ಬಿಟ್ಟಿ ಬಿಲ್ಡಪ್ ಕೊಡದೇ ಸೈಲೆಂಟಾಗಿಯೇ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಚಲನ ಮೂಡಿಸಿರುವ ಸಿನಿಮಾಗಳ ಪೈಕಿ `ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಚಿತ್ರವೂ ಒಂದು. ನಿರ್ದೇಶಕ ಶಶಾಂಕ್ ಕಲ್ಪನೆಯಲ್ಲಿ ಅರಳಿರುವ ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ (Darling Krishna) ಹೀರೋ. ಪ್ರೇಮಂಪೂಜ್ಯಂ ಸಿನಿಮಾ ಖ್ಯಾತಿಯ ಬೃಂದಾ ಆಚಾರ್ಯ (Brinda Acharya) ಹಾಗೂ ಮಿಲನ ನಾಗರಾಜ್ (Milan Nagaraj) ಇಬ್ಬರು ನಾಯಕಿಯರು. ಆದರೆ, ಯಾರಿಗೆಷ್ಟು ಸ್ಕೋಪು, ಯಾರಿಗೆಷ್ಟು ಸ್ಕ್ರೀನ್ ಸ್ಪೇಸ್ ಇದೆ ಎಂಬುದು ಸದ್ಯಕ್ಕಿರುವ ಕುತೂಹಲ. ಆ ಕುತೂಹಲಕ್ಕೆ ಮತ್ತು `ಕೌಸಲ್ಯ ಸುಪ್ರಜಾ ರಾಮ’ ಕಥನಕ್ಕೆ ಜುಲೈ 28ರಂದು ತೆರೆಬೀಳಲಿದೆ. ಅಂದು ರಾಜ್ಯಾದ್ಯಂತ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ.
Advertisement
`ಕೌಸಲ್ಯ ಸುಪ್ರಜಾ ರಾಮ’ ಟೈಟಲ್ ಕೇಳಿದಾಕ್ಷಣ ಸುಪ್ರಭಾತ ನೆನಪಾಗೋದು ಸಹಜ. ಆದರೆ, ನಿರ್ದೇಶಕ ಶಶಾಂಕ್ ಈ ಚಿತ್ರದ ಮೂಲಕ ಸಿನಿಮಾಪ್ರೇಮಿಗಳಿಗೆ ಹಾಗೂ ಸಮಾಜಕ್ಕೆ ಹೇಳಲು ಹೊರಟಿರುವ ಸಂದೇಶವೇ ಬೇರೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಇದೆಲ್ಲವನ್ನೂ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೂಲಕ ಶಶಾಂಕ್ ಸೊಸೈಟಿಗೆ ತಿಳಿಸುವುದಕ್ಕೆ ಹೊರಟಿದ್ದಾರೆ. ಇದನ್ನೂ ಓದಿ:ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್- ’ಬುದ್ಧಿವಂತ 2′ ಬಿಗ್ ಅಪ್‌ಡೇಟ್
Advertisement
Advertisement
ಅಚ್ಚರಿ ಅಂದರೆ ಈ ಮೇಲ್ ಇಗೋ ಕುರಿತಾದ ಸಿನಿಮಾ ಇಲ್ಲಿತನಕ ತೆರೆಮೇಲೆ ಬಂದೇ ಇಲ್ಲ. ಫಾರ್ ದಿ ಫಸ್ಟ್ ಟೈಮ್ ನಿರ್ದೇಶಕ ಶಶಾಂಕ್ (Shashank) ಅವರು ನಿಜವಾದ ಗಂಡಸು ಅಂದರೆ ಯಾರು ಅನ್ನೋದನ್ನ ಹೇಳುವುದಕ್ಕೆ ಹೊರಟಿದ್ದಾರೆ. ತಾವು ಕಂಡಿದ್ದು ಮತ್ತು ತಮ್ಮ ಅನುಭವಕ್ಕೆ ಬಂದಿದ್ದು ಎಲ್ಲದನ್ನೂ ಸೇರಿಸಿ, ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ನಾನು ಗಂಡಸು ಎನ್ನುವ ಅಹಂ ಅಷ್ಟು ಬೇಗ ನೆತ್ತಿಯಿಂದಿಳಿಯಲು ಸಾಧ್ಯವಿಲ್ಲ. ಆದರೆ, ಈ ಸಿನಿಮಾಗೆ ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುವ ಶಕ್ತಿಯಿದೆ. ನಾನು ಇಲ್ಲಿತನಕ ಡೈರೆಕ್ಟ್ ಮಾಡಿರುವ ಸಿನಿಮಾಗಳಲ್ಲಿ ಇದು ನನ್ನ ಅತ್ಯುತ್ತಮ ಸಿನಿಮಾ. ಈ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗುತ್ತೆ ಎನ್ನುವ ಭರವಸೆ ನಂಗಿದೆ ಎನ್ನುತ್ತಾರೆ ನಿರ್ದೇಶಕ ಶಶಾಂಕ್
Advertisement
ಅಂದ್ಹಾಗೇ, ಶಶಾಂಕ್ ಇಲ್ಲಿವರೆಗೂ ಹತ್ತು ಸಿನಿಮಾ ಡೈರೆಕ್ಟ್ ಮಾಡಿದ್ದಾರೆ. ಆ ಹತ್ತರಲ್ಲಿ ಆರೇಳು ಚಿತ್ರಗಳು ಬ್ಲಾಕ್‍ಬಸ್ಟರ್ ಹಿಟ್ ಲಿಸ್ಟ್ ಸೇರಿವೆ. ಆ ಸಾಲಿಗೆ `ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಸೇರ್ಪಡೆಯಾಗೋದ್ರಲ್ಲಿ ನೋ ಡೌಟ್ ಎಂದು ಹೇಳಿಕೊಳ್ಳುವ ನಿರ್ದೇಶಕರು, ಇದು ಡಾರ್ಲಿಂಗ್ ಕೃಷ್ಣ ಕರಿಯರ್ ಬಿಗ್ಗೆಸ್ಟ್ ಸಿನಿಮಾ ಅಂತ ಅಷ್ಟೇ ಖುಷಿಯಿಂದ ಹೇಳಿಕೊಂಡರು. ಲವ್‍ಮಾಕ್ಟೇಲ್ ಆದಿನಾ ಮತ್ತು ನಿಧಿನಾ ಇಬ್ಬರನ್ನೂ ಡಿಫರೆಂಟಾಗಿ ತೋರಿಸಿದ್ದೇನೆ. ಮೂರು ವಿಭಿನ್ನ ಶೇಡ್‍ಗಳಲ್ಲಿ ಕೃಷ್ಣ ಕಾಣಿಸಿಕೊಂಡರೆ, ಮಾದಕ ಮದನಾರಿಯಂತೆ ಮಿಲನಾ ಮಿಂಚಿದ್ದಾರೆ. ರಿಲೀಸ್ ಆಗಿರುವ ಟ್ರೇಲರ್ ನೋಡಿದರೆ ಗೊತ್ತಾಗುತ್ತೆ ನಿಧಿ ಎಷ್ಟು ಬೋಲ್ಡ್ ಅಂಡ್ ಬ್ಯೂಟಿಫುಲ್ ಅನ್ನೋದು. ಇನ್ನೊಂದು ವಿಶೇಷ ಅಂದರೆ ನಮ್ಮ ಸಿನಿಮಾ ನಟಿ ಬೃಂದಾ ಮೇಲೆ ಹುಡುಗರಿಗೆ ಕ್ರಷ್ ಆಗುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ರಿಲೀಸ್ ಆದ್ಮೇಲೆ ಬೃಂದಾ ಕರ್ನಾಟಕದ ಕ್ರಷ್ ಆಗ್ತಾರೆ ಅದ್ರಲ್ಲಿ ಎರಡು ಮಾತಿಲ್ಲ ಎಂದರು.
ಶಶಾಂಕ್ ನಿರ್ದೇಶನದ ಎಲ್ಲಾ ಸಿನಿಮಾಗಳಂತೆ ಇಲ್ಲಿಯೂ ಒಂದು ಕ್ಯೂಟ್ ಲವ್‍ಸ್ಟೋರಿನಾ ಕಾಣಬಹುದು. ಡಾರ್ಲಿಂಗ್, ಬೃಂದಾ ಫಸ್ಟ್ ಟೈಮ್ ಸ್ಕ್ರೀನ್ ಶೇರ್ ಮಾಡಿದ್ರೂ `ಶಿವಾನಿ’ ಹಾಡಿನ ಮೂಲಕ ಪಡ್ಡೆಹುಡುಗರ ತಲೆಕೆಡಿಸಿದ್ದಾರೆ. ರಂಗಾಯಣ ರಘು ಹಾಗೂ ಸುಧಾ ಬೆಳವಾಡಿಯವರು ಫ್ಯಾಮಿಲಿ ಆಡಿಯನ್ಸ್ ನ ಅಟ್ರ್ಯಾಕ್ಟ್ ಮಾಡ್ತಿದ್ದಾರೆ. ನಾಗಭೂಷಣ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಇದೊಂದು ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ.
ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎನಲ್ಲೂ ಬಿಡುಗಡೆಯಾಗ್ತಿದೆ. ಆರ್ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಬ್ದಾರಿ ಹೊತ್ತಿದೆ. ಜುಲೈ 28ರಂದು ಭರ್ಜರಿಯಾಗಿ ಚಿತ್ರ ರಿಲೀಸ್ ಮಾಡುವ ಪ್ಲ್ಯಾನ್ ರೂಪಿಸಿದೆ. ಈ ಮಧ್ಯೆ ನಿರ್ದೇಶಕ ಶಶಾಂಕ್ ಅವರಿಗೆ `ಕೆ’ ಅಕ್ಷರ ಕೈ ಹಿಡಿಯುತ್ತಾ ಎನ್ನುವ ಕುತೂಹಲದ ಪ್ರಶ್ನೆಯೊಂದು ಮೂಡಿದೆ. ಕೃಷ್ಣನ್ ಲವ್‍ಸ್ಟೋರಿ, ಕೃಷ್ಣಲೀಲಾ ಕೈ ಹಿಡಿದಂತೆ `ಕೆ’ ಅಕ್ಷರದಿಂದ ಶುರುವಾಗುವ `ಕೌಸಲ್ಯ ಸುಪ್ರಜಾ ರಾಮ’ ಚಿತ್ರವೂ ಕೈ ಹಿಡಿಯಬಹುದಾ? ಮೊಗ್ಗಿನ ಮನಸ್ಸು ಡೈರೆಕ್ಟರ್ ಗೆ ಅದೃಷ್ಟ ಖುಲಾಯಿಸಬಹುದಾ? ಹೀಗೊಂದು ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. ಅಂದ್ಹಾಗೇ, `ಕೆ’ ಅಕ್ಷರದ ಕೆಜಿಎಫ್, ಕಾಂತಾರ ಸಿನಿಮಾಗಳು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ವು. ಹೀಗಾಗಿ, `ಕೆ’ ಅಕ್ಷರದ `ಕೌಸಲ್ಯ ಸುಪ್ರಜಾ ರಾಮ’ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿ ಕಾಯುವಂತೆ ಮಾಡಿದೆ.
Web Stories