಎಂ ಪರಿಚಯದ ಬಳಿಕ ಕಾಣೆಯಾಗಿದೆ. ಕರ್ನಾಟಕ ರಾಜ್ಯ ಇಲಾಖೆಯೊಂದರ ಇತ್ತೀಚಿನ ಸಮೀಕ್ಷೆ…
— Pralhad Joshi (@JoshiPralhad) January 19, 2026

