ಸ್ಯಾಂಡಲ್‌ವುಡ್ (Sandalwood) ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಉಪೇಂದ್ರ ನಟನೆಯ ಬುದ್ಧಿವಂತ 2 ಸಿನಿಮಾ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ಕಬ್ಜ’ ಬಳಿಕ ಬುದ್ಧಿವಂತನಾಗಿ ಮಿಂಚಲು ಉಪ್ಪಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ಪತ್ನಿ ಕಡೆಯಿಂದ ತಮನ್ನಾಗೆ 2 ಕೋಟಿ ರೂ. ವಜ್ರದುಂಗುರ ಗಿಫ್ಟ್
Advertisement
‘ಕಬ್ಜ’ ಸಿನಿಮಾ ಸಕ್ಸಸ್ ನಂತರ ಬುದ್ಧಿವಂತ 2, ಯುಐ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಉಪ್ಪಿ ಬ್ಯುಸಿಯಾಗಿದ್ದಾರೆ. 2008ರಲ್ಲಿ ಬುದ್ಧಿವಂತ ಸಿನಿಮಾ ಫ್ಯಾನ್ಸ್‌ಗೆ ಇಷ್ಟವಾಗಿತ್ತು. ಉಪೇಂದ್ರ ನಟನೆ, ಬುದ್ಧಿವಂತಿಕೆ ಪ್ರೇಕ್ಷಕರಿಗೆ ಹಿಡಿಸಿತ್ತು. ಇದೀಗ ಅದೇ ಟೈಟಲ್‌ನೊಂದಿಗೆ ಡಿಫರೆಂಟ್ ಆಗಿರೋ ಕಥೆ ಹೇಳೋದಕ್ಕೆ ಉಪ್ಪಿ ಸಜ್ಜಾಗಿದ್ದಾರೆ. ಬುದ್ಧಿವಂತ ಪಾರ್ಟ್ 2 ಬಗ್ಗೆ ಈ ಹಿಂದೆ ಅನೌನ್ಸ್ ಮಾಡಲಾಗಿತ್ತು. ರಿಲೀಸ್ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಡಿದ್ದಾರೆ.
Advertisement
Advertisement
ಸೆಪ್ಟೆಂಬರ್ 18ಕ್ಕೆ ಉಪೇಂದ್ರ ಅವರ ಹುಟ್ಟಿದ ಹಬ್ಬವಾಗಿದ್ದು, ಮೂರು ದಿನ ಮುಂಚಿತವಾಗಿಯೇ ಉಪ್ಪಿ ನಟನೆಯ ಬುದ್ಧಿವಂತ 2 ಸಿನಿಮಾದ ತೆರೆಗೆ ಅಪ್ಪಳಿಸಲಿದೆ. ಸೆಪ್ಟೆಂಬರ್ 15ಕ್ಕೆ ‘ಬುದ್ಧಿವಂತ 2’ (Buddivanta 2) ಸಿನಿಮಾ ತೆರೆಗೆ ಬರಲಿದೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಉಪ್ಪಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
Advertisement
ಭಿನ್ನ ಪಾತ್ರದಲ್ಲಿ ಉಪೇಂದ್ರ ಅವರು ನಟಿಸಿದ್ದಾರೆ. ಜೈ ದೇವ್ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. 2008ರ ಬುದ್ಧಿವಂತ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಉಪ್ಪಿ ನಯಾ ಅವತಾರ ಯಾವ ರೀತಿ ಮೋಡಿ ಮಾಡಲಿದೆ ಕಾದುನೋಡಬೇಕಿದೆ.