ಕುವೆಂಪು ಕೃತಿಯಿಂದ ಪ್ರೇರಣೆ- ಯುವ ನಟನಿಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

Public TV
1 Min Read
simple suni

ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಸಿಂಪಲ್ ಸುನಿ (Simple Suni) ‘ಅವತಾರ ಪುರುಷ 2’ (Avatara Purusha 2) ಸಿನಿಮಾದ ನಂತರ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ‘ದೇವರು ರುಜು ಮಾಡಿದನು’ ಎಂಬುದು ಕುವೆಂಪು (Kuvempu) ಅವರ ಕವಿತೆ ಸಾಲು. ಈ ಸಾಲನ್ನೇ ಚಿತ್ರದ ಟೈಟಲ್ ಮಾಡಿಕೊಂಡು ಹೊಸ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:ಕಿರುತೆರೆಗೆ ಖ್ಯಾತ ಹಾಸ್ಯನಟ ನರಸಿಂಹರಾಜು ಮೊಮ್ಮಗ ಎಂಟ್ರಿ

simple suni 1

ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಚಿತ್ರದ ನಾಯಕಿ ಕುವೆಂಪು ಅಭಿಮಾನಿಯಾಗಿರುತ್ತಾಳೆ. ‘ದೇವರು ರುಜು ಮಾಡಿದನು’ ಎಂಬ ಕುವೆಂಪು ಕವಿತೆಯ ಒಳಾರ್ಥ ಕಾಡುವಂತಿದೆ. ಜೀವನದಲ್ಲಿ ನಾವೆಂದುಕೊಂಡಂತೆ ನಡೆಯಲ್ಲ. ನಮಗೆ ದೇವರು ಮೊದಲೇ ಸ್ಕ್ರೀಪ್ಟ್ ಮಾಡಿರುತ್ತಾನೆ. ಅದರಲ್ಲಿ ನಾವು ನಟಿಸುತ್ತಿರುತ್ತೇವೆ. ನಾವೇನು ಬದಲಾವಣೆ ಮಾಡಲು ಹೊರಟರೂ ದೇವರ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ ಎಂಬುದೇ ಈ ಸಿನಿಮಾದ ಒನ್‌ಲೈನ್ ಕಥೆಯಾಗಿದೆ.

ಕುವೆಂಪು ಅವರ ಜನಪ್ರಿಯ ಕವಿತೆ ‘ದೇವರು ಋಜು ಮಾಡಿದನು’ ಇಂದ ಸ್ಪೂರ್ತಿ ಪಡೆದು ಹೊಸ ಕತೆ ಬರೆದು ಸಿನಿಮಾ ಮಾಡುತ್ತಿರುವ ಸಿಂಪಲ್ ಸುನಿ, ತಮ್ಮ ಸಿನಿಮಾಗೆ ಅದೇ ಹೆಸರನ್ನು ಇರಿಸಿದ್ದಾರೆ. ‘ದೇವರು ರುಜು ಮಾಡಿದರು’ ಎಂದು ಸಿನಿಮಾಗೆ ಹೆಸರಿಟ್ಟಿದ್ದಾರೆ. ವಿರಾಜ್ (Viraj) ಹೆಸರಿನ ಹೊಸ ಪ್ರತಿಭೆಯನ್ನು ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ.

Share This Article