ಸಾಹುಕಾರ ಪಾಪರ್ ಆಗ್ತಿದ್ದಾರೆ: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ

Public TV
2 Min Read
dks

ಬೆಳಗಾವಿ: ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಹಕಾರಿ ಕಾರ್ಖಾನೆಯಲ್ಲಿ ಅವ್ಯವಹಾರವಾಗಿದೆ ಎಂಬ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಾಹುಕಾರ ಪಾಪರ್ ಆಗ್ತಿದ್ದಾರೆ. ಅದಕ್ಕೆ ಸಿಎಂ, ಗೃಹಸಚಿವರು ಉತ್ತರಿಸಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಹುಕಾರರೆಲ್ಲರೂ ಪಾಪರ್‌ಗಳಾಗುತ್ತಿದ್ದಾರೆ. ನಮ್ಮನ್ನೆಲ್ಲಾ ಪಾಪರ್ ಮಾಡಿಕೊಳ್ಳಿ ಎಂದು ಮ್ಯಾಚ್ ಫಿಕ್ಸಿಂಗ್ ನಡೆಸುತ್ತಿದ್ದಾರೆ. ಸಿಎಂ, ಸಹಕಾರ ಸಚಿವರು ಏನು ಮಾಡುತ್ತಿದ್ದಾರೆ? ಬಿಡಿಸಿಸಿ ಬ್ಯಾಂಕ್‌ಗೆ 300 ಕೋಟಿನೋ, 600 ಕೋಟಿನೋ ಎಷ್ಟು ಬರಬೇಕು ಗೊತ್ತಿಲ್ಲ. ಪೇಪರ್‌ನಲ್ಲಿ ಬಂದಿದ್ದ ಜಾಹೀರಾತು ನಾನು ನೋಡಿದೆ. ನಮ್ಮ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ದಾಖಲೆ ಕಳಿಸುವುದಾಗಿ ಹೇಳಿದ್ದಾರೆ. ಮೊದಲು ಆ ಪಾಪರ್ ಸಾಹುಕಾರ ಭಿಕ್ಷುಕ ಆಗಿರುವ ಬಗ್ಗೆ ಸೋಮಶೇಖರ್, ಸಿಎಂ ಉತ್ತರ ಕೊಡಲಿ. ಆಮೇಲೆ ನಾನು ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಗೃಹಸಚಿವರಿಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ

DKS 2

ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ್ ಸಾಮಾನ್ಯ ವ್ಯಕ್ತಿಯಲ್ಲ. ಕೇಂದ್ರದ ಮಾಜಿ ಮಂತ್ರಿ, ಹಾಲಿ ಶಾಸಕರಿದ್ದಾರೆ. ಮಂತ್ರಿಸ್ಥಾನಕ್ಕೆ 50 ರಿಂದ 100 ಕೋಟಿ ಫಿಕ್ಸ್ ಎಂದು ಹೇಳಿದ್ದಾರೆ. ಇಂಜಿನಿಯರ್, ಪಿಎಸ್‌ಐ ಪೋಸ್ಟ್ಗಳಿಗೆ ರೇಟ್ ಫಿಕ್ಸ್ ಆಗಿದೆ. ಸಿಎಂ ಸ್ಥಳದಿಂದ ಜವಾನ್ ಕೆಲಸದವರೆಗೂ ರೇಟ್ ಫಿಕ್ಸ್ ಆಗಿದೆ. 40 ಪರ್ಸೆಂಟ್ ಕಮಿಷನ್ ಫಿಕ್ಸ್ ಆಗಿದೆ. ಇದಕ್ಕಿಂತ ಇನ್ನೇನು ಬೇಕು ಎಂದು ಕಿಡಿಕಾರಿದರು.

ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಿಸಲು ಆಗುತ್ತಿಲ್ಲ. ಯಾರ ಮೇಲೂ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಅಧಿಕಾರಿಗಳು, ಶಾಸಕರು, ಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಈ ಪರಿಸ್ಥಿತಿ ಉದ್ಭವ ಆಗುತ್ತಿದೆ. ಮಿಕ್ಕಿದ್ದು ಅವರಿಗೆ ಬಿಟ್ಟಿದ್ದು, ಸದ್ಯ ಏನೇನು ರಹಸ್ಯ ಬಯಲಾಗಿದೆ ಅದಕ್ಕೆಲ್ಲ ಉತ್ತರ ಕೊಡಬೇಕು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಮಠದ ಶ್ರೀಗಳಂತೆ ಮಾತನಾಡಿದ್ರು: ಸಿದ್ದು ಹೊಗಳಿದ ಡಿಕೆಶಿ

DKS 1

ಡಿಕೆಶಿ ಅರೆಸ್ಟ್ ಆದಾಗ ಹೀಗಾಗಬಾರದಿತ್ತು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರು ಎಂಬ ಯತ್ನಾಳ್ ಹೇಳಿಕೆ ಕುರಿತು ಮಾತನಾಡಿ, ನನ್ನನ್ನು ಜೈಲಿಗೆ ಹಾಕಿದ್ರು. ಯಡಿಯೂರಪ್ಪ, ಅಮಿತ್ ಶಾ, ಆನಂದ್ ಸಿಂಗ್ ಸೇರಿ ಬೇಕಾದಷ್ಟು ಎಂಎಲ್‌ಎಗಳನ್ನೂ ಜೈಲಿಗೆ ಹಾಕಿದ್ರು. ಆ ಸಂದರ್ಭದಲ್ಲಿ ಯಡಿಯೂರಪ್ಪನವರು ಹೇಳಿದ್ದು ನಿಜವಾಗಿದೆ. ಅವರೇ ಕೇಂದ್ರ ಸರ್ಕಾರದ ಒತ್ತಡದ ಮೇಲೆ ತನಿಖೆಗೆ ಸಿಬಿಐಗೆ ಕೊಟ್ಟಿದ್ದಾರೆ. ನಮ್ಮದು ಯಾವುದೂ ಹೊಂದಾಣಿಕೆ ಇಲ್ಲ. ನಾನು ಎಷ್ಟು ಕೋಟಿ ಟ್ಯಾಕ್ಸ್ ಕಟ್ಟಿದ್ದೀನಿ, ನಮ್ಮ ವ್ಯವಹಾರ ಏನು, ವಹಿವಾಟು ಏನು ಎಂಬುದು ಹೇಳಬೇಕು. ಅವನ್ಯಾವನೋ ಸ್ಟಿಂಗ್ ಆಪರೇಷನ್ ಮಾಡೋಕೆ ಬಂದವನಿಗೆ ಸ್ವಲ್ಪ ಗಿಫ್ಟ್ ಕೊಟ್ಟು ಕಳಿಸಿಬಿಟ್ಟಿದ್ದಾರೆ. ಈಗ ಅದರ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲ. ನೀವೆಲ್ಲ ಸಾಹುಕಾರ ಅಂತಿದ್ರಿ. ಈಗ ಪೇಪರ್‌ನಲ್ಲಿ ಅದ್ಯಾವುದೋ ಫ್ಯಾಕ್ಟರಿ ಬಗ್ಗೆ ಜಾಹೀರಾತು ಕೊಟ್ಟಿದ್ದಾರೆ. ಇದೀಗ ಸಿಎಂ ಹಾಗೂ ಗೃಹಸಚಿವರು ಅದಕ್ಕೆ ಉತ್ತರ ಕೊಡಲಿ ಎಂದು ಡಿಕೆಶಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *