ಬೆಂಗಳೂರು: 40% ಕಮಿಷನ್ ಸರ್ಕಾರ ಅಂತ ನಾವೆಲ್ಲ ಕ್ಯಾಂಪೇನ್ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅಧಿಕಾರದಲ್ಲಿ ಇರುವವರು ಇದನ್ನು ಡೈಜೆಸ್ಟ್ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡ್ತಿದ್ದೇವೆ. 40% ಕಮಿಷನ್ ಸರ್ಕಾರ ಅಂತ ನಾವೆಲ್ಲ ಕ್ಯಾಂಪೇನ್ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಬಿಜೆಪಿ (BJP) ವಿರುದ್ಧ ಪೋಸ್ಟರ್ ಅಂಟಿಸಿದ್ದೇವೆ. ಇದು ಸತ್ಯ. ಪೇಸಿಎಂನ್ನು 1.9 ಲಕ್ಷ ಜನ ಇದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ 8 ಸಾವಿರ ದೂರು ದಾಖಲಾಗಿದೆ. ಇದು ರಾಜಕಾರಣದ ವ್ಯವಸ್ಥೆ. ನನ್ನ ಸಿದ್ದರಾಮಯ್ಯ (Siddaramaiah) ಫೋಟೋ ಕೂಡ ಅವರು ಪೋಸ್ಟರ್ ಮಾಡಿದ್ದಾರೆ ಎಂದರು.
Advertisement
Advertisement
ಈ ಬಗ್ಗೆ ಸಿಎಂ ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ನಾಳೆ ಕಾಂಗ್ರೆಸ್‌ನ (Congress) ಎಲ್ಲ ಎಂಎಲ್ಸಿ, ಎಂಎಲ್‌ಎಗಳು, ನಾವೇ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ. ಸರ್ಕಾರಿ ಕಟ್ಟಡಗಳ ಮೇಲೆ ಪೋಸ್ಟರ್ ಅಂಟಿಸುತ್ತೇವೆ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದ ಅವರು, ಬಿಜೆಪಿ ಅಧಿಕಾರ ದುರ್ಬಳಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಗ್ರ ಸಂಘಟನೆಯೊಂದಿಗೆ ಸಂಪರ್ಕ – ಕಾರವಾರದ SDPI ಮುಖಂಡ ವಶಕ್ಕೆ
Advertisement
Advertisement
ಇದೆಲ್ಲವನ್ನು ಅಧಿಕಾರದಲ್ಲಿ ಇರುವವರು ಇದನ್ನು ಡೈಜೆಸ್ಟ್ ಮಾಡಿಕೊಳ್ಳಬೇಕು. ರಾತ್ರೋ ರಾತ್ರಿ ಅರೆಸ್ಟ್ ಮಾಡಿರುವುದನ್ನು ಖಂಡಿಸುತ್ತೇನೆ. ಬಿಬಿಎಂಪಿಯವರಿಗೆ ಕಣ್ಣಿಲ್ವಾ ಎಂದ ಅವರು, ಜನೋತ್ಸವದ್ದು ಅಷ್ಟೊಂದು ಪೋಸ್ಟರ್ ಹಾಕಿಲ್ವಾ? ಅದಕ್ಕೂ ಬಿಬಿಎಂಪಿ ಯಾಕೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: SDPI ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ NIA ಅಧಿಕಾರಿಗಳು