ಬೆಂಗಳೂರು: ಕಿರುತೆರೆ ನಟಿ ದಿವ್ಯಾ ಸುರೇಶ್ ಬಿಗ್‍ಬಾಸ್ ಕಾರ್ಯಕ್ರಮ ಮುಗಿದ ಮೇಲೆ ಸಖತ್ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಬಿಗ್‍ಬಾಸ್ ಕನ್ನಡ ಸೀಸನ್ 8ರಲ್ಲಿ 6ನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದ ದಿವ್ಯಾ ಸುರೇಶ್ ಅವರು ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕವೇ ಹೆಚ್ಚು ಜನಪ್ರಿಯವಾಗಿದ್ದರು. ಇದೀಗ ಬಿಡುವಿಲ್ಲದಂತೆ ಫೋಟೋಶೂಟ್‍ಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಅವರ ಲೆಟೆಸ್ಟ್ ಫೋಟೋಶೂಟ್‍ನಲ್ಲಿ ಸಖತ್ ಕ್ಲಾಸಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಕಾರಿನಲ್ಲಿ ತುಂಡುಡುಗೆ ತೊಟ್ಟ ದಿವ್ಯಾ ಸುರೇಶ್ ಬಾಸ್ ಲೇಡಿಯಾಗಿದ್ದಾರೆ. ಇದನ್ನೂ ಓದಿ: ಟ್ರೆಡಿಷನಲ್ ಲುಕ್‍ನಲ್ಲಿ ಕಿರಿಕ್ ಹುಡ್ಗಿ – ನೆಚ್ಚಿನ ನಟಿ ಹೊಸ ಅವತಾರ ನೋಡಿ ಫ್ಯಾನ್ಸ್ ಫಿದಾ
View this post on Instagram
ಬಾಸ್ ಬೇಬಿಯಾಗುವುದನ್ನು ಆಯ್ಕೆ ಮಾಡಿಕೊಳ್ಳುವ ಬದಲು ತಾನು ಬಾಸ್ ಲೇಡಿಯಾಗಲು ಇಷ್ಟ ಪಡುತ್ತೇನೆ ಎಂದು ದಿವ್ಯಾ ಸುರೇಶ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇವರ ಅಭಿಮಾನಿಗಳು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ
ದಿವ್ಯಾ ಸುರೇಶ್ ಬಿಗ್‍ಬಾಸ್ ಮೂಲಕವಾಗಿ ಜನಮನ್ನಣೆ ಪಡೆದುಕೊಂಡರು. ನಂತರ ಇವರಿಗೆ ಸಿನಿಮಾ ಸೇರಿದಂತೆ ಫೋಟೋಶೂಟ್‍ಗಳಲ್ಲಿ ಭಾಗವಹಿಸುವ ಅವಕಾಶಗಳು ಇವರನ್ನು ಅರಸಿ ಬಂದಿದ್ದಾವೆ. ಇದೀಗ ಬಾಸ್ ಬೇಬೆ ಸ್ಟೈಲ್‍ನಲ್ಲಿ ಹಾಟ್ ಪೋಸ್ ಕೊಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಬಿಗ್‍ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಹೊಸ ಫೋಟೋಶೂಟ್‍ಗಳಲ್ಲಿ ಮಿಂಚುತ್ತಿರುವ ದಿವ್ಯಾ ಸುರೇಶ್‍ಗೆ ಅವರಿ ಕಿರುತೆರೆಯಲ್ಲಿ ನಟಿಸುವ ಅಕಾಶವು ಬಂದಿದೆ ಸಿಕ್ಕಿದೆ.