ನವದೆಹಲಿ: ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಜೊತೆಗೆ ಚರ್ಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ನವದೆಹಲಿಯಲ್ಲಿ (New Delhi) ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ರಸ್ತೆಗಳ ಕಾಮಗಾರಿ (Road Work) ನೆನೆಗುದಿಗೆ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಕೇಂದ್ರದ ಅಧಿಕಾರಿಗಳ ಜೊತೆಗೆ ಜಂಟಿ ಸಭೆ ಮಾಡಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ವಿಪಕ್ಷ ನಾಯಕರು 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ – ವಿರೋಧ ಪಕ್ಷದ ವಿರುದ್ಧ ಮೋದಿ ಕಿಡಿ
38 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಬೇಕಿದೆ. ಚಿಕ್ಕಮಗಳೂರು- ಬಿಳಿಕೆರೆ ರಸ್ತೆ ಉನ್ನತೀಕರಿಸಬೇಕಿದೆ. ಶಿರಾಡಿ ಘಾಟ್ ಸುರಂಗ ಮಾಡಲು ಕೇಂದ್ರ ಸರ್ಕಾರ ಉತ್ಸುಕತೆ ತೋರಿದೆ. ಬೆಂಗಳೂರಿನಲ್ಲಿ (Bengaluru) ಅಂಡರ್ ಗ್ರೌಂಡ್ 65 ಕಿಲೋ ಮೀಟರ್ ರಸ್ತೆ ಮಾಡಲು ಚಿಂತನೆ ನಡೆದಿದ್ದು, ಮೆಟ್ರೋ ಸುರಂಗದ ರೀತಿ ಅಂಡರ್ ಗ್ರೌಂಡ್ ರಸ್ತೆಯ ಕೆಲಸ ಮಾಡಬೇಕಿದೆ ಎಂದರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಹೆಬ್ಬಾಳ ಕೆರೆ ಪಕ್ಕಕ್ಕೆ ಮತ್ತೊಂದು ರಸ್ತೆ ಕೇಳಿದ್ದೇವೆ. ಮೈಸೂರು ರಿಂಗ್ ರೋಡ್‌ಗೆ ಫ್ಲೈಓವರ್ ಅಗತ್ಯವಿದೆ. ಆ ಬಗ್ಗೆಯೂ ಮಾತುಕತೆ ನಡೆದಿದೆ. ಕರ್ನಾಟಕ ಭವನದ ನಿರ್ಮಾಣದ ವೆಚ್ಚ ಮತ್ತೆ ಏರಿಕೆ ಆಗಿದೆ. ಯೋಜನೆ ಬದಲಾವಣೆಯಾಗಿರುವ ಹಿನ್ನೆಲೆ ಸುಮಾರು 20 ಕೋಟಿ ರೂ. ವೆಚ್ಚ ಹೆಚ್ಚಳವಾಗಬಹುದು ಎಂದು ತಿಳಿಸಿದರು. ಇದನ್ನೂ ಓದಿ: ನಿನಗೆ 3 ದಿನವಷ್ಟೇ ಸಮಯ- ಫೋಟೋ ವಾಟ್ಸಪ್ ಮಾಡಿ ಸಮಾಜವಾದಿ ಪಕ್ಷದ ನಾಯಕನಿಗೆ ಕೊಲೆ ಬೆದರಿಕೆ