ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanathara) ಅವರು ನಟಿ, ನಿರ್ಮಾಪಕಿಯಾಗಿ ಬ್ಯುಸಿಯಾಗಿದ್ದಾರೆ. ಇದೀಗ ಡೈರೆಕ್ಟರ್ ಸುಂದರ್ ಸಿ. (Sundar C.) ಜೊತೆ ಸಿನಿಮಾ ಮಾಡಲು ನಟಿ ಮುಂದಾಗಿದ್ದಾರೆ.
ಶಾರುಖ್ ಖಾನ್ ಜೊತೆ ‘ಜವಾನ್’ (Jawan) ಸಿನಿಮಾದಲ್ಲಿ ನಯನತಾರಾ ನಟಿಸಿದ ಮೇಲೆ ಅವರ ಬೇಡಿಕೆ ಹೆಚ್ಚಾಗಿದೆ. ಬಹುಭಾಷೆಗಳಲ್ಲಿ ನಟಿಸುತ್ತಾ ನಟಿ ಆ್ಯಕ್ಟಿವ್ ಆಗಿದ್ದಾರೆ. ಸದ್ಯ ಅವರು ‘ಮೂಕುತಿ ಅಮ್ಮನ್ 2’ (Mookuthi Amman 2) ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಇನ್ನೂ ನಯನತಾರಾಗೆ ಸುಂದರ್ ಸಿ. ನಿರ್ದೇಶನ ಮಾಡಲಿದ್ದಾರೆ. ಮತ್ತೊಂದು ದೇವಿ ಕುರಿತು ವಿಭಿನ್ನ ಕಥೆ ತರಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಉತ್ತಮ ಕಥೆ ಸಿಕ್ಕರೆ ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿಸಲು ಸಿದ್ಧ: ಕೃತಿ ಶೆಟ್ಟಿ
ಇದರ ಮೊದಲ ಭಾಗ ‘ಮೂಕುತಿ ಅಮ್ಮನ್’ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಪಾರ್ಟ್ 2ನಲ್ಲಿಯೂ ಕೂಡ ಅವರು ಸಾಥ್ ನೀಡಲಿದ್ದಾರೆ.