ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪರ್ಸಂಟೇಜ್ ಕೋಲಾಹಲ ಎಬ್ಬಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ಪರ್ಸಂಟೇಜ್ ಆರೋಪವೊಂದು ಕೇಳಿಬಂದಿದ್ದು, ಕಾಂಗ್ರೆಸ್ ನಾಯಕರೇ ಈ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ.
ಹೌದು. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತ, ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಸಂಸದ ಉಗ್ರಪ್ಪ ನಡುವೆ ಸಂಭಾಷಣೆ ನಡೆದಿದೆ. ಡಿಕೆಶಿ ಅವರು ಕಲೆಕ್ಷನ್ ಗಿರಾಕಿ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹೇಳಿರುವುದು ಇದೀಗ ಭಾರೀ ಚರ್ಚೆಯಾಗುತ್ತಿದೆ.
Advertisement
Advertisement
ಶಿವಮೊಗ್ಗದ ಸಾಗರ ಮೂಲದ ಸಲೀಂ. ಕಳೆದ 15 ವರ್ಷಗಳಿಂದ ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ತಮ್ಮ ಆಪ್ತನಿಂದಲೇ ಪರ್ಸಂಟೇಜ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಹೇಗೆ ಪರ್ಸಂಟೇಜ್ ಫಿಕ್ಸಾಗುತ್ತೆ ಎಂದು ಮಾತನಾಡಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಪರ್ಸಂಟೇಜ್ ಹೇಗೆ ಹೆಚ್ಚಾಯ್ತು..?, ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲೆಲ್ಲಾ 6 ರಿಂದ 8 ಪರ್ಸೆಂಟ್ ಇತ್ತು. ಡಿಕೆಶಿ ಬಂದ ಮೇಲೆ 12 ಪರ್ಸೆಂಟ್ ಮಾಡಿದರು ಎಂದು ಸಲೀಂ ಅವರು ಉಗ್ರಪ್ಪ ಬಳಿ ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಜಲ ಸಂಪನ್ಮೂಲ ಇಲಾಖೆಯ ಕಾಂಟ್ರಾಕ್ಟರ್ ಗಳಾಗಿರುವ ಉಪ್ಪಾರ್, ಜೀ.ಶಂಕರ್ ಹನುಮಂತಪ್ಪರ ಬಗ್ಗೆಯು ಪ್ರಸ್ತಾಪ ಮಾಡಿದ್ದಾರೆ. ವಾರದ ಹಿಂದೆ ಈ ಕಾಂಟ್ರಕ್ಟರ್ ಗಳ ಮೇಲೆ ಐಟಿ ದಾಳಿ ನಡೆದಿತ್ತು. ಪ್ರೆಸ್ ಮೀಟ್ ಗೂ ಮುನ್ನ ಈ ವಿಚಾರದ ಬಗ್ಗೆ ಸಲೀಂ ಹಾಗೂ ಉಗ್ರಪ್ಪ ಚರ್ಚೆ ನಡೆಸಿದ್ದರು. ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದಾಗಲೂ ಇದೆ ಕಾಂಟ್ರಾಕ್ಟರ್ ಗಳು ಇದ್ದರು. ಡಿಕೆಶಿ ಆಪ್ತ ಮುಳಗುಂದ ಸಾಕಷ್ಟು ದುಡ್ಡು ಮಾಡಿದ್ದಾರೆ. ಮುಳಗುಂದ 50-100 ಕೋಟಿ ಮಾಡಿದ್ದಾನೆ ಅಂದ್ರೆ ಡಿಕೆ ಹತ್ತಿರ ಎಷ್ಟಿರಬೇಕು ಲೆಕ್ಕ ಹಾಕಿ. ಡಿಕೆ ಬರೀ ಕಲೆಕ್ಷನ್ ಗಿರಾಕಿ ಎಂದಿದ್ದಾರೆ. ಇದನ್ನೂ ಓದಿ: ಸಮಂತಾರಿಂದ ದೂರವಾಗ್ತಿದ್ದಂತೆ ಹೊಸ ಮನೆ ಖರೀದಿಸಿದ ನಟ ನಾಗಚೈತನ್ಯ
ಸಲೀಂ- ಉಗ್ರಪ್ಪ ನಡುವಿನ ಸಂಭಾಷಣೆ ಇಂತಿದೆ.
ಸಲೀಂ: ಏನು ಗೊತ್ತಾ..? ಮೊದಲು 6 ರಿಂದ 8 ಪರ್ಸೆಂಟ್ ಇತ್ತು. ಡಿ.ಕೆ.ಬಂದು 12 ಪರ್ಸೆಂಟ್ ಮಾಡಿದ್ರು.ಡಿಕೆ ಮಾಡ್ಸಿರೋದು ಅದೆಷ್ಟು ಮಾಡ್ಸಿದ್ರೋ ಜಾಸ್ತಿ…ಹಾ ಹಾ
ಉಗ್ರಪ್ಪ : ಹಾ ಹಾ
ಸಲೀಂ : ಉಪ್ಪಾರ್ ಜೀ.ಶಂಕರ್ ಹನುಮಂತಪ್ಪ ಬಳ್ಳಾರಿಯವನು ಹನುಮಂತಪ್ಪ ಗೊತ್ತಾ ಸಾರ್ ಹೊಸಪೇಟೆ ಉಪ್ಪಾರ್ ಬೆಂಗಳೂರು ಜಿ.ಶಂಕರ್ ಉಡುಪಿ
ಉಗ್ರಪ್ಪ :ಉಪ್ಪಾರ್ ಬಿಜಾಪುರ್
ಸಲೀಂ : ಹೋ ಬಿಜಾಪುರ…?
ಸಲೀಂ : ಅದರಲ್ಲಿ ಇವರ್ದಲ್ಲ ಸಾರ್ ಮುಳಗುಂದ 50-100 ಕೋಟಿ.ಮುಳಗುಂದ 50-100 ಕೋಟಿ ಮಾಡಿದಾನೆ ಅಂದ್ರೆ ಇವನ ಹತ್ತಿರ ಎಷ್ಟಿರಬೇಕು ಡಿಕೆ ಹತ್ತಿರ ಲೆಕ್ಕಾ ಹಾಕಿ ಬರಿ ಕಲೆಕ್ಷನ್ ಗಿರಾಕಿ.
ಉಗ್ರಪ್ಪ: ಅದು ನಮಗೆ ಗೊತ್ತಿಲ್ಲ.