ಬೆಂಗಳೂರು: ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂದು ಹೇಳುವ ಮೂಲಕ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೀರಾವರಿ ಇಲಾಖೆಯಲ್ಲಿ ಯಾರು ಯಾರು ಯಾವ ಹೋಟೆಲ್ ನಲ್ಲಿ ಏನು ನಡೆದಿದೆ ಅನ್ನೋದು ಗೊತ್ತಿದೆ. ಬೆಂಕಿ ಇಲ್ಲದೆ ಹೊಗೆ ಆಡಲ್ಲ ಎಂದು ಟಾಂಗ್ ನೀಡಿದರು.
ನಾನು ಕೂಡ ನೀರಾವರಿ ಸಚಿವನಾಗಿದ್ದವನು. ಐಟಿ ದಾಳಿ ನಡೆದಿದೆ. ಅಧಿಕಾರಿಗಳು, ಸಂಬಂಧ ಪಟ್ಟವರು ಅಧಿಕೃತವಾಗಿ ಹೇಳಿಕೆ ನೀಡುವವರೆಗೂ ನಾನು ಏನು ಮಾತನಾಡೋದಿಲ್ಲ. ಆದರೆ ಉಮೇಶ್ ಬಿಎಸ್ ವೈ ಆಪ್ತ ಸಹಾಯ ಅಂತೂ ಹೌದಲ್ವಾ..?, ಮುಖ್ಯಮಂತ್ರಿಗಳ ಪಿಎ ಅಂತು ಹೌದಲ್ವಾ…?, ಅದನ್ನ ಅಲ್ಲಗೆಳಯಲು ಅಗೋಲ್ವಲ್ಲ. ಇದರ ಹಿಂದೆ ಒಳರಾಜಕೀಯ ಇದ್ದೇ ಇದೆ ಎಂದು ಸಿದ್ದರಾಮಯ್ಯರಂತೆ ಡಿಕೆಶಿ ಕೂಡ ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ:ಯಡಿಯೂರಪ್ಪ, ವಿಜಯೇಂದ್ರ ಆಪ್ತರೇ ಟಾರ್ಗೆಟ್- ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ಅನುಮಾನ
ಯಾರ ಯಾರನ್ನ ಕಂಟ್ರೋಲ್ ತಗೋಬೇಕು ಯಾರನ್ನ ಬಿಡಬೇಕು ಅನ್ನೋದಕ್ಕೆ ಇದನ್ನೆಲ್ಲಾ ಮಾಡ್ತಿದ್ದಾರೆ. ಕೆಲವು ಸಚಿವರು ದೆಹಲಿಗೆ ತೆರಳಿ ಹೋಗಿ ನಮ್ಮ ಮೇಲೆ ದಾಳಿ ಮಾಡಬೇಡಿ, ನಮ್ಮ ಸೋದರರ ಮೇಲೆ ಮಾಡಬೇಡಿ ಅಂತಾ ಕಾದು ಕುತಿದ್ರು ಅನ್ನೋದು ಗೊತ್ತಿದೆ. ತಕ್ಷಣ ರೈಡ್ ಆಗಿಲ್ಲ ಸಾಕಷ್ಟು ತಯಾರಿ ಆಗಿರುತ್ತೆ ಕೆಲವರ ರಕ್ಷಣೆ ಮಾಡ್ತಿದ್ದಾರೆ. ನೀರಾವರಿ ಇಲಾಖೆ ಅಂದರೆ ಒಂದು ವರ್ಷದಿಂದ ನಡೆದಿದೆ. ನೀರಾವರಿ ಇಲಾಖೆಯಲ್ಲಿ ಯಾರು ಯಾರು ಯಾವ ಹೋಟೆಲ್ ನಲ್ಲಿ ಏನು ನಡೆದಿದೆ ಅನ್ನೋದು ಗೊತ್ತಿದೆ ಎಂದು ಡಿಕೆಶಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ: ಹಾಲಪ್ಪ