ತುಮಕೂರು: ಕಾಂಗ್ರೆಸ್ ಪಕ್ಷದ (Congress Party) ವಿಚಾರದಲ್ಲಿ ಯಾರೂ ಹೇಳಿಕೆ ಕೊಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೊರಡಿಸಿರುವ ಸೂಚನೆ ಸರಿಯಾಗಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದ್ದಾರೆ.
ಪಬ್ಲಿಕ್ ಟಿ.ವಿ. ಜೊತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಫರ್ಮಾನು ಹೊರಡಿಸಿಲ್ಲ ಸಲಹೆ ನೀಡಿದ್ದಾರೆ ಅಷ್ಟೇ. ಅವರ ಸಲಹೆ ಸರಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹೆಬ್ಬಾಳ್ಕರ್, ಜಾರಕಿಹೊಳಿ ಮಧ್ಯೆ ಭಿನ್ನಾಭಿಪ್ರಾಯ – ಸ್ಥಳೀಯ ನಿಗಮಗಳ ವಿಚಾರಕ್ಕೇ ಗುದ್ದಾಟ
Advertisement
Advertisement
ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡುವ ಯಾವುದೇ ಹೇಳಿಕೆ ಕೊಡಬಾರದು. ಗೊಂದಲದ ಹೇಳಿಕೆಯಿಂದಾಗಿ ಸಾರ್ವಜನಿಕರಲ್ಲಿ ಗೊಂದಲ, ಪಕ್ಷದ ಭವಿಷ್ಯಕ್ಕೂ ತೊಂದರೆಯಾಗುತ್ತದೆ. ಆ ಉದ್ದೇಶದಿಂದ ಶಿವಕುಮಾರ್ ಸರಿಯಾದ ಸಲಹೆ ನೀಡಿದ್ದಾರೆ ಎಂದರು.
Advertisement
ಲೋಕಸಭಾ ಚುನಾವಣೆ ಬಳಿಕ ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ ಆಗಬಹುದು ಎಂಬ ಮುನ್ಸೂಚನೆ ನೀಡಿದ್ದಾರೆ. ಅದನ್ನು ಹೊರತುಪಡಿಸಿ ಸರ್ಕಾರ ಬದಲಾಗುತ್ತದೆ ಎನ್ನುವುದು ಸುಳ್ಳು ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
Web Stories