ಕೊಪ್ಪಳ: ನಾನೇನು ಸಂಕಲ್ಪ ಮಾಡಿ ಉತ್ಸವ ಮೂರ್ತಿ ಹೊತ್ತಿದ್ದೇನೆ ಎಂಬುದು ದೇವರಿಗೆ ಗೊತ್ತು. ಇದು ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧ ಎಂದು ಗವಿಸಿದ್ದೇಶ್ವರ ಮಹಾರಥೋತ್ಸವದಲ್ಲಿ (Gavisiddeshwara Jatre) ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಮಹಾರಥೋತ್ಸವದ ನಂತರ ಉತ್ಸವ ಮೂರ್ತಿ ಹೊತ್ತಾಗ ಮಾಡಿದ ಸಂಕಲ್ಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಮರಕ್ಕೆ ಬೇರಿನಷ್ಟೇ, ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ಇಲ್ಲಿ ಸುಖ, ನೆಮ್ಮದಿ ಹಾಗೂ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಇದೊಂದು ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಇದು ಅತಿ ದೊಡ್ಡ ಜಾತ್ರೆ, ಜನರಿಗೆ ಜ್ಞಾನ ಮತ್ತು ಧರ್ಮದ ಅರಿವು ಮೂಡಿಸುವ ಸ್ಥಳವಾಗಿದ್ದು, ನಾನಿಲ್ಲಿ ರಾಜಕಾರಣಿಯಾಗಿ, ಡಿಸಿಎಂ ಆಗಿ ಬಂದಿಲ್ಲ. ಭಕ್ತನಾಗಿ ಬಂದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪ್ರತೀ ಮಂಡಲ, ಜಿಲ್ಲೆಗಳಲ್ಲಿನ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಲು ನಿರ್ಧಾರ: ಅಶ್ವಥ್ ನಾರಾಯಣ್
ಲಕ್ಷಾಂತರ ಭಕ್ತರು ನಂಬಿಕೆಯಿಟ್ಟು ಇಲ್ಲಿಗೆ ಬಂದಿದ್ದಾರೆ. ಇಲ್ಲಿಗೆ ಬಂದ ಎಲ್ಲ ಭಕ್ತರಿಗೂ ನೆಮ್ಮದಿ ಹಾಗೂ ಶಾಂತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ. ಈ ವೇಳೆ, ಅವರ ಜೊತೆಯಲ್ಲಿ, ಸಚಿವ ಶಿವರಾಜ್ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್ ಇದ್ದರು.
ಕಳೆದ 2017ರಲ್ಲಿ ಜಾತ್ರೆಗೆ ಬಂದಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಉತ್ಸವ ಮೂರ್ತಿಯ ಹೂವಿನ ಪಲ್ಲಕ್ಕಿ ಹೊತ್ತಿದ್ದರು. ಮುಂದಿನ 2018ರಲ್ಲಿ ಅವರ ಮಗ ಕುಮಾರಸ್ವಾಮಿ ಸಿಎಂ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನೂ ಓದಿ: ಕಾಂಗ್ರೆಸ್ ಜೀವಂತವಾಗಿದ್ರೆ ಶಾಮನೂರು ಶಿವಶಂಕರಪ್ಪರನ್ನ ಸಸ್ಪೆಂಡ್ ಮಾಡಲಿ: ಹೆಚ್.ವಿಶ್ವನಾಥ್